ಸ್ಥಳೀಯ ಗಾಯಕರಿಗೆ ಹೆಚ್ಚಿನ ಅವಕಾಶ ನೀಡಿ – ಪಂಡಿತ ಅಂಬಯ್ಯ ನೂಲಿ.
ಮಾನ್ವಿ ನ.10

ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್ ಆವರಣದಲ್ಲಿ ಮಾನ್ವಿ ಗಾಯಕರ ಕಲಾ ಬಳಗದ ವತಿಯಿಂದ ನಡೆದ ಕನ್ನಡ ಗಾಯನೋತ್ಸವ ‘ರಸಮಂಜರಿ’ ಕಾರ್ಯಕ್ರಮವನ್ನು ಹಿಂದೂಸ್ಥಾನಿ, ಶಾಸ್ತ್ರೀಯ ಹಾಗೂ ಸುಗಮ ಸಂಗೀತಗಾರರು, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಪಂಡಿತ ಅಂಬಯ್ಯ ನೂಲಿ ಅವರು ಉದ್ಘಾಟಿಸಿದರು.
ಉದ್ಘಾಟಿಸಿ ಮಾತನಾಡಿದ ಅವರು “ಮಾನ್ವಿ ದಾಸರು ಸೇರಿದಂತೆ ತುಂಬಾ ಒಳ್ಳೆಯ ಗಾಯಕರು ಹಿಂದೆ ಬಂದು ಹೋಗಿದ್ದಾರೆ. ಇಂದಿನ ಯುವ ಗಾಯಕರಲ್ಲೂ ಅದೇ ಪ್ರತಿಭೆ ಇದೆ. ಮದುವೆ, ಧಾರ್ಮಿಕ ಹಾಗೂ ಸಾಮಾಜಿಕ ಸಮಾರಂಭಗಳಲ್ಲಿ ಸ್ಥಳೀಯ ಗಾಯಕರಿಗೆ ಹೆಚ್ಚಿನ ಅವಕಾಶ ನೀಡಬೇಕು,” ಎಂದು ಹೇಳಿದರು.

ಈ ಗಾಯನೋತ್ಸವದಲ್ಲಿ ಒಟ್ಟು 32 ಮಂದಿ ಗಾಯಕರು ಚೀಟಿ (ಲಾಟರಿ) ಮೂಲಕ ಆಯ್ಕೆಯಾಗಿದ್ದು, ಪ್ರತಿಯೊಬ್ಬರಿಗೂ ತಮ್ಮ ಪ್ರತಿಭೆ ಪ್ರದರ್ಶನದ ಅವಕಾಶ ಕಲ್ಪಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನರಸಿಂಹ ಕಾತರಿಕಿ ವಹಿಸಿದ್ದರು. ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಮೊಹಮ್ಮದ್ ಮುಜಿಮ್, ರಾಮು ಹೊಳೆಯಪ್ಪನವರ, ಪ್ರಭುರಾಜ ಕೊಡ್ಲಿ, ದೀಪಶ್ರೀ, ಸುರೇಶ ಕುರ್ಡಿ, ಶೇಖ್ ಫರೀದ್ ಉಮ್ರಿ, ಹುಸೇನ್ ಬಾಷಾ (HBM), ಆರ್.ಕೆ ಈರಣ್ಣ, ಸುಬಾನ್ ಬೇಗ್, ಸರ್ವಮಂಗಳ, ರಾಘವೇಂದ್ರ ಚೌಡ್ಕಿ, ಅಜ್ಮಿರ್, ಗಿರೀಶಕುಮಾರ್ ಜೋಷಿ, ಸೈಯಾದ್ ಶಬ್ಬೀರ್, ಶಿವಾನಂದ ನಾಯಕ, ನರಸಿಂಹ ರೆಡ್ಡಿ, ಖಾಜಾ, ಟಿ. ರಮೇಶ ಹಾಗೂ ಅನೇಕ ಗಾಯಕರು ಮತ್ತು ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

