ಧ್ವಜಾರೋಹಣ ನೆರವೇರಿಸಿದ ಅಧ್ಯಕ್ಷೆ – ಮೀನಾಕ್ಷಿ.ಡಿ ರಾಮಕೃಷ್ಣ.
ಮಾನ್ವಿ ಆ.16

ಪಟ್ಟಣದ ಪುರ ಸಭೆಯ ಕಚೇರಿಯಲ್ಲಿ 79 ನೇ. ಸ್ವಾತಂತ್ರ್ಯೋತ್ಸವ ದಿನಾಚರಣೆ ನಿಮಿತ್ತ ಪುರ ಸಭೆ ಅಧ್ಯಕ್ಷೆ ಮೀನಾಕ್ಷಿ.ಡಿ ರಾಮಕೃಷ್ಣ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಪುರ ಸಭೆಯ ಅಧ್ಯಕ್ಷೆ ಮೀನಾಕ್ಷಿ.ಡಿ ರಾಮಕೃಷ್ಣ ಅವರು ಪುರ ಸಭೆಯ ಮುಖ್ಯಾಧಿಕಾರಿ ಪರಶುರಾಮ ದೇವಮಾನೆ ಅವರು ಅಂಬೇಡ್ಕರ್ ಹಾಗೂ ಮಹಾತ್ಮಗಾಂಧಿಜಿ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಸಲ್ಲಿಸಿ ಗೌರವ ಸಲ್ಲಿಸಿದರು.
ಪುರ ಸಭೆಯ ವಿರೋಧ ಪಕ್ಷದ ನಾಯಕ ರಾಜಾ ಮಹೇಂದ್ರನಾಯಕ ಮಾತನಾಡಿ, ರಾಷ್ಟ್ರಕ್ಕೆ ಸ್ವಾತಂತ್ರ್ಯ ಸಿಗಬಕಾದರೆ ಮಹಾನ್ ನಾಯಕರ ಕೊಡುಗೆಯ ಕಾರಣ ಅವರ ವಿಚಾರ ಧಾರೆಯಿಂದ ನಮಗೆ ಮೂಲಭೂತ ಸೌಲಭ್ಯ ಸಿಗಲು ಕಾರಣ ಎಂದು ಮಹಾನ್ ನಾಯಕರ ಗುಣಗಾನ ಮಾಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ