ಕಲ್ಮಠ ದಸರಾ ಹಬ್ಬದ ಸುವರ್ಣ ಮಹೋತ್ಸವ ಆಚರಣೆಯ – ಪೂರ್ವಭಾವಿ ಸಭೆ.
ಮಾನ್ವಿ ಆ.26

ಪಟ್ಟಣದ ಶ್ರೀ ಮುಕ್ತ ಗುಚ್ಚ ಬೃಹನ್ಮಠ ಕಲ್ಮಠದಲ್ಲಿ ಶ್ರೀ ಮಠದ ಪರಂಪರೆಯಂತೆ ಆಚರಿಸಲಾಗುವ ದಸರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಬೋಸರಾಜು ಮಾತನಾಡಿ ಪಟ್ಟಣದ ಶ್ರೀ ಮುಕ್ತ ಗುಚ್ಚ ಬೃಹನ್ಮಠ ಕಲ್ಮಠದಲ್ಲಿ ಆಚರಿಸುವ ದಸರಾ ಹಬ್ಬಕ್ಕೆ ವಿಶೇಷವಾದ ಪರಂಪರೆಯಿದ್ದು ಪ್ರತಿ ವರ್ಷವು ಮೈಸೂರಿನಲ್ಲಿ ನಡೆಯುವ ದಸರಾ ಹಬ್ಬದಂತೆ ಮಾನ್ವಿಯಲ್ಲಿಯು ಕೂಡ ನಾಡ. ಹಬ್ಬವಾದ ದಸರಾ ಹಬ್ಬವನ್ನು ಕಲ್ಮಠದ ಲಿಂ.ಶಿವಮೂರ್ತಿ ಶಿವಚಾರ್ಯರ ನೇತೃತ್ವದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ಕಲ್ಮಠದ ದಸರಾ ಹಬ್ಬದ 50 ನೇ. ವರ್ಷದ ಹಬ್ಬವನ್ನು ವಿಶೇಷವಾಗಿ ಶ್ರೀ ಮಠದ ಶ್ರೀಗಳಾದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರ ನೇತೃತ್ವದಲ್ಲಿ 14 ದಿನಗಳ ಕಾಲ ಶ್ರೀ ದೇವಿ ಪುರಾಣ ಹಾಗೂ ನೂತನ ರಜತ ಅಂಬರಿ ಮೆರವಣಿಗೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿ ಅರ್ಥ ಪೂರ್ಣವಾಗಿ ಸ್ಮರಣಿಯಾವಾಗಿ ಹಬ್ಬವನ್ನು ಆಚರಿಸೋಣ ಎಂದು ತಿಳಿಸಿದರು.

ಶ್ರೀ ಮುಕ್ತ ಗುಚ್ಚ ಬೃಹನ್ಮಠ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾ ಸ್ವಾಮಿಗಳು ಮಾತನಾಡಿ ಕಲ್ಮಠದ ವತಿಯಿಂದ ಪ್ರತಿ ವರ್ಷದಂತೆ ದಸರಾ ಹಬ್ಬವನ್ನು ಜಾತಿ, ವರ್ಗ, ರಹಿತವಾಗಿ ಎಲ್ಲಾ ವರ್ಗದವ ರೊಂದಿಗೆ 14 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ವರ್ಷ ಸುವರ್ಣ ದಸರಾ ಮಹೋತ್ಸವ ಹಬ್ಬವನ್ನು ಸ್ಮರಣಿಯ ವಾಗಿಸುವುದಕ್ಕಾಗಿ ಶ್ರೀ ಮಠದಿಂದ ಸೆ. 22 ರಿಂದ 30 ರವರೆಗೆ ಸಂಜೆ 6.30 ರಿಂದ ಶ್ರೀ ದೇವಿ ಪುರಾಣ, ಚಂಡಿಕಾ ಹೋಮ, ಸೆ. 30 ರಂದು ಸರ್ವ ಧರ್ಮ ಸಮ್ಮೇಳನ, ಅ. 3,4,5 ರಂದು ಶ್ರೀಶೈಲ ಜಗದ್ಗರುಗಳ ಸಾನಿಧ್ಯದಲ್ಲಿ ವಿಶೇಷ ಕಾರ್ಯಕ್ರಮ ಅ.6 ರಂದು ಬೆ. 8 ರಿಂದ ಪಂಚಪೀಠಾಗಳ ಜಗದ್ಗರುಗಳ ಅಡ್ಡ ಪಲ್ಲಕ್ಕಿ ಹಾಗೂ ಸುಮಂಗಲಿಯರಿಂದ ಕುಂಭೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದ್ದು ಶ್ರೀ ಮಠದ ಭಕ್ತರು ಹಾಗೂ ಸಾರ್ವಜನಿಕರು ಅಗತ್ಯವಾದ ಸಹಕಾರ ನೀಡುವಂತೆ ಕೋರಿದರು.

ಮಾಜಿ ಶಾಸಕರಾದ ಬಸವನಗೌಡ ಬ್ಯಾಗವಾಟ, ಗಂಗಾಧರ ನಾಯಕ ಮಾತನಾಡಿದರು. ಪೂರ್ವಭಾವಿ ಸಭೆಯಲ್ಲಿ ಕಲ್ಮಠ ಸುವರ್ಣ ದಸರಾ ಮಹೋತ್ಸವದ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷರನ್ನಾಗಿ ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಬೋಸರಾಜು ರವರನ್ನು, ಅಧ್ಯಕ್ಷರಾಗಿ ಶಾಸಕ ಜಿ. ಹಂಪಯ್ಯ ನಾಯಕರನ್ನು ಆಯ್ಕೆ ಮಾಡಲಾಯಿತು.ತಾ. ವೀರಶೈವ ಲಿಂಗಯಾತ ಸಮಾಜದ ಅಧ್ಯಕ್ಷರಾದ ಹರಿಹರ ಪಾಟೀಲ್, ಅ.ಭಾ.ವೀ.ಲಿಂ.ಮಹಾಸಭಾ ತಾ. ಅಧ್ಯಕ್ಷರಾದ ಅರುಣಚಂದಾ, ಸಮಾಜದ ಹಿರಿಯರಾದ ಎ.ಬಿ ಉಪ್ಪಳ ಮಠ ವಕೀಲರು, ತಿಮ್ಮ ರೆಡ್ಡಿ ಭೋಗವತಿ,ಹಿರಿಯ ಪುರಸಭೆ ಸದಸ್ಯರಾದ ಲಕ್ಷ್ಮಿ ದೇವಿ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಗಪೂರ್ ಸಾಬ್, ಪಂಚ ಗ್ಯಾರಂಟಿ ಸಮಿತಿಯ ತಾ. ಅಧ್ಯಕ್ಷ ಬಿ.ಕೆ ಅಂಬರೇಶಪ್ಪ ವಕೀಲರು, ಕೆ.ಶಾಂತಪ್ಪ, ಬಸವರಾಜ ಪಾಟೀಲ್ ಅತನೂರ್, ಮಹಾಂತೇಶಸ್ವಾಮಿ ರೌಡೂರು, ಸಿದ್ದಲಿಂಗಪ್ಪ ವಕೀಲರು, ಕೃಪಾಸಾಗರ ಪಾಟೀಲ್, ಸೈಯದ್ ಖಲಿದ್ ಖಾದ್ರಿ, ಶಿವಪ್ಪ ಗೌಡ ಹಳ್ಳಿ ಹೊಸೂರ್, ಮಲ್ಲನಗೌಡ ನಕ್ಕುಂದಿ, ಶರಣಯ್ಯ ನಾಯಕ್ ಗುಡದಿನ್ನಿ, ರಾಜಾ ಸುಭಾಷ್ ಚಂದ್ರ ನಾಯಕ್, ದೇವೇಂದ್ರಪ್ಪ ಬೊಮ್ಮನಾಳ, ಸಣ್ಣ ಬಸನಗೌಡ ಬ್ಯಾಗವಾಟ್, ಚಾಂದ್ ಪಾಷಾ, ಸತ್ತರ ಬಂಗ್ಲೆವಾಲೆ ಸೇರಿದಮತೆ ಶ್ರೀಮಠದ ಭಕ್ತರು, ಮುಖಂಡರು ಭಾಗವಹಿಸಿದರು.
ಬಾಕ್ಸ್ ನ್ಯೂಸ್:-
ಪಟ್ಟಣದ ಶ್ರೀ ಮುಕ್ತ ಗುಚ್ಚ ಬೃಹನ್ಮಠ ಕಲ್ಮಠದಲ್ಲಿ ಸುವರ್ಣ ದಸರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿಸಚಿವರಾದ ಎನ್.ಎಸ್. ಬೋಸರಾಜು ಮಾತನಾಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

