🚨 BREAKING NEWS, ಮದ್ಯದ ಮಾಫಿಯಾಕ್ಕೆ ಅಬಕಾರಿ ಇಲಾಖೆ ಸಾಥ್? – ಉಡುಪಿಯಲ್ಲಿ ಹಗಲು ದರೋಡೆ..! 🚨
ಉಡುಪಿ ಜ.02

ಕರಾವಳಿಯ ಸಾಂಸ್ಕೃತಿಕ ನಗರಿ ಉಡುಪಿಯಲ್ಲಿ ಈಗ ಮದ್ಯದ ದಂಧೆ ಮಿತಿ ಮೀರಿದೆ. ಜಿಲ್ಲೆಯಾದ್ಯಂತ ಎಂ.ಆರ್.ಪಿ (MRP) ವೈನ್ ಶಾಪ್‌ಗಳು ಹಾಗೂ ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಭಾರಿ ಮಟ್ಟದ ಅಕ್ರಮಗಳು ನಡೆಯುತ್ತಿದ್ದು, ಸಾರ್ವಜನಿಕರು ಲೂಟಿ ಯಾಗುತ್ತಿದ್ದಾರೆ. ಈ ದಂಧೆಯ ಹಿಂದೆ ಅಬಕಾರಿ ಇಲಾಖೆಯ ಅಧಿಕಾರಿಗಳ ಕೈವಾಡವಿದೆ ಎಂಬ ಸ್ಫೋಟಕ ಮಾಹಿತಿ ಈಗ ಹೊರ ಬಿದ್ದಿದೆ.
🛑 ಎಂ.ಆರ್.ಪಿ ಹೆಸರಲ್ಲಿ ಹಗಲು ದರೋಡೆ..!
ನಿಯಮದ ಪ್ರಕಾರ ಪ್ರತಿಯೊಂದು ಬಾಟಲಿಯನ್ನೂ ನಿಗದಿ ಪಡಿಸಿದ ಬೆಲೆಗೆ (MRP) ಮಾರಾಟ ಮಾಡಬೇಕು. ಆದರೆ ಜಿಲ್ಲೆಯ ಬಹುತೇಕ ಶಾಪ್ ಗಳಲ್ಲಿ ಪ್ರತಿ ಬಾಟಲಿಗೆ 10 ರೂ.ನಿಂದ 50 ರೂ.ವರೆಗೆ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ. ಕೇಳಿದರೆ “ಸರ್ವಿಸ್ ಚಾರ್ಜ್” ಎಂಬ ಉಡಾಫೆಯ ಉತ್ತರ ನೀಡಲಾಗುತ್ತಿದೆ. ಗ್ರಾಹಕರಿಗೆ ಅಧಿಕೃತ ಬಿಲ್ ನೀಡದೆ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಮಾಡಲಾಗುತ್ತಿದೆ.
🛑 ಅಬಕಾರಿ ಅಧಿಕಾರಿಗಳ ‘ಹಪ್ತಾ’ ಭಾಗ್ಯ..!

ಈ ಎಲ್ಲಾ ಲೂಟಿಯನ್ನು ತಡೆಯ ಬೇಕಾದ ಅಧಿಕಾರಿಗಳೇ ಈಗ ದಂಧೆಕೋರರೊಂದಿಗೆ ಕೈಜೋಡಿಸಿದ್ದಾರೆ. ಜಿಲ್ಲೆಯ ಪ್ರತಿಯೊಂದು ಮದ್ಯದಂಗಡಿಯಿಂದ ಅಧಿಕಾರಿಗಳು ತಿಂಗಳಿಗೆ ಲಕ್ಷಾಂತರ ರೂಪಾಯಿ ‘ಹಪ್ತಾ’ ವಸೂಲಿ ಮಾಡುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಅಧಿಕಾರಿಗಳು ವಸೂಲಿ ಬಾಜಿಯಲ್ಲಿ ಬಿದ್ದು ಒದ್ದಾಡುತ್ತಿದ್ದು, ಮಾಮೂಲಿ ತಲುಪುವ ಕಾರಣದಿಂದಲೇ ಎಲ್ಲಾ ಅಕ್ರಮಗಳಿಗೆ ಮೌನ ಸಮ್ಮತಿ ನೀಡಿದ್ದಾರೆ.
🛑 ಅಜ್ಜನಟ್ಟ ಆಲದ ಮರವಾದ ಅಧಿಕಾರಿಗಳು:-
ವರ್ಗಾವಣೆಗೆ ಆಗ್ರಹ! ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿ ಅನೇಕ ಅಧಿಕಾರಿಗಳು ‘ಅಜ್ಜನಟ್ಟ ಆಲದ ಮರದಂತೆ’ ವರ್ಷಾನು ಗಟ್ಟಲೆ ಒಂದೇ ಕಡೆ ಅಂಟಿಕೊಂಡು ಕುಳಿತಿದ್ದಾರೆ. ಒಂದೇ ಜಿಲ್ಲೆಯಲ್ಲಿ ದೀರ್ಘಕಾಲ ನೆಲೆಸಿರುವ ಇವರು, ಮದ್ಯದ ಮಾಫಿಯಾದೊಂದಿಗೆ ಗಾಢವಾದ ಸಂಬಂಧ ಹೊಂದಿದ್ದಾರೆ. ಈ ಅಧಿಕಾರಿಗಳನ್ನು ಕೂಡಲೇ ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡದಿದ್ದರೆ ಹಗರಣಗಳ ಸರಣಿ ನಿಲ್ಲಲು ಸಾಧ್ಯವಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
🛑 ಬಾರ್ ಲೈಸೆನ್ಸ್‌ನಲ್ಲಿ ಅಕ್ರಮ ಪಬ್ ಮತ್ತು ಜೂಜಾಟ..!

ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ..i ಕೇವಲ ಮದ್ಯ ಮಾರಾಟವಲ್ಲದೆ, ಇತರೆ ಕಾನೂನು ಬಾಹಿರ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿವೆ.
ಅನಧಿಕೃತ ಪಬ್‌ಗಳು:-
ಸಾಮಾನ್ಯ ಬಾರ್ ಲೈಸೆನ್ಸ್ ಬಳಸಿ ಪಬ್‌ಗಳನ್ನು ನಡೆಸಿ ಮೋಜು-ಮಸ್ತಿ ಮಾಡಲಾಗುತ್ತಿದೆ.
ಜೂಜಿನ ಅಡ್ಡೆ:-
ಬಾರ್ ಗಳ ಒಳಗೆ ‘ಅಂದರ್-ಬಾಹರ್’ ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಎಂ.ಆರ್.ಪಿ ಶಾಪ್‌ಗಳಲ್ಲೇ ಬಾರ್:-
ಮದ್ಯ ಖರೀದಿಸಿ ಮನೆಗೆ ಹೋಗ ಬೇಕಾದ ಜಾಗದಲ್ಲೇ ಕುಳಿತು ಕುಡಿಯಲು ವ್ಯವಸ್ಥೆ ಮಾಡಿ ಕೊಡಲಾಗುತ್ತಿದೆ.
🛑 ಕಲಬೆರಕೆ ಮದ್ಯ:-
ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟ!ಬಾರ್ ಗಳಲ್ಲಿ ದುಬಾರಿ ಬ್ರ್ಯಾಂಡ್ ಬಾಟಲಿಗಳಿಗೆ ಅಗ್ಗದ ಮದ್ಯ ಅಥವಾ ನೀರು ಬೆರೆಸುವುದು, ಎಕ್ಸ್‌ಪೈರಿ ದಿನಾಂಕ ಮುಗಿದ ಬಿಯರ್ ಮಾರಾಟ ಮಾಡುವುದು ಸಾಮಾನ್ಯವಾಗಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಜಿಲ್ಲಾಡಳಿತ ಕಣ್ಣು, ಕಿವಿ ಮತ್ತು ಬಾಯಿ ಮುಚ್ಚಿ ಕುಳಿತಿರುವುದು ಏಕೆ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.
🔥 ಸಾರ್ವಜನಿಕರ ನೇರ ಪ್ರಶ್ನೆ:-
“ಜಿಲ್ಲಾಡಳಿತಕ್ಕೆ ಸಾರ್ವಜನಿಕರ ಹಿತಕ್ಕಿಂತ ಹಪ್ತಾ ನೀಡುವವರ ಹಿತವೇ ಮುಖ್ಯವಾಯಿತೇ? ಈ ಅನಧಿಕೃತ ಅಡ್ಡೆಗಳ ಮೇಲೆ ಮತ್ತು ಭ್ರಷ್ಟ ಅಧಿಕಾರಿಗಳ ಮೇಲೆ ಯಾವಾಗ ದಾಳಿ ನಡೆಯುತ್ತದೆ? ಕೂಡಲೇ ಭ್ರಷ್ಟ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಅಕ್ರಮಗಳಿಗೆ ಕಡಿವಾಣ ಹಾಕದಿದ್ದರೆ ಉಗ್ರ ಪ್ರತಿಭಟನೆ ಖಚಿತ.”
ವರದಿ:ಆರತಿ.ಗಿಳಿಯಾರು.ಉಡುಪಿ

