ಅಹಿಂದ ಚಳುವಳಿಯಿಂದ ಅರಣ್ಯ ಇಲಾಖೆ ಭಾದಿತರ ಮತ್ತು ಭೂಮಿ – ಸಮಸ್ಯೆಗಳ ಬಗ್ಗೆ ಬೃಹತ್ ಸಭೆ.
ಶಿವಮೊಗ್ಗ ಆ.23
ಶರಾವತಿ ಯೋಜನಾ ನಿರಾಶ್ರಿತರು, ಅರಣ್ಯ ಇಲಾಖೆ ಭಾದಿತರು, 94 ಸಿ, ಬಗುರ ಹುಕುಂ ಇತರೆ ಭೂ ಹಕ್ಕಿನ ಸಂತ್ರಸ್ತರ ಮತ್ತು ಕಾರ್ಮಿಕರ ಸಮಸ್ಯೆಗಳ ಕುರಿತು ಅವುಗಳ ಪರಿಹಾರಕ್ಕಾಗಿ ಮುಂದಿನ ಹೋರಾಟಗಳನ್ನು ರೂಪಿಸಲು ಪೂರ್ವಭಾವಿ ಸಭೆಯು ಅಹಿಂದ ಚಳುವಳಿಯ ರಾಜ್ಯ ಮುಖ್ಯ ಸಂಚಾಲಕರಾದ ಎಸ್.ಮೂರ್ತಿ ರವರ ಅಧ್ಯಕ್ಷತೆಯಲ್ಲಿ ಶಿವಮೊಗ್ಗದ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು ಜಿಲ್ಲೆಗಳ ಸಂತ್ರಸ್ತರ ಸಮಸ್ಯೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.

ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ರವರು ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಇಲಾಖೆಯಿಂದ ಭಾದಿತರ ಸಮಸ್ಯೆಗಳನ್ನು ಮತ್ತು ಬಗುರ ಹುಕುಂ ಸಾಗುವಳಿದಾರರ ಸಮಸ್ಯೆಗಳನ್ನು 94 ಸಿ ಅರ್ಜಿ ಹಾಕಿರುವ ಸಮಸ್ಯೆಗಳನ್ನು ಈ ಸಭೆಯಲ್ಲಿ ಚರ್ಚಿಸಿದರು. ಅಹಿಂದ ಚಳುವಳಿಯ ಮಹಿಳಾ ಘಟಕದ ರಾಜ್ಯ ಸಂಚಾಲಕಿಯಾದ ಎಂ.ವಿ ಭವಾನಿ ರವರು ಅರಣ್ಯ ಇಲಾಖೆಯಿಂದ ನಿರಾಶ್ರಿತರ ಸಮಸ್ಯೆಗಳನ್ನ ಎದುರಿಸುತ್ತಿರುವ ಅಲೆಮಾರಿ ಸಮುದಾಯಗಳ ಮತ್ತು ಆದಿವಾಸಿಗಳ ಸಮಸ್ಯೆಗಳ ಕುರಿತು ಸುಧೀರ್ಘವಾಗಿ ಚರ್ಚಿಸಿ ಮಾತನಾಡಿದರು ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು