ಜಿ.ಟಿ ದೇವೇಗೌಡ ಎಸ್‌ಸಿ/ಎಸ್‌ಟಿ ವಿರೋಧಿ ಹೇಳಿಕೆ ವಿರುದ್ಧ – ಎಸ್.ಸಿ/ಎಸ್.ಟಿ ಪ್ರಕರಣ ದಾಖಲಿಸಿ, ರಾಜೀನಾಮೆಗೆ – ಕದರವೆ ಯಿಂದ ಆಗ್ರಹ.
ಬಳ್ಳಾರಿ ಆ .22

ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ಈಗ ತಮ್ಮಲ್ಲಿ ಮನವಿ ಮಾಡಿ ಕೊಳ್ಳುವುದು ಏನೆಂದರೆ ವಿಧಾನ ಸಭೆಯಲ್ಲಿ ಮುಂಗಾರು ಅಧಿವೇಶನದಲ್ಲಿ ಸಹಕಾರ ಕ್ಷೇತ್ರದಲ್ಲಿ ಎಸ್ಸಿ/ಎಸ್ಟಿಗಳ ಮೀಸಲಾತಿಯನ್ನು ಜಾರಿಗೆ ತರುವ ವಿಷಯದಲ್ಲಿ ತಕರಾರು ತಂದು ದಲಿತ ವಿರೋಧಿ ನೀತಿಯನ್ನು ಅನುಸರಿಸಿದ ಜಿ.ಟಿ ದೇವೆಗೌಡನನ್ನು ಈ ಕೂಡಲೇ ಪಕ್ಷದಿಂದ ವಜಾ ಮಾಡಿ ಈತನ ವಿರುದ್ಧ ಕಾನೂನಿನ ರೀತ್ಯಾ ಕ್ರಮ ಕೈಗೊಳಲು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಂಕರ್ ನಂದಿಹಾಳ ಆಗ್ರಹಿಸಿದರು. ವಿಧಾನ ಸಭೆಯಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶ್ರೇಯೋಭಿವೃದ್ಧಿಗೆ ಸಹಕಾರ ಕ್ಷೇತ್ರಗಳಲ್ಲೂ ಸಹ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಅಧಿಕಾರವನ್ನು ಪಡೆದುಕೊಂಡು ಸಮ ಸಮಾಜದ ಸಮಾನತೆಗಾಗಿ ಎಲ್ಲರೂ ಸಂವಿಧಾನ ಬದ್ಧವಾಗಿ ಹಕ್ಕನ್ನು ಪಡೆಯುವಂತ ಈ ವಿಷಯವನ್ನು ಮಂಡಿಸಿದ್ದು, ಇದಕ್ಕೆ ವಿರೋಧವಾಗಿ ಎಸ್ಸಿ/ಎಸ್ಟಿ ಸಮುದಾಯದವರು ಬಂದರೆ ಸಹಕಾರ ಕ್ಷೇತ್ರವನ್ನು ಮುಚ್ಚಿಬಿಡ ಬೇಕೆಂದು ದಲಿತರ ಹಕ್ಕುಗಳಿಗೆ ಚ್ಯುತಿ ತಂದಿರುತ್ತಾರೆ. ಹಾಗೂ ಸಂವಿಧಾನದ ಅಡಿಯಲ್ಲಿ ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಿ ಶಿಕ್ಷಣ ಮಂತ್ರಿಗಳಾಗಿ ಸೇವೆ ಸಲ್ಲಿಸಿದ ಇವರು, ಸಮಾನತೆ ಮತ್ತು ಸೌಹಾರ್ದತೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡ ಬೇಕಾಗಿರುತ್ತದೆ. ಆದರೆ ಜಾತಿ ಜಾತಿ ಮಧ್ಯೆ ವಿಷ ಬೀಜವನ್ನು ಬಿತ್ತುತ್ತಾ, ಅಸ್ಪೃಶ್ಯರನ್ನು ಇನ್ನು ಕೆಳಮಟ್ಟಕ್ಕೆ ತಳ್ಳುವ ದುರುದ್ದೇಶದಿಂದ ದಲಿತರನ್ನು ಸಹಕಾರ ಕ್ಷೇತ್ರಕ್ಕೆ ಅವಕಾಶ ಕೊಡದಂತೆ ಈ ರೀತಿಯಾಗಿ ತಡೆಯೊಡ್ಡಿದ್ದಾರೆ ಎಂದರು.ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ರವರು ನೀಡಿರುವ ಸಂವಿಧಾನದ ಆಶಯದಂತೆ 7 ನೇ. ತರಗತಿ ವ್ಯಾಸಂಗ ಮಾಡಿರುವ ಜಿ.ಟಿ ದೇವೆಗೌಡರನ್ನು ಶಾಸಕರಾಗಿ ಶಿಕ್ಷಣ ಮಂತ್ರಿಗಳನ್ನಾಗಿ ಮಾಡಿದ್ದು, ಸಂವಿಧಾನವೇ ಹೊರತು, ಬೇರೆ ಯಾವ ಗ್ರಂಥವೂ ಅಲ್ಲಾ, ಸಂವಿಧಾನದ ಮೂಲ ಉದ್ದೇಶವನ್ನು ಗಾಳಿಗೆ ತೂರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಅಧಿಕಾರ ವಂಚಿತರಾಗಬೇಕು, ಸಮಾನತೆ ಸಿಗದಂತಾಗಬೇಕು, ಆರ್ಥಿಕ ಮತ್ತು ಸಾಮಾಜಿಕವಾಗಿ ಮುಂದುವರೆಯ ಬಾರದೆಂಬ ಆಲೋಚನೆಯಿಂದ ಪರಿಶಿಷ್ಟರಿಗೆ ಮತ್ತು ಪರಿಶಿಷ್ಟ ಪಂಗಡಕ್ಕೆ ಸಹಕಾರ ಕ್ಷೇತ್ರದಲ್ಲಿ ಅವಕಾಶ ನೀಡಬಾರದೆಂದು ವಿರೋಧಿಸಿರುವ ಅಜ್ಞಾನಿ, ಮಾನಸಿಕ ಅಸ್ವಸ್ಥ, ದಲಿತ ವಿರೋಧಿ, ಜಿ.ಟಿ ದೇವೆಗೌಡ ಅವರ ವಿರುದ್ಧ ಎಸ್ಸಿ/ಎಸ್ಟಿ ಹಕ್ಕುಗಳ ಉಲ್ಲಂಘನೆ ಕಾಯ್ದೆಯಲ್ಲಿ ಕೇಸು ದಾಖಲಿಸಿ ಇವರನ್ನು ಬಂಧಿಸಿ, ಇವರಿಂದ ಶಾಸಕತ್ವದ ರಾಜಿನಾಮೆ ಪಡೆದು ಕೊಳ್ಳಬೇಕು ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಮೂಲಕ ಆಗ್ರಹಿಸಿತ್ತೀರುವ ಕೆ.ಶಂಕರ್ ನಂದಿಹಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿಯವರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ತಿಳಿಸಿದ್ದಾರೆ.