ಮೂಲಭೂತ ಸೌಕರ್ಯಗಳನ್ನು ಒದಗಿಸಲು – ಗ್ರಾಮಸ್ಥ ರಿಂದ ಆಗ್ರಹ.
ಲೋಟ್ಟನಕೇರಿ ಆ.21

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಲೋಟ್ಟನಕೇರಿ ಗ್ರಾಮದಲ್ಲಿ ಹೊಸ ಕ್ಯಾಂಪ್ ಆಗಿ ಸುಮಾರು 15 ವರ್ಷ ಆದರು ಯಾವುದೇ ರೀತಿಯಾದ ಸಿ.ಸಿ ರೋಡ್ ಮತ್ತು ಒಳ ಚರಂಡಿ ಇಲ್ಲದ ಕಾರಣ ಜನ ಸಾಮಾನ್ಯರಿಗೆ ನಡೆದಾಡಲು ಹಾಗೂ ಶಾಲೆಗೆ ಹೋಗುವಂತ ವಿದ್ಯಾರ್ಥಿಗಳಿಗೆ ವಯಸ್ಸಾದ ವೃದ್ಧರಿಗೆ ತೊಂದರೆ ಆಗುತ್ತಿದೆ ಮತ್ತು ಒಳ ಚರಂಡಿ ವ್ಯವಸ್ಥೆ ಇಲ್ಲದೆ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು.

ಮತ ಕ್ಷೇತ್ರದ ಶಾಸಕರೇ ಹಾಳು ಕೊಂಪೆಯಾದ ಈ ಲೋಟ್ಟನಕೇರಿ ಕುಗ್ರಾಮಕ್ಕೆ ಆದಷ್ಟು ಬೇಗ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸಿರಿ…..
ಹಾಗೂ ಮತ್ತೊಂದು ಸಮಸ್ಯೆ ಎಂದರೆ ಇಲ್ಲಿ ಸುಮಾರು 55 ಮನೆಗಳಿದ್ದು ಇಲ್ಲಿ ವಿದ್ಯುತ್ ಕಂಬಗಳು ಇಲ್ಲದೆ ವಿದ್ಯುತ್ ತೊಂದರೆ ಉಂಟಾಗುತ್ತಿದೆ. ಈ ಕ್ಯಾಂಪಿಗೆ ಯಾವುದೇ ರೀತಿಯಾದ ಸರಕಾರದ ಯೋಜನೆಗಳು ಅನುಷ್ಠಾನ ಗೊಂಡಿಲ್ಲದ ಕಾರಣ ಈ ಕ್ಷೇತ್ರದ ಎಂ.ಎಲ್.ಎ ಆದ ಶ್ರೀ ನೇಮಿರಾಜ್ ನಾಯಕ್ ಅವರು ಎಚ್ಚೆತ್ತು ಕೊಂಡು ಕೊಟ್ಟಿರುವ ಭರವಸೆ ಯಂತೆ ಈ ಕ್ಯಾಂಪನ್ನು ಸಿ.ಸಿ ರೋಡ್ ಮತ್ತು ವಿದ್ಯುತ್ ವ್ಯವಸ್ಥೆಯನ್ನು ಮಂಜೂರು ಮಾಡಿಸಿ ಕೊಡಬೇಕಾಗಿ. ಗ್ರಾಮಸ್ಥರು ತಮ್ಮಲ್ಲಿ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಮೂಲಕ ವಿನಂತಿಸಿ ಕೊಳ್ಳುತ್ತಿದ್ದೇವೆ.