ನಡಹಳ್ಳಿ ನೇರ ಪ್ರಶ್ನೆ – ಶಾಸಕ ನಾಡಗೌಡರಿಗೆ.
ಮುದ್ದೇಬಿಹಾಳ ಆ.31

ತಾಲೂಕಿನ ಆಡಳಿತ ವ್ಯವಸ್ಥೆ ಸತ್ತು ಹೋಗಿದೆಯೇ? ಶಾಸಕ ನಾಡಗೌಡರೆ ನಿಮ್ಮ ಸರ್ಕಾರದ ಆಡಳಿತ ಸತ್ತು ಹೋಗಿದೆಯೇ? ತಾಲೂಕಿನ ಜನತೆಗೆ ಉತ್ತರಿಸಿ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ. ಮಾಜಿ ಶಾಸಕ ಎಸ್ ಪಾಟೀಲ್ ನಡಹಳ್ಳಿ ಆಗ್ರಹಿಸಿದರು. ತಾಲೂಕಿನ ವೀರೇಶ ನಗರ ಗ್ರಾಮದ ಹತ್ತಿರ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು ಮುದ್ದೇಬಿಹಾಳ ನಗರದಲ್ಲಿ ನ್ಯಾಯಾಧೀಶರ ಮನೆ ಕಳ್ಳತನವಾಗಿದೆ, ಕುಂಚಗನೂರ ಹತ್ತಿರ ಕೃಷ್ಣ ನದಿಯಲ್ಲಿ ಮೊಸಳೆ ದಾಳಿಗೊಳಗಾಗಿ ರೈತನೊಬ್ಬ ಸಾವನ್ನಪ್ಪಿದ್ದರು ಪೊಲೀಸ್ ಇಲಾಖೆ ಅಲ್ಲಗಳೆಯುವಂತೆ ನಡೆದು ಕೊಳ್ಳುತ್ತಿದೆ, ಅರೆ ಮುರಾಳದಲ್ಲಿ ಭಾರಿ ಮಳೆಗೆ ಮನೆ ಕುಸಿದು ನಾಲ್ವರು ಗಾಯ ಗೊಂಡರು ತಕ್ಷಣಕ್ಕೆ ಅಂಬುಲೆನ್ಸ್ ಸೇವೆ ಸಿಗುವುದಿಲ್ಲ. ಅಧಿಕಾರಿಗಳು ಪೊಲೀಸರು ಸ್ಥಳಕ್ಕೆ ಬರುವುದಿಲ್ಲ. ನಾಗದೇನಾಳದ ಹತ್ತಿರ ತೋಳದ ದಾಳಿಗೆ ಕುರಿಗಳು ಸಾವನ್ನಪ್ಪಿದ್ದರು ಮುಂದಿನ ಕ್ರಮಕ್ಕಾಗಿ ಅಗತ್ಯವಿರುವ ಎಫ್.ಐ.ಆರ್ ದಾಖಲಿಸಲು ಪೊಲೀಸರು ಸಮೀಪವೂ ಸುಳಿವುವುದಿಲ್ಲಾ, ಇದೇನಾ ತಾಲೂಕು ಮತ್ತು ಸರ್ಕಾರದ ಆಡಳಿತ ವ್ಯವಸ್ಥೆ ಎಂದು ಪ್ರಶ್ನಿಸಿದರು. ಈ ತಾಲೂಕಿನಲ್ಲಿ ಜನ ಸಾಮಾನ್ಯರು ರೈತರು ನ್ಯಾಯ ಕೇಳದ ಪರಿಸ್ಥಿತಿ ಸೃಷ್ಟಿಯಾಗಿದೆ. ಪೊಲೀಸರಿಂದ ಇವರಿಗೆ ಯಾವುದೇ ನ್ಯಾಯ ದೊರಕುತ್ತಿಲ್ಲಾ, ಜನ ಸಾಮಾನ್ಯರು ಅನ್ಯಾಯ ಕೊಳಗಾಗುತ್ತಿದ್ದಾರೆ ರೈತರು ತೊಂದರೆಯಲ್ಲಿ ಸಿಲುಕಿ ಕೊಂಡಿದ್ದಾರೆ, ಇದನ್ನೆಲ್ಲ ಬಗೆಹರಿಸ ಬೇಕಾದ ಆಡಳಿತ ವ್ಯವಸ್ಥೆ ಸತ್ತು ಹೋಗದಂತೆ ನಡೆದು ಕೊಳ್ಳುತ್ತಿದೆ ಇದೇನಾ ನಿಮ್ಮ ಆಡಳಿತ ವ್ಯವಸ್ಥೆ ಎಂದು ಕಿಡಿ ಕಾರಿದರು. ಪೊಲೀಸ್ ಸೇರಿದಂತೆ ಕೆಲವು ಪ್ರಮುಖ ಇಲಾಖೆಗಳ ಅಧಿಕಾರಿಗಳನ್ನು ದಪ್ಪ ಚರ್ಮದವರು ಎಂದು ಜರಿದ ನಡಹಳ್ಳಿಯವರು ಪೊಲೀಸರಿಂದಲೇ ತಾಲೂಕಿನಲ್ಲಿ ನಡೆಯುತ್ತಿವೆ ಎಂದು ಗಂಭೀರ ಆರೋಪ ಮಾಡಿದ ಅವರು ಇದಕ್ಕೆ ನನ್ನ ಹತ್ತಿರ ದಾಖಲೆ ಇದ್ದು ಅವುಗಳನ್ನು ಎಲ್ಲಿಗೆ ಕಳಿಸಬೇಕು ಅಲ್ಲಿಗೆ ಕಳಿಸಿದ್ದೇನೆ. ಅತಿ ಶೀಘ್ರ ಇದಕ್ಕೆ ಹೊಣೆಗಾರರಾಗಿರುವವರ ತಲೆದಂಡವಾಗಲಿದೆ ಎಂದರು. ನಾಡಗೌಡರ ಆಡಳಿತದಲ್ಲಿ ಅಧಿಕಾರಿಗಳು ದುರಹಂಕಾರಿ ಗಳಾಗಿದ್ದಾರೆ ಎಂದ ಅವರು ಯಾವುದೇ ಅಹಿತಕರ ಘಟನೆ ನಡೆದರೂ ತಕ್ಷಣ ಸ್ಪಂದಿಸಿ ನೊಂದವರಿಗೆ ನ್ಯಾಯ ದೊರಕಿಸಿ ಕೊಡುವ ಮನೋಭಾವ ಇಲ್ಲಿನ ಕೆಲವು ಅಧಿಕಾರಿಗಳಿಗೆ ಇಲ್ಲವಾಗಿದೆ. ರೈತರು ಸೇರಿ ನೊಂದವರು ಸರ್ಕಾರದ ಪರಿಹಾರಕ್ಕಾಗಿ ದಿನವೂ ಎದುರು ನೋಡುವಂತಾಗಿದೆ, ಅಧಿಕಾರಿಗಳು. ಅವರ ಕೈಕೆಳಗಿನವರು ತಕ್ಷಣ ಸ್ಪಂದಿಸಿದರೆ ಪರಿಹಾರ ಬಹುಬೇಗ ಲಭ್ಯವಾಗಿ ನೊಂದವರಿಗೆ ಸ್ವಲ್ಪವಾದರೂ ಆಸರೆ ಆಗಬಹುದು. ಆದರೆ ಈ ತಾಲೂಕಿನಲ್ಲಿ ಇದಾಗುತ್ತಿಲ್ಲ ಎಂದು ಅಸಮಾಧಾನ ತೋರಿ ಕೊಂಡರು, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಎಂ.ಎಸ್ ಪಾಟೀಲ್. ಕೆಂಚಪ್ಪ ಬಿರಾದಾರ್ ಗಿರೀಶ್ ಗೌಡ ಪಾಟೀಲ್ ಹಿರೇಮುರಾಳ್. ರವೀಂದ್ರ ಬಿರಾದಾರ್ . ಮಹಾಂತಗೌಡ ಗಂಗನಗೌಡರ್. ಈರಣ್ಣ ಮುದ್ನೂರ್. ಸಂಗಪ್ಪ ಹಾವರಗಿ. ಭೀಮಣ್ಣ ಗುರಿಕಾರ್. ಭೀಮಣ್ಣ ರಕ್ಕಸಗಿ. ಮಣಿಕಂಠ ಆರೇಶಂಕರ್. ಇನ್ನೂ ಅನೇಕ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ