ಪತ್ರಕರ್ತರ ಹಿತಕ್ಕಾಗಿ 10 ಲಕ್ಷ ಇನ್ಸೂರೆನ್ಸ್ – ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾನ್ವಿ ಆ.25

ಪತ್ರಕರ್ತರ ಭದ್ರತೆಗೆ ಇಂತಹ ಮಹತ್ವದ 10 ಲಕ್ಷ ರುಪಾಯಿ ಇನ್ಸೂರೆನ್ಸ್ ಯೋಜನೆ ಬಹಳ ಶ್ಲಾಘನೀಯ, ಇದು ಇತರೆ ಸಂಘಟನೆಗಳಿಗೆ ಮಾದರಿ ಯಾಗಬೇಕು ಎಂದು ಮಾಜಿ ಶಾಸಕ ಬಸವನಗೌಡ ಬ್ಯಾಗವಾಟ್ ಹೇಳಿದರು.ಪಟ್ಟಣದ ಶಾಸಕರ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ನೂತನ ಅಧ್ಯಕ್ಷ ಪರಶುರಾಮ ಚೌಡ್ಕಿ ರವರ ನೇತೃತ್ವದಲ್ಲಿ ಧ್ವನಿ ಸಂಘಟನೆ ಸದಸ್ಯರಿಗೆ 10 ಲಕ್ಷ ಇನ್ಸೂರೆನ್ಸ್ ಬಗ್ಗೆ ಆಲೋಚನೆ ಮಾಡಿ ಕುಟುಂಬಕ್ಕೆ ಭದ್ರತೆ ನೀಡುವ ಯೋಜನೆ ಹಮ್ಮಿಕೊಂಡಿರುವುದು ಪ್ರಶಂಸನೀಯ ಎಂದರು.ಮಾಜಿ ಶಾಸಕ ಗಂಗಾಧರ ನಾಯಕ ಮಾತನಾಡಿ, ಪತ್ರಕರ್ತರು ಸಿಂಹವಾಗಿ ಗುಡುಗುವ ಶಕ್ತಿ ನಾಲ್ಕನೆ ಅಂಗಕ್ಕೆ ಇದೆ, ಪತ್ರಕರ್ತರು ಯಾವಾಗಲು ನೈಜತೆಯ ಆಲೋಚನೆಯಡಿ ಸುದ್ದಿ ಬರೆದಾಗ ಮಾತ್ರ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಟ್ಟಂತಾಗುತ್ತದೆ ಎಂದರು.ಗ್ರಾಮೀಣ ಭಾಗದಲ್ಲಿ ನಾನಾ ಸಮಸ್ಯೆಗಳಿವೆ. ಆದರೆ ಪತ್ರಕರ್ತರು ಒಂದು ಕಡೆ ವಾಲಿದರೆ ಸಮಾಜಕ್ಕೆ ನ್ಯಾಯ ದೊರಕಿಸಿಡುವ ಸಾಧ್ಯತೆ ಕಡಿಮೆ, ಹೀಗಾಗಿ ಪತ್ರಕರ್ತರು ಖಡಕ್ ಆಗಿ ಸುದ್ದಿ ಬರೆಯುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ಶಿವರಾಜ ನಾಯಕ ಬಲ್ಲಟಗಿ, ಕಾ.ನಿ.ಪ.ಧ್ವನಿ ತಾಲೂಕು ಅಧ್ಯಕ್ಷ ಪರಶುರಾಮ ಚೌಡ್ಕಿ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡ ಖಾಲೀದ್ ಖಾದ್ರಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮಾನ್ವಿ ಘಟಕ ಅಧ್ಯಕ್ಷ ಸುರೇಶ ಕುರ್ಡಿ, ಧ್ವನಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಇಸಾಕ್, ಕಾರ್ಯಕಾರಿ ಸಮಿತಿ ಸದಸ್ಯ ಜಲಾಲುದ್ದೀನ್, ಕರ್ನಾಟಕ ರಾಜ್ಯ ಬೇಡರ ಸಮಿತಿ ರಾಜ್ಯಾಧ್ಯಕ್ಷ ಅಂಬಣ್ಣ ನಾಯಕ ಬ್ಯಾಗವಾಟ್, ಮಸ್ಕಿ ತಾಲೂಕು ಅಧ್ಯಕ್ಷ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಭಾಗಯ್ಯ, ದಲಿತ ಸಾಹಿತ್ಯ ಪರಿಷತ್ ಆರ್.ಕೆ. ಈರಣ್ಣ ಸೇರಿದಂತೆ ಇನ್ನಿತರರಿದ್ದರು.ಕಾರ್ಯಕ್ರಮದಲ್ಲಿ ಜನಪದ ಹೋರಾಟದ ಹಾಡುಗಳ ರಚನೆಕಾರ ಪ್ರಶಾಂತ ದಾನಪ್ಪ ನಿಲೋಗಲ್, ಅಂತರಾಷ್ಟ್ರೀಯ ರಂಗ ಕಲಾವಿದ ಹಾಗೂ ಸಂಶೋಧನೆ ವಿದ್ಯಾರ್ಥಿ ಅರುಣ್ ಕುಮಾರ್ ಚೌಡ್ಡಿ, ಸಾಹಿತ್ಯ, ಗಾಯನ ಕ್ಷೇತ್ರದಲ್ಲಿ ಸಾಧನೆ ಮಾಡಿದ ‘ಸ್ಟಾರ್ ಆಫ್ ಕರ್ನಾಟಕ’ ಪ್ರಶಸ್ತಿ ಪುರಸ್ಕೃತ ಶ್ರೀಮತಿ ನಿಹಾರಿಕ ನಾಯಕ ಚೀಕಲಪರ್ವಿ ಅವರನ್ನು ಸನ್ಮಾನಿಸಲಾಯಿತು.ನೂತನ ತಾಲೂಕ ಪದಾಧಿಕಾರಿಗಳು:-ಗೌರವಾಧ್ಯಕ್ಷ ರಾಘವೇಂದ್ರ ಚೌಡ್ಕಿ, ಅಧ್ಯಕ್ಷ ಪರಶುರಾಮ ಚೌಡ್ಕಿ, ಉಪಾಧ್ಯಕ್ಷ ಹೊನ್ನಪ್ಪ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಹುಸೇನ್ ಭಾಷಾ ನಕ್ಕುಂದಿ, ಖಜಾಂಚಿ ನರಸಿಂಹ ರೆಡ್ಡಿ, ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಚಲ್ಮಲ್, ಕಾರ್ಯದರ್ಶಿ ಬಸವರಾಜ ನಾಯಕ ನೀರಮಾನ್ವಿ, ಸದಸ್ಯರಾದ ಬಸವರಾಜ ನಿಲೋಗಲ್, ಆಂಜನೇಯ್ಯ ನಾಯಕ ನಸಲಾಪೂರು, ಈರಪ್ಪ ನಾಯಕ ದದ್ದಲ್, ಶಷೀ ಚಾಪೂಷ್ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ