ಕರುಣೆಯ ಮೂರುತಿ ಶಾರದೆ – ಮಾತಾಜೀ ತ್ಯಾಗಮಯೀ.
ಚಳ್ಳಕೆರೆ ಆ.25

ಶ್ರೀಮಾತೆ ಶಾರದಾದೇವಿಯವರು ಅವ್ಯಾಜ ಕರುಣಾಮೂರ್ತಿ ಯಾಗಿದ್ದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಹೇಳಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಶ್ರೀಮಾತೆಯವರ ಶಿಷ್ಯರಾದ “ಸ್ವಾಮಿ ಶಾರದೇಶಾನಂದಜೀ ಮಹಾರಾಜರ ಸ್ಮೃತಿಗಳ” ಬಗ್ಗೆ ಪ್ರವಚನ ನೀಡಿದರು.

ಕರುಣೆಯ ಸಾಕಾರ ಮೂರುತಿಯಾಗಿ ಶಾರದಾದೇವಿಯವರು ಸಕಲ ಜೀವಿಗಳ ಮೇಲೆ ಹರಿಸುತ್ತಿದ್ದ ದಯೆ, ಅನುಕಂಪ ಅನಂತವಾದದ್ದು. ಇಂತಹ ಅನೇಕ ಮಹತ್ವದ ಘಟನೆಗಳನ್ನು ಸ್ವಾಮಿ ಶಾರದೇಶಾನಂದಜೀಯವರು ತಮ್ಮ ನೆನಪುಗಳಲ್ಲಿ ತಿಳಿಸಿದ್ದಾರೆ ಎಂದು ಮಾತಾಜೀ ಹೇಳಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ ಮತ್ತು ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು.

ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ರತ್ನಮ್ಮ ಚೆನ್ನಬಸಪ್ಪ,ಮಂಜುಳ ನಾಗರಾಜ್, ವನಜಾಕ್ಷಿ ಮೋಹನ್, ಜಿ.ಯಶೋಧಾ ಪ್ರಕಾಶ್, ಯತೀಶ್ ಎಂ ಸಿದ್ದಾಪುರ, ಮಾಣಿಕ್ಯ ಸತ್ಯನಾರಾಯಣ, ಗೀತಾ ನಾಗರಾಜ್, ಈಶಾನ್ ಗೌತಮ್, ರಶ್ಮಿ ವಸಂತ, ಉಷಾ ಶ್ರೀನಿವಾಸ್, ವೆಂಕಟಲಕ್ಷ್ಮಮ್ಮ, ಪುಷ್ಪಲತಾ, ಸುಮನಾ ಕೋಟೇಶ್ವರ, ಸಿ.ಎಸ್ ಭಾರತಿ, ಸುಧಾಮಣಿ, ಪಂಕಜ ಚೆನ್ನಪ್ಪ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

