“ಗೋನವಾರದ ಸೈಯದ್ ಹಜರತ್ ಶ್ರೀ ಅಬ್ಬಾಸಲೀ ತಾತ ಚಿರುತಪಲ್ಲಿ”…..

ಸಮಸ್ತ ನಾಡಿನ ಭಕ್ತಾದಿಗಳೇ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸದ್ಗುರು ಶ್ರೀ ಅಬ್ಬಾಸಲೀ ತಾತನವರ ಮೋಹರಂ ಹಬ್ಬದ 40 ದಿನದ ಆರನೇ ವರ್ಷದ ಜಿಯಾರತ ಕಾರ್ಯಕ್ರಮ ಆಂಧ್ರ ಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲೂಕಿನ ಕೌತಾಳಂ ಮಂಡಲಂ ವ್ಯಾಪ್ತಿಯಲ್ಲಿ ಬರುವ ಚಿಕ್ಕ ಹಳ್ಳಿ ಚಿರುತಪಲ್ಲಿ ಗ್ರಾಮದಲ್ಲಿ ಶ್ರೀ ಸೈಯದ್ ಹಜರತ್ ಅಬ್ಬಾಸಲೀ ತಾತನ ದರ್ಗಾದಲ್ಲಿ ವಿಜ್ರಂಭಣೆಯಿಂದ ಇದೆ ತಿಂಗಳ 15-08-2025 ಶುಕ್ರವಾರ ರಂದು ಜರುಗಿರುತ್ತದೆ, ಎಂದು ಹೇಳಲು ತುಂಬಾ ಸಂತೋಷ ವೆನಿಸುತ್ತದೆ.

ದಿ 15-08-2025 ಶುಕ್ರವಾರ ಬೆಳಿಗ್ಗೆ ಗಂಧ ಪೂಜೆ, ನಂತರ ಭಕ್ತರ ಹರಕೆಗಳನ್ನು ಸಲ್ಲಿಸಿ, ದೀಢ ನಮಸ್ಕಾರ ಹಾಕುವ, ಸಕ್ಕರೆ ಓದಿಕಿ ನಡೆಯುತ್ತಿದೆ. ಕ್ಷೇತ್ರದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಜಗದ್ಗುರು ಡಾ, ಗಫೂರ ತಾತನವರ ಪಂಚ ತುಲಾಭಾರಗಳು ನಡೆಯಲಿವೆ 147ನೇ ತುಲಾಭಾರ ಶ್ರೀಮತಿ ನಾಗೇಂದ್ರಮ್ಮ ಗಂಡ ಹುಗ್ಗಿ ಕರಿಯಪ್ಪ ಚಾಣಕನೂರು, ತಾ ಸಿರುಗುಪ್ಪ,148 ನೇ ತುಲಾಭಾರ, ಶ್ರೀಮತಿ ವಿರುಪಮ್ಮ ಗಂಡ ವಿರುಪಣ್ಣ ಕೋರಿ, ಸಾ, ಬದನೇಹಾಳು, ಕೌತಾಳಂ ಮಂ,149 ನೇ. ತುಲಾಭಾರ, ಶ್ರೀಮತಿ ಸುಜಾತ ಗಂಡ ಗಂಗಾಧರಪ್ಪ ಸಾ ಹೆಗ್ಗಡದಿನ್ನಿ, ತಾ ಸಿರವಾರ. 150 ನೇ. ತುಲಾಭಾರ, ಶ್ರೀಮತಿ ಮಾಲ ಈರಮ್ಮ ಗಂಡ ಮಲ್ಲಿಕಾರ್ಜುನ ಸಾ, ಸೂಳೆಕೇರಿ, ಕೌತಾಳಂ ಮಂ,151 ನೇ. ತುಲಾಭಾರ ಶ್ರೀಮತಿ ಅನಂತ ಲಕ್ಷ್ಮಿ ಗಂಡ ರಾಘವೇಂದ್ರ ಸಾ, ಸಿರುಗುಪ್ಪ ಭಕ್ತರಿಂದ ತುಲಾಭಾರ ಸೇವೆ ಮಾಡುವರು, ಪವಿತ್ರ ಶರಣರ ಸ್ಥಳಕ್ಕೆ ಆಗಮಿಸಿ ಶ್ರೀ ಜಗದ್ಗುರು ಡಾ, ಗಫೂರ ತಾತನವರ ಆಶೀರ್ವಚನ ಮತ್ತು ಮಹಾ ಪ್ರಸಾದ ಪಡೆದು ಪುನೀತ ರಾಗಬೇಕೆಂದು ಕೋರುವ.
ಶ್ರೀ ಸದ್ಗುರು ಅಬ್ಬಾಸಲೀ ತಾತ ಗೋನವಾರ ದಿಂದ ಚಿರುತಪಲ್ಲಿಯಲ್ಲಿ ಪ್ರಕಟವಾಗಲು ಕಾರಣ ಏನೆಂದರೆ, ಇದೇ ಗ್ರಾಮದ ಹುಸೇನಪ್ಪ ಎಂಬ ಭಕ್ತ ಸುಮಾರು ಹದಿನೈದು ವರ್ಷಗಳ ಪರ್ಯಂತ ಪ್ರತಿ ಗುರುವಾರ ಮತ್ತು ಪ್ರತಿ ಅಮಾವಾಸ್ಯೆಗೆ ತಪ್ಪದಂತೆ ಮಳೆ ಗಾಳಿ ಬಿಸಿಲು ಎನ್ನದೆ ಛಳಿಯು ಎನ್ನದೆ ನಡೆದುಕೊಂಡು ಸುಮಾರು ನಲವತ್ತೈದು ಕಿ,ಮೀ, ದೂರದಲ್ಲಿರುವ ಸುಕ್ಷೇತ್ರ ಗೋನವಾರಕ್ಕೆ ಬಂದು ಸದ್ಗುರು ಶ್ರೀ ಅಬ್ಬಾಸಲೀ ತಾತನ ದರ್ಶನ ಪಡೆದು ಬರುತ್ತಿದ್ದನು, ಈ ಹುಸೇನಪ್ಪನ ಭಕ್ತಿಗೆ ಮೆಚ್ಚಿ ಸದ್ಗುರು ಅಬ್ಬಾಸಲೀಯು ಆತನಿಗಂಟಿದ ಕಷ್ಟ ಕಾರ್ಪಣ್ಯಗಳನ್ನು ಕಳೆದು ಸಂತಾನ ಸಿರಿ ಸುಖವನ್ನಿತ್ತು ಕಾಪಾಡಿದನು.

ಈ ಮೊದಲು ಈತನಿಗೆ ಕಡು ಬಡತನದಲ್ಲಿ ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳು ಇದ್ದರು, ಎಲ್ಲಾರಿಗೂ ಮದುವೆ ಮಾಡಿದನು, ಮದುವೆ ಸಾಲ ತೀರಿಸಲು ಸಾಧ್ಯವಿಲ್ಲದೆ ದುಃಖಿಸಿದನು ಮತ್ತು ತಾತನವರಲ್ಲಿ ತಮ್ಮ ತಾಪತ್ರಯ ಹೇಳಿಕೊಂಡರು ಏನು ಪ್ರಯೋಜನವಾಗಿರಲಿಲ್ಲ, ಈ ದಂಪತಿಗಳು ಮರ್ಯಾದಿಗೆ ಅಂಜಿದರು ಅಳುಕಿದರು, ಸಾಲಗಾರರ ಕಾಟಕ್ಕೆ ಹೊಲ ಮನೆ ಮಾರಿ ಸಾಲ ತೀರಿಸಿ ಆತ್ಮಹತ್ಯೆಗೆ ಶರಣಾಗಲು ನಿರ್ಧರಿಸಿದರು. ಹೀಗಂತ ಕುಟುಂಬ ಸಮೇತರಾಗಿ ಸುಕ್ಷೇತ್ರ ಗೋನವಾರಕ್ಕೆ ಬಂದು ತಾತನವರ ಹತ್ತಿರ ಎಲ್ಲಾ ಸಂಕಷ್ಟಗಳನ್ನು ತೋಡಿ ಕೊಂಡರು ದುಃಖಿಸಿದರು, ಈಗ ನಮಗೆ ಉಳಿದಿರೋದು ಸಾಯೋದೊಂದೆ ಪರಿಹಾರಪ್ಪ ಯಪ್ಪಾ ಎಂದು ಗಟ್ಟಿಯಾಗಿ ಪಾದ ಹಿಡಿದು ಬೇಡಲು ಸದ್ಗುರುವಿನ ಮನಸ್ಸು ಕರಗಿ ನೀರಾಗಿ ನಂಬಿದ ಭಕ್ತರನ್ನು ಉದ್ಧಾರಕ್ಕಾಗಿ ಪಣತೊಟ್ಟು ನಿಂತನು, ಭಕ್ತರನ್ನು ಮೇಲೆತ್ತಿ ಸಂತೈಸಿ ಹೃದಯ ತುಂಬಿ ಆಶೀರ್ವಾದಿಸಿದನು “ಹೊಲ ಮಾರುವುದು ಬ್ಯಾಡಂತಾನ ಅಪ್ಪ, ಈ ವರ್ಷ ಈರುಳ್ಳಿ ಹಚ್ಚು ಅಂತಾನ” ಎಂದು ಹಾರೈಸುತ್ತಾರೆ.ಅಪ್ಪನವರು ಹೇಳಿದಂತೆ ಈರುಳ್ಳಿ ಹಚ್ಚಿದರು, ಆ ವರ್ಷ ಬೆಳೆ ಚೆನ್ನಾಗಿ ಬಂದು, ಅಧಿಕ ಇಳುವರಿ ಬಂದಿದೆ, ತಾತನವರ ವಾಣಿಯಂತೆ ಎಲ್ಲಾ ನೆರವೇರಿತ್ತು, ಹುಸೇನಪ್ಪ ಈರುಳ್ಳಿ ಕಿತ್ತು ರಾಸಿ ಮಾಡಿದನು, ಆ ಸಮಯದಲ್ಲಿ ಶ್ರೀಗಳು ಇರಾಕ್ ನಲ್ಲಿ ಸದ್ಗುರುವಿನ ಸನ್ನಿಧಿಗೆ ಕರ್ಬುಜ್ ತಂದಿದ್ದರು, ಫೋನ್ ಮಾಡಿ ಹುಸೇನಪ್ಪನಿಗೆ ಈಗ ಈರುಳ್ಳಿ ಮಾರಲು ಹೇಳಿದರು, ಅಪ್ಪ ಹೇಳಿದಂತೆ ಮಾರಿ ಅಧಿಕ ಲಾಭ ಬಂದು, ಸಾಲದಿಂದ ಮುಕ್ತರಾಗಿ ಸದ್ಗುರುವಿನ ಮಹಾತ್ಮೆ ಕೊಂಡಾಡಿದರು.

ಶ್ರೀ ಸದ್ಗುರು ಅಬ್ಬಾಸಲೀ ತಾತನ ಇಲ್ಲಿ ಬಂದು ನೆಲೆಸಲು ಕಾರಣ,ಇದೇ ಹುಸೇನಪ್ಪನ ಹೊಲದಲ್ಲಿ ನೀರು ಹಾಯಿಸುವಾಗ ರಾತ್ರಿ ಹೊಲದಲ್ಲಿ ದೊಡ್ಡ ಬಂಡೆ ಕಲ್ಲಿನ ಮೇಲೆ ಮಲಗುತ್ತಿದ್ದರು, ಹೀಗೆ ಮಲಗಿದವರಿಗೆ ಏನೋ ಕೆಂಜುಗಳು ಕಡಿದಂತೆ ನಿದ್ರೆ ಮಾಡಲು ಆಗುತ್ತಿರಲಿಲ್ಲ, ಮನೆಯಲ್ಲಿ ಯಾರೂ ಮಲಗಿದರು ಹಾಗೆಯೇ ಆಗಿತು, ಹೀಗೆ ತಿಂಗಳು ಕಳೆದಾಗ ತಾತನವರಿಗೆ ತಿಳಿಸಿದ್ದಾರೆ.
ಒಂದು ದಿನ ತಾತನವರು ಸಿಂಧನೂರು ತಾಲೂಕಿನ ತುರವಿಹಾಳ ಗ್ರಾಮದಲ್ಲಿ ಭಕ್ತರ ಮನೆಯಲ್ಲಿ ಪೂಜೆಗೆ ಕುಳಿತ ಸಂದರ್ಭದಲ್ಲಿ, ಚಿರುತಪಲ್ಲಿಯಲ್ಲಿ ಆ ಗುಂಡಿನ ಮೇಲೆ ಭಕ್ತರೊಂದಿಗೆ ಸೇರಿ ಪೂಜೆ ಮಾಡುವಂತೆ ಗೋಚರಿಸುತ್ತದೆ, ಕೂಡಲೇ ತಾತನವರು ಹುಸೇನಪ್ಪನಿಗೆ ಫೋನ್ ಮಾಡಿ ನಡೆದ ಘಟನೆ ವಿಷಯ ತಿಳಿಸಿದರು,”ಅಪ್ಪ ಆ ಗುಂಡು ಬೇಕು ಅಂತಾನೆ” ಎಂದಾಗ ಹುಸೇನಪ್ಪ 30,000 ಸಾವಿರಕ್ಕೆ ಖರೀದಿ ಆಗಿದೆ ಎಂದಾಗ,”ಆ ಗುಂಡಿನ ಮೇಲೆ ಅಪ್ಪನವರು ಒಡೆದು ಮೂಡಿದ್ದಾರೆ ನೋಡು ಎಂದು ಕುರುಹು ತೋರಿದರು” ಒಡನೆಯೇ ಹುಸೇನಪ್ಪ ಗ್ರಾಮದ ಹಿರಿಯರನ್ನು ಮತ್ತು ಮಕ್ಕಳೊಂದಿಗೆ ಹೋಗಿ ನೋಡಿದರೆ ಅಬ್ಬಾಸಲೀ ಪೀರರ ಪಾಂಜಾಗಳು ಮೂಡಿದ್ದು ನೋಡಿ ಮಹಾತ್ಮೆ ಕೊಂಡಾಡಿದರು, ಆಗ ಹುಸೇನಪ್ಪ ಮತ್ತು ಮಕ್ಕಳು ಕಷ್ಟ ಪರಿಹರಿಸಿದ ಆ ಸದ್ಗುರುವಿಗೆ ಒಂದು ಎಕರೆ ಐದು ಗುಂಟೆ ಜಮೀನು ನೀಡಲು ಶ್ರೀ ಸದ್ಗುರು ಅಬ್ಬಾಸಲೀ ತಾತನ ದರ್ಗಾ ನಿರ್ಮಾಣಕ್ಕೆಂದು ಸತಿ ಸುತರೊಡಗೂಡಿ ದಾನವಾಗಿ ನೀಡಿದರು. ಯಾರು ಏನು ಕೊಟ್ಟರೂ ಇರೋದಿಲ್ಲ, ಹರಿದಾಡೋ ಹಣ, ಹರಿದು ಹೋಗುವ ಬಟ್ಟೆ, ಆದರೆ ಹುಸೇನಪ್ಪ ಹರಿಲಾರದ, ಅಳಿಸಲಾಗದ ಭೂಮಿಯನ್ನು ದಾನವಾಗಿ ನೀಡಿ ಸದ್ಗುರು ಅಬ್ಬಾಸಲೀ ತಾತನ ಮಹಿಮೆಯನ್ನು ಗಟ್ಟಿ ಗೊಳಿಸುವ ಮೂಲಕ ದೇವರು ಮತ್ತು ಭಕ್ತರ ನಡುವಿನ ಬಿಡಿಸಲಾಗದ ಭಕ್ತಿಯ ಬೆಸುಗೆ ಬೆಸೆದನು.
ಈ ರೀತಿಯಾಗಿ ಸದ್ಗುರು ಶ್ರೀ ಅಬ್ಬಾಸಲೀ ತಾತನ ಅಪ್ಪಣೆಯಂತೆ ಶ್ರೀ ಜಗದ್ಗುರು ಡಾ ಗಫೂರ ತಾತನವರು ಭಕ್ತರ ಸಹಕಾರದಿಂದ ದರ್ಗಾವನ್ನು ನಿರ್ಮಾಣ ಮಾಡಿದ್ದಾರೆ.ಅಲ್ಲಿಯೂ ಸಹಿತ ಪ್ರತಿ ಹುಣ್ಣಿಮೆಗೆ ಭಕ್ತ ಸಾಗರ ಹರಿದು ಬರುತ್ತದೆ.
ಇಲ್ಲಿ ನಂಬಿ ಬಂದ ಭಕ್ತರಿಗೆ ಅನ್ನ ದಾಸೋಹ ಸೇವೆ ಭಕ್ತರ ಸಹಕಾರದಿಂದ ನೆರವೇರಿಸಲಾಗುತ್ತದೆ, ಈ ಕ್ಷೇತ್ರ ಸುಕ್ಷೇತ್ರವಾಗಿ ಗೋನವರದ ಅಬ್ಬಾಸಲೀ ತಾತನ ದರ್ಗಾ ವೆಂದು ಕರೆಯುತ್ತಾರೆ, ನಂಬಿ ಬಂದ ಭಕ್ತರ ಸಂಕಷ್ಟಗಳನ್ನು ನಿವಾರಿಸುವ ಭವ ರೋಗಕ್ಕೆ ಧನ್ವಂತರಿ ಶಕ್ತಿಯಾಗಿ ಬಂಜೆಯರಿಗೆ ಸಂತಾನ ಭಾಗ್ಯ ಕರುಣಿಸಿದ ಕರುಣಾನಿಧಿ ಯಾಗಿ ಬೇಡಿದವರಿಗೆ ಬೇಡಿದ್ದನ್ನೆಲ್ಲ ನೀಡುವ ಭಗವಂತನಾಗಿ ಭಕ್ತರ ಆರಾಧ್ಯ ದೈವ ವಾಗಿ, ನಿತ್ಯ ಸತ್ಯ,ನಿಜ ಸ್ವರೂಪವಾಗಿ ಚಿರುತಪಲ್ಲಿ ಕ್ಷೇತ್ರ ಸುಕ್ಷೇತ್ರವಾಗಿ ಭಕ್ತರ ಬಾಳಿಗೆ ಬೆಳಕಾಗಿ ಸುತ್ತ ಮುತ್ತಲಿನ ಪರಿಸರದಲ್ಲಿ ಶ್ರೀ ಅಬ್ಬಾಸಲೀ ತಾತನ ಮಹಾತ್ಮೆ ಹರಡುವಂತೆ ಮಾಡಿದ ಶ್ರೀ ಜಗದ್ಗುರು ಡಾ ಗಫೂರ ತಾತನವರ ಶ್ರೀ ಪಾದಾರವಿಂದಗಳಿಗೆ ಇಲ್ಲಿಂದಲೇ ನಮೋ, ನಮೋ, ಎಂದೆನ್ನುವೆ.”ಅಬ್ಬಾಸಲೀ ದೋಸ್ತರೋ ಧಿನ್” ಎಂದು ಮಹಿಮೆಗೆ ಮಂಗಳ ಪಾಡುವೆ ಈ ಲೇಖನವನ್ನು ಶ್ರೀ ಮಹಾಂತಸ್ವಾಮಿ ಉಪ್ರಾಳ ಸಾ ನಲಗಮದಿನ್ನಿ ಕವಿಗಳು ಬರೆದ ಲೇಖನವನ್ನು ಭಕ್ತಿಯಿಂದ ಓದಿದ ಭಕ್ತರಿಗೆ ಆ ಸದ್ಗುರು ಶ್ರೀ ಅಬ್ಬಾಸಲೀ ತಾತ ಆಯುರಾರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥನೆ ಮಾಡುವೆ, ಶರಣು ಶರಣಾರ್ಥಿಗಳು.

ಲೇಖಕರು:ಮಹಾಂತಸ್ವಾಮಿ (ಮಹಾಂತೇಶ) ಉಪ್ರಾಳ
ಸಾ: ನಲಗಮದಿನ್ನಿ ಫೋನ್ ನಂ-8105458745