ಶ್ರೀಶಾರದಾಶ್ರಮ ದಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ – ವಿದ್ಯಾರ್ಥಿ ವೇತನ ವಿತರಣೆ.
ಚಳ್ಳಕೆರೆ ಆ.19

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ವತಿಯಿಂದ ಶ್ರೀಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯ ಹತ್ತು ಜನ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ 3000 ಸಾವಿರ ರೂಪಾಯಿ ಯಂತೆ “ವಿದ್ಯಾರ್ಥಿ ವೇತನ” ವನ್ನು ಹೊಸಪೇಟೆಯ ಶ್ರೀರಾಮಕೃಷ್ಣ ಗೀತಾಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಸುಮೇಧಾನಂದಜೀ ಮಹಾರಾಜ್ ಅವರು ವಿತರಿಸಿದರು.

ಈ ಸಂದರ್ಭದಲ್ಲಿ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ, ಶಿಕ್ಷಕರಾದ ಎನ್.ಟಿ ನಾಗೇಶ್, ಸದ್ಭಕ್ತರಾದ ಶ್ರೀಮತಿ ಜಿ.ಯಶೋಧಾ, ಪ್ರಕಾಶ್, ಲಕ್ಷ್ಮೀ, ಯತೀಶ್ ಎಂ ಸಿದ್ದಾಪುರ, ಮಾಣಿಕ್ಯ ಸತ್ಯನಾರಾಯಣ, ಗೀತಾ ನಾಗರಾಜ್, ಗೀತಾ ವೆಂಕಟೇಶರೆಡ್ಡಿ,

ವನಜಾಕ್ಷಿ ಮೋಹನ್, ಸಿ.ಎಸ್ ಭಾರತಿ, ಉದಯ್, ಸಂತೋಷ್, ಕೆ.ಎಸ್ ವೀಣಾ, ವಿದ್ಯಾರ್ಥಿಗಳಾದ ನಿತಿನ್, ಭರತ್, ಕಿರಣ್, ಶ್ರೇಯಾ, ಮಾನಸ, ಅಮೃತ, ದಿವಾಕರ್, ಪ್ರೀತಮ್, ನಿಖಿತ, ಹರೀಶ್, ಸೇರಿದಂತೆ ಸದ್ಭಕ್ತರು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.