“ಸ್ವಾತಂತ್ರ್ಯದ ಸಂಭ್ರಮ”…..

ಭಾರತೀಯರ ಪಾಲಿನ ಸಂಭ್ರಮದ ಸುದಿನ




ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಯುವ
ದಿನ
ದೇಶ ಪ್ರೇಮವ ಇಮ್ಮಡಿಗೊಳಿಸುವ ದಿನ
ಸ್ವಾತಂತ್ರ್ಯಪಡೆದುಕೊಂಡ ಈ ಶುಭ ದಿನ
ಹಲವಾರು ಮಹಾತ್ಮರು ಹೋರಾಡಿಹರು
ರಕ್ತದ ಹನಿ ಹನಿಯಲಿ ಹುತಾತ್ಮರ ಹೆಸರು
ಭಾರತ ಮಾತೆಯ ಮಡಿಲು ಸೇರಿಹರು
ಸ್ವಾತಂತ್ರ್ಯದ ದಾರಿ ತೋರಿದರು
ಎಲ್ಲರ ಪ್ರೀತಿಸುತ ಸಮರಸದಿ ಬಾಳೋಣ
ಅನುದಿನ ಭಾರತಾಂಬೆಗೆ ಜೈಕಾರ ಹಾಕೋಣ
ದೇಶದೆಲ್ಲೆಡೆ ಜ್ಯೋತಿಯ ಬೆಳಗೋಣ
ಸ್ವಾತಂತ್ರ್ಯ ದಿನವನ್ನು ಸಂಭ್ರಮಿಸೋಣ
ಭಾರತಮಾತೆಗೆ ಜೈ ಘೋಷ ಹಾಕುತಾ
ಹೋರಾಟಗಾರರನ್ನು ನಾವಿಂದು ಸ್ಮರಿಸುತಾ
ಮೂರು ಬಣ್ಣಗಳಲ್ಲೇ ನೂರು ಭಾವಗಳ
ತೋರುತಾ
ವಿವಿಧತೆಯಲ್ಲಿ ಏಕತೆಯನ್ನು ಕಾಣುತಾ
ತ್ಯಾಗ ಬಲಿದಾನದಿ ಬಂದ ಸ್ವಾತಂತ್ರ್ಯ
ಭಾರತೀಯರ ಒಗ್ಗಟ್ಟಿನ ಕೊಂಡಿ ಸ್ವಾತಂತ್ರ
ನೂರಾರು ವರ್ಷಗಳ ಹೋರಾಟದ ಫಲ
ಸ್ವಾತಂತ್ರ್ಯಸಾವಿರಾರು ಕಲೆಗಳು ಇನಿಯ ಧ್ವನಿ
ಸ್ವಾತಂತ್ರ
ಕು. ಜ್ಯೋತಿ ಆನಂದ ಚಂದುಕರ
ಬಾಗಲಕೋಟ-9980180487