ತಾಲೂಕ ಆಡಳಿತಾ ವತಿಯಿಂದ – ಸಾಧಕರಿಗೆ ಸನ್ಮಾನ.
ಆಲಮೇಲ ಆ.16

ಪೊಲೀಸ್ ಠಾಣೆಯ ಪಿ.ಎಸ್.ಐ ಅರವಿಂದ್ ಅಂಗಡಿ ಮತ್ತು ಪತ್ರಿಕ ರಂಗದಲ್ಲಿ ಹಿರಿಯ ಪತ್ರಕರ್ತರಾದ ಮಡಿವಾಳಪ್ಪ.ದೇವಪ್ಪಗೌಡ ಪಾಟೀಲ ಗಾಂಧಿ ಗೌಡ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸ್ನೇಹಕ್ಕೆ ಸಂಜೀವಿನಿ ಪ್ರೀತಿಯಲ್ಲಿ ಪವಿತ್ರ ಹೃದಯ ಶ್ರೀಮಂತಿಕೆ ಕರ್ತವ್ಯದಲ್ಲಿ ದಕ್ಷ ಪ್ರಾಮಾಣಿಕ ಅಧಿಕಾರಿಯಾದ ಆಲಮೇಲ ಠಾಣೆಯ ಪಿ.ಎಸ್.ಐ ಅರವಿಂದ್ ಅಂಗಡಿ ಅವರಿಗೆ ಸ್ವಾತಂತ್ರ್ಯ ದಿನದಂದು ಅವರ ಕರ್ತವ್ಯ ನಿಷ್ಠೆ ಪ್ರಾಮಾಣಿಕತೆಯನ್ನು ಗುರುತಿಸಿ ತಾಲೂಕ ಆಡಳಿತಾ ಆಲಮೇಲ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಹಿರಿಯ ಜೀವಿ ಮಡಿವಾಳಪ್ಪ ದೇವಪ್ಪಗೌಡ.ಪಾಟೀಲ. ಗಾಂಧಿ ಗೌಡರೆಂದು ಚಿರ ಪರಿಚಿತರಾಗಿ ಪತ್ರಿಕೆ ರಂಗದಲ್ಲಿ ತಮ್ಮದೇ ಆದ ಹೆಸರು ಮಾಡಿ ಹಿರಿಯರಲ್ಲಿ ಹಿರಿಯರಾಗಿ ಕಿರಿಯರಲ್ಲಿ ಕಿರಿಯರಾಗಿ ಪ್ರೀತಿಯಿಂದ ಮಾತನಾಡುವ ಸದಾ ನಗಿಸಿ ನಗುತ್ತಾ ಪ್ರೀತಿಯಿಂದ ಮಾತನಾಡುವುದು ಮೃದು ಸ್ವಭಾವದ ಹಿರಿಯ ಜೀವಿ ಗಾಂಧಿ ಗೌಡರು. ಬರವಣಿಗೆಯಲ್ಲಿ ಪ್ರತಿಯೊಬ್ಬರ ಮನ ಗೆದ್ದ ಹಿರಿಯ ಪತ್ರಕರ್ತರಿಗೆ ತಾಲೂಕ ಆಡಳಿತ ಆಲಮೇಲ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯೆಂದು ಗೌರವಿಸಿ ಸನ್ಮಾನಿಸಲಾಯಿತು.
ವರದಿ:ಬಸವರಾಜ.ಪಡಶೆಟ್ಟಿ.ಆಲಮೇಲ