ಈರುಳ್ಳಿ ಬೆಳೆಗಾರರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆಯ – ಪೂರ್ವಭಾವಿ ಸಭೆ.
ಕೊಟ್ಟೂರು ಆ.23

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ವತಿಯಿಂದ ದಿನಾಂಕ 25 ಆಗಸ್ಟ್ 2025 ರಂದು ಸೋಮವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ. ಕಾರಣ ಅಕಾಲಿಕ ಮಳೆಯಿಂದ ಸುಮಾರು 15 ಸಾವಿರ ಎಕ್ರೆ ಈರುಳ್ಳಿ ಬೆಳೆ ರೋಗಗಳಿಂದ ತುತ್ತಾಗಿ ನಾಶವಾಗಿದೆ ಎಂದು ಪಟ್ಟಣದ ಮಹಾತ್ಮ ಗಾಂಧಿ ಪ್ರತಿಮೆ ಯಿಂದ ಬಸ್ ನಿಲ್ದಾಣದ ವೃತ್ತದ ವರೆಗೆ ಬೃಹತ್ ಪ್ರತಿಭಟನೆಗೆ ಕರ್ನಾಟಕ ರಾಜ್ಯ ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷರಾದ ಕೊಚಾಲಿ ಮಂಜುನಾಥ ಕರೆ ನೀಡಿದ್ದಾರೆ. ಸೋಮವಾರ ದಂದು ವಿಜಯನಗರ ಜಿಲ್ಲೆಯ ಎಲ್ಲಾ ಈರುಳ್ಳಿ ಬೆಳೆಗಾರರು ಹಾಗೂ ಇನ್ನಿತರ ಸಂಘಟನಾಕಾರರು ಸಹಕಾರ ನೀಡಿ ಪ್ರತಿಭಟನೆಯನ್ನು ಯಶಸ್ವಿಯಾಗಿ ನಡೆಸಿ ಕೊಡಲು ನಮ್ಮ ಸುದ್ದಿ ವಾಹಿನಿ ಯೊಂದಿಗೆ ಮನವಿ ಮಾಡಿ ಕೊಂಡರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷರಾದ ಎನ್.ಎಂ ಸಿದ್ದೇಶ್ ಉತ್ತಂಗಿ, ಉಪಾಧ್ಯಕ್ಷರಾದ ಕರಡಿ ಶಾಂತಕುಮಾರ್, ಕೊಟ್ಟೂರು ತಾಲೂಕು ಅಧ್ಯಕ್ಷರಾದ ಯು.ಉಮೇಶ್, ಮಂಜುನಾಥ್ ನಿಂಗನಗೌಡ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು