ಗ್ರಾಮಗಳ ಸುಭಿಕ್ಷೆಗಾಗಿ ಮಹಿಳೆಯರಿಂದ ಸಾಮೂಹಿಕ – ಶ್ರೀ ವರಮಹಾಲಕ್ಷ್ಮೀ ಪೂಜೆ.
ಚಳ್ಳಕೆರೆ ಆ.30





ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳು, ದೊಡ್ಡೇರಿ ಮತ್ತು ಚಳ್ಳಕೆರೆ ವಲಯಗಳ ಸಂಯುಕ್ತಾಶ್ರಯದಲ್ಲಿ ಗ್ರಾಮಗಳ ಸುಭಿಕ್ಷೆಗಾಗಿ ನಗರದ ಅನಂತ ಜೈನ ಭವನದಲ್ಲಿ ಮಹಿಳೆಯರಿಂದ ಸಾಮೂಹಿಕ “ಶ್ರೀವರಮಹಾಲಕ್ಷ್ಮೀ ಪೂಜೆ ಮತ್ತು ಧಾರ್ಮಿಕ ಸಭಾ” ಕಾರ್ಯಕ್ರಮ ನಡೆಯಿತು. ಈ ಪೂಜಾ ಕಾರ್ಯಕ್ರಮದಲ್ಲಿ ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರು ಮತ್ತು ಶಿವನ ಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಪಾಲ್ಗೊಂಡು ವರಮಹಾಲಕ್ಷ್ಮೀ ವ್ರತದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಚಿತ್ರದುರ್ಗದ ಪ್ರಾದೇಶಿಕ ಯೋಜನಾಧಿಕಾರಿ ಶ್ರೀಮತಿ ಗೀತಾ ಬಿ. ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಪಿ.ಎಸ್.ಐ ಶಿವರಾಜ್, ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರದ ಕಾರ್ಯದರ್ಶಿ ಹೆಚ್ ತಿಪ್ಪೇಸ್ವಾಮಿ, ನಗರ ಸಭಾ ಅಧ್ಯಕ್ಷೆ ಶಿಲ್ಪಾ ಮುರಳೀಧರ್, ನಾಮ ನಿರ್ದೇಶಿತ ಸದಸ್ಯರಾದ ನೇತಾಜಿ ಪ್ರಸನ್ನ ಮಾತನಾಡಿದರು.

ಈ ಸಂದರ್ಭದಲ್ಲಿ ವಿನಯ್ ಕುಮಾರ್ ಸುವರ್ಣ, ತಾಲೂಕು ಯೋಜನಾಧಿಕಾರಿ ಶ್ರೀಮತಿ ಶಶಿಕಲಾ,ಮಂಜುಳ ಉಮೇಶ್, ಪತ್ರಕರ್ತ ಬಿ.ವಿ ಚಿದಾನಂದಮೂರ್ತಿ, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ಸೇರಿದಂತೆ ಅಪಾರ ಸಂಖ್ಯೆಯ ಸಂಘದ ಸದಸ್ಯರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.