ಭೀಮಾ ನದಿಗೆ ಪ್ರವಾಹದ ಭೀತಿ ತಾರಾಪೂರ ಗ್ರಾಮಕ್ಕೆ – ಪಿ.ಎಸ್.ಐ ಅರವಿಂದ್ರ ಅಂಗಡಿ ಭೇಟಿ.
ಆಲಮೇಲ ಆ.22

ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಮಾಣದಲ್ಲಿ ಮಳೆಯಾದ ಕಾರಣ ಉಜ್ಜಿನಿ ಜಲಾಶಯದಿಂದ ಹೆಚ್ಚಿನ ಪ್ರಮಾಣ ನೀರು ಬರುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆಗಾಗಿ ಆಲಮೇಲ ಠಾಣೆಯ ಪಿಎಸ್ಐ ರವೀಂದ್ರ ಅಂಗಡಿ ಇಂದು ತಾರಾಪುರ ಗ್ರಾಮಕ್ಕೆ ಭೇಟಿ ನೀಡಿ ನದಿಯ ದಂಡಿಯಲ್ಲಿರುವ ರೈತರಿಗೆ ನೀರಿನಲ್ಲಿರುವ ಕರೆಂಟ್ ಮೋಟಾರ್ ಗಳು ಪಂಪ ಶೆಟ್ಟಗಳು ತೆಗೆದು ಕೊಳ್ಳಬೇಕೆಂದು ಹಾಗೂ ನದಿಯ ದಂಡಿಗೆ ಮಹಿಳೆಯರು ಮಕ್ಕಳು ಬಟ್ಟಿ ತೊಳೆಯಲು ಹೋಗ ಬಾರದು ಎಂದು ತಿಳಿಸಿ ಹೇಳಿದರು ಹಳೆ ತಾರಾಪುರ ಗ್ರಾಮದಲ್ಲಿ ಇನ್ನೂ ಏಳೆಂಟು ಮನೆ ಇರುವುದರಿಂದ ಕೂಡಲೇ ಪುನರ್ವಸತಿ ಕೇಂದ್ರಕ್ಕೆ ಹೋಗಬೇಕೆಂದು ಹೇಳಿದರು. ಇದೇ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ಇದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ