ಉದ್ಯೋಗ ಮೇಳದಿಂದ ಪ್ರತಿಭೆಗಳು ಬೆಳಕಿಗೆ – ರವಿ ಬೋಸರಾಜು.
ರಾಯಚೂರು ಆ .22

ಎಲ್ಲರಿಗೂ ಸರ್ಕಾರಿ ಉದ್ಯೋಗ ದೊರೆಯುವುದಿಲ್ಲ. ದುಡಿಯುವ ಛಲ ಇರುವವರಿಗೆ ಸರ್ಕಾರಿ ಉದ್ಯೋಗವೇ ಬೇಕು ಎಂದಿಲ್ಲಾ. ಯಾವುದೇ ಕ್ಷೇತ್ರದಲ್ಲಿ ಯಾದರೂ ಉದ್ಯೋಗ ಮಾಡಲು ಸಿದ್ಧರಿರಬೇಕು. ಇಂತಹ ಉದ್ಯೋಗ ಮೇಳದ ಮೂಲಕ ವಿದ್ಯಾರ್ಥಿ ಹಾಗೂ ಯುವಕರಲ್ಲಿರುವ ಪ್ರತಿಭೆ, ಕೌಶಲ್ಯಗಳು ಹೊರ ಬರಲಿವೆ. ಜಿಲ್ಲೆಯಲ್ಲಿಯೇ ಉದ್ಯೋಗ ಸೃಷ್ಠಿಗಾಗಿ ಇಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಮುಖ್ಯಂಮತ್ರಿ ಸೇರಿ ಸಂಬಂದಪಟ್ಟ ಸಚಿವರೊಂದಿಗೆ ಮಾತನಾಡಲಾಗಿದೆ ಎಂದು ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ತಿಳಿಸಿದರು. ರಾಯಚೂರಿನ ಪಂಡೀತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಎನ್.ಎಸ್ ಬೋಸರಾಜು ಫೌಂಡೇಶನ್ ಹಾಗೂ 1 ಎಂ 1 ಬಿ ಸಹಯೋಗದೊಂದಿಗೆ ಆಯೋಜಿಸಿದ್ದ ಔದ್ಯೋಗಿಕ ತರಬೇತಿ ಕಾರ್ಯಗಾರ ಹಾಗೂ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮಲ್ಲಿ ನಿರಂತರ ವಿದ್ಯುತ್ ಉತ್ಪಾದನೆಯಿದೆ, ವಿಶಾಲವಾದ ಭೂ ಪ್ರದೇಶವಿದೆ. ರಾಯಚೂರಿನ ಎಡ ಬಲಕ್ಕೆ ತುಂಗಭದ್ರ ಹಾಗೂ ಕೃಷ್ಣಾ ಎರಡು ನದಿಗಳಿವೆ, ವಿಮಾನ ಯಾನ ಸಂಪರ್ಕವೂ ಪ್ರಗತಿಯಲ್ಲಿರುವುದನ್ನು ವಿವರಿಸಿ ಇಲ್ಲಿ ಕೈಗಾರಿಕೆ ಸ್ಥಾಪಿಸಲು ಎಲ್ಲಾ ಸೌಲತ್ತುಗಳಿವೆ ಎಂದು ಗಮನಕ್ಕೆ ತರಲಾಗಿದೆ. ರಾಯಚೂರಿನಲ್ಲಿ ಹೊಸ ಹೊಸ ಕೈಗಾರಿಕೆ ಕೇಂದ್ರಗಳ ಸ್ಥಾಪನೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು. ನಿರುದ್ಯೋಗ ಸಮಸ್ಯೆ ನಿವಾರಣೆಗೆ, ಯುವ ಜನತೆ ಆರ್ಥಿಕ ಸ್ವಾವಲಂಬನೆ ಸಾಧಿಸಲು ಉದ್ಯೋಗ ಮೇಳಗಳು ಸಹಕಾರಿ ಯಾಗಿವೆ. ರಾಯಚೂರು ಜಿಲ್ಲೆ ಅಭಿವೃದ್ಧಿ ಪಥದತ್ತ ಸಾಗಲು ಹೆಚ್ಚೆಚ್ಚು ಉದ್ಯೋಗ ಅವಕಾಶಗಳು ಸೃಷ್ಟಿಯಾಗಬೇಕು. ಉದ್ಯೋಗ ಸೃಷ್ಠಿಯಿಂದ ಆರ್ಥಿಕ ಬಲ ವರ್ಧನೆಗೆ ಅವಕಾಶ ಸಿಗಲಿದೆ.

ಉದ್ಯೋಗ ಸೃಷ್ಟಿಗೆ ಪೂರಕವಾಗಿ ಆಯೋಜಿಸಿರುವ ಈ ಮೇಳದಲ್ಲಿ ಭಾಗವಹಿಸಿ ಸದುಪಯೋಗ ಪಡೆದು ಕೊಳ್ಳಬೇಕೆಂದು ಉದ್ಯೋಗ ಆಕಾಂಕ್ಷಿಗಳಿಗೆ ತಿಳಿಸಿದರು. ಸುಮಾರು ಎರಡು ದಿನಗಳ ಕಾಲ ತರಬೇತಿಯಂತೆ ದಿನಾಂಕ – 23 ರಂದು ಉದ್ಯೋಗ ಮೇಳವಿರಲಿದೆ ಇದರಲ್ಲಿ ರಾಜ್ಯದ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ. ನಾಳೆಯೂ ತರಬೇತಿ ಹಾಗೂ ನೊಂದಣಿ ಪ್ರಕ್ರಿಯೆ ನಡೆಯಲಿದೆ ಉದ್ಯೋಗ ಆಕಾಂಕ್ಷಿಗಳು ತಮ್ಮ ಅರ್ಹತೆಗೆ ತಕ್ಕ ಕೆಲಸ ಹುಡುಕಿ ಕೊಳ್ಳಬೇಕು ಎಂದು ಫೌಂಡೇಶನ್ ತಿಳಿಸಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅರುಣದೋತರ ಬಂಡಿ, ರಾಕೇಶ ರಾಜಲಬಂಡಿ, ಬೆಂಜಬಿನ್ ಥಾಮಸ್, ಶಾಹಿನ್ ಕಾಲೇಜಿನ ಸೈಯದ್ ಆದಿಲ್, 1 ಎಂ 1 ಬಿ ಸಂಚಾಲಕರಾದ ದೀಪಿಕಾ, ಶೃತಿ, ರಿಸ್ವಾನ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಮರಿಸ್ವಾಮಿ, ಫೈಸಲ್, ಶೈಬಾಜ್, ಶೈಬಾಜ್ ಕ್ಯಾಂಪ್, ಪ್ರತಾಪ, ದೇವರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ