ಬಿಜೆಪಿ ವಿರುದ್ಧ ಯುವ ಕಾಂಗ್ರೆಸ್‌ನಿಂದ – ‘ಸ್ಟಾಪ್ ವೋಟ್ ಚೋರಿ’ ಅಭಿಯಾನ.
ಉಡುಪಿ ಆ.22

ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲೆ ಬಿಜೆಪಿ ದಾಳಿ ನಡೆಸುತ್ತಿದೆ ಎಂದು ಆರೋಪಿಸಿ, ಯುವ ಕಾಂಗ್ರೆಸ್ ಸಮಿತಿ ಆಗಸ್ಟ್ 20, 2025 ರಂದು ಉಡುಪಿಯಲ್ಲಿ “ಸ್ಟಾಪ್ ವೋಟ್ ಚೋರಿ ಸ್ಟಿಕ್ಕರ್” ಅಭಿಯಾನವನ್ನು ನಡೆಸಿತು. ನಕಲಿ ಮತದಾರರ ಪಟ್ಟಿ ಸೃಷ್ಟಿಸಿ, ಚುನಾವಣಾ ಪ್ರಕ್ರಿಯೆಯನ್ನು ಹಳಿ ತಪ್ಪಿಸುತ್ತಿದೆ ಎಂದು ಯುವ ಕಾಂಗ್ರೆಸ್ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ರಾಹುಲ್ ಗಾಂಧಿಯವರ ನಿರ್ದೇಶನದಲ್ಲಿ ಪ್ರತಿಭಟನೆರಾಷ್ಟ್ರ ನಾಯಕ ರಾಹುಲ್ ಗಾಂಧಿಯವರು ಬಹಿರಂಗ ಪಡಿಸಿದ ನಕಲಿ ಮತದಾರರ ಪಟ್ಟಿಯ ಹಗರಣಕ್ಕೆ ಸಂಬಂಧಿಸಿದಂತೆ, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಮಂಜುನಾಥ್ ಎಚ್.ಎಸ್, ಉಡುಪಿ ಯುವ ಕಾಂಗ್ರೆಸ್ ಉಸ್ತುವಾರಿಗಳಾದ ಮಂಜುನಾಥ್ ಚೆಟ್ಟಿ, ಶ್ರೀಮತಿ ಸೋನಿಯಾ ಎಂ, ಹಾಗೂ ಇಮ್ರಾನ್ ಅವರ ಆದೇಶದ ಮೇರೆಗೆ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಜಿಲ್ಲೆಯ ಹಲವು ಕಡೆಗಳಲ್ಲಿ ಪ್ರತಿಭಟನಾಕಾರರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಸ್ಟಿಕ್ಕರ್‌ಗಳನ್ನು ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಮುಖ ಮುಖಂಡರ ಭಾಗಿ ಈ ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಅರ್ಜುನ್ ನಾಯರಿ, ಪ್ರಮೋದ್ ಪೂಜಾರಿ ಸೇರಿದಂತೆ ಹಲವು ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ, ಬಿಜೆಪಿ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಅಭಿಯಾನದಲ್ಲಿ ಭಾಗವಹಿಸಿದವರು:-
ಕಾಂಗ್ರೆಸ್ ಹಿರಿಯ ಮುಖಂಡರಾದ ಅಶೋಕ್ ಕುಮಾರ್ ಕೊಡವೂರು, ಪ್ರಖ್ಯಾತ್ ಶೆಟ್ಟಿ, ರಮೇಶ್ ಕಾಂಚನ್, ರಾಘವೇಂದ್ರ ಶೆಟ್ಟಿ, ವೈ. ಸುಕುಮಾರ್, ಗೋಪಿನಾಥ್ ಭಟ್, ಕಿರಣ್ ಹೆಗ್ಡೆ, ಜ್ಯೋತಿ ಹೆಬ್ಬಾರ್, ಭುಜಂಗ ಶೆಟ್ಟಿ.ಯುವ ಕಾಂಗ್ರೆಸ್ ಮುಖಂಡರಾದ ಅರ್ಜುನ್ ನಾಯರಿ, ಪ್ರಮೋದ್ ಪೂಜಾರಿ, ಮೊಹಮ್ಮದ್ ನಿಯಾಜ್, ಸುದೇಶ್ ಶೆಟ್ಟಿ, ಸೂರಜ್ ಶೆಟ್ಟಿ ನಕ್ರೆ, ಅಕ್ಷಯ್ ಶೆಟ್ಟಿ ಬೈಂದೂರು, ಸಜ್ಜನ್ ಶೆಟ್ಟಿ, ಜೊಯ್ಸನ್ ವೆರೊನ್, ಪರೀಕ್ಷಿತ್ ಪೂಜಾರಿ, ಮಲಿಕ್, ಶರತ್ ನಾಯಕ್ ಕುಕ್ಕೆಹಳ್ಳಿ, ಗೌರೀಶ್ ಕೋಟ್ಯಾನ್, ಅಭಿಜಿತ್ ಪೂಜಾರಿ, ಸ್ಟೀಫನ್ ಪ್ರಖ್ಯಾತ್, ಮಂಜುನಾಥ್ ಜೋಗಿ, ರಕ್ಷಿತ್ ಶೆಟ್ಟಿ, ನೀನಾದ್ ಶೆಟ್ಟಿ, ರಂಜಿತ್, ಸಾಯಿರಾಜ್ ಸುಹಾಸ್ ಕಾವ, ರಂಜಿತ್ ಸಿ.ಟಿ. ಇತರೆ ಪ್ರಮುಖರಾದ ದೀಕ್ಷಿತ್ ದೊಂಡೇರಂಗಡಿ, ಸುಧೀರ್ ಕರ್ಕೇರ, ಮಮತಾ ಶೆಟ್ಟಿ, ಶಾಂತಲತಾ ಶೆಟ್ಟಿ, ಡಾ. ಸುನೀತ, ಸಂದೀಪ್ ಶೆಟ್ಟಿ ಅಜೆಕಾರ್, ರಹೀಂ ಎಣ್ಣಿಹೊಳೆ, ನವೀನ್ ಎನ್. ಶೆಟ್ಟಿ, ಚರಣ್ ವಿಠಲ್, ರಮೀಜ್ ಹುಸೇನ್, ಹಮದ್ ಉಡುಪಿ, ಸಾಯಿರಾಜ್, ಸೌರಭ್ ಬಲ್ಲಾಳ್, ಸುಜನ್ ಶೆಟ್ಟಿ, ಶರತ್ ಕುಂದರ್, ಪ್ರಜ್ವಲ್ ಶೆಟ್ಟಿ, ಸತೀಶ್ ಮೂಳೂರು, ಸುದೀಪ್ ಶ್ರೇಯಾ, ಪ್ರೀತಿ ಸಾಲಿನ್ಸ್, ಪ್ರಭಾಕರ ಆಚಾರ್ಯ, ಅಶ್ವಿನಿ ಬಂಗೇರ, ಶರತ್ ಶೆಟ್ಟಿ, ಅರ್ಚನಾ ದೇವಾಡಿಗ, ಸುಪ್ರೀತಾ ಶಾನಜ್, ಶೋಭಾ ಬೇಕಲ್, ಸುಂದರಿ ಭಾರ್ಗವಿ. ಇವರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ :ಆರತಿ ಗಿಳಿಯಾರು ಉಡುಪಿ