ಗ್ರಾ.ಪಂ ಸದಸ್ಯರಿಗೆ ಏಡ್ಸ್ ಕುರಿತು – ಮಾಹಿತಿ ಕಾರ್ಯಾಗಾರ.
ಜಕ್ಕಲಿ ಸ.01

ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮ ಪಂಚಾಯಿತಿಯಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಶನ್ ಸೊಸೈಟಿ ಬೆಂಗಳೂರು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಗದಗ, ಹಾಗೂ ತಾಲೂಕ ಪಂಚಾಯಿತಿ ರೋಣ. ತಾಲೂಕು ಆರೋಗ್ಯಧಿಕಾರಿಗಳ ಕಾರ್ಯಾಲಯ. ತಾಲೂಕ ಆಸ್ಪತ್ರೆ ICTC ಕೇಂದ್ರ ರೋಣ. ಮತ್ತು ರೋಣ ತಾಲೂಕಿನ ಆರೋಗ್ಯ ಕೇಂದ್ರಗಳು. ಹಾಗೂ ಗ್ರಾಮ ಪಂಚಾಯಿತಿಗಳು ರೋಣ. ಇವುಗಳ ಸಂಯುಕ್ತ ಆಶ್ರಯದಲ್ಲಿ ಜಕ್ಕಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಪಂ ಸದಸ್ಯರಿಗೆ ಶುಕ್ರವಾರ ಆಪ್ತ ಸಮಾಲೋಚಕರು ಆದ ರೇಷ್ಮಾ ದೇಸಾಯಿ ಯವರ ಉಪಸ್ಥಿತಿಯಲ್ಲಿ ಎಚ್‌ಐವಿ/ಏಡ್ಸ್ ಕುರಿತು ಮಾಹಿತಿ ಕಾರ್ಯಾಗಾರ ನೆರೆವೇರಿತು.ಈ ಕಾರ್ಯಾಗಾರವನ್ನು ಜಕ್ಕಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುವರ್ಣ ಮುತ್ತಪ್ಪ ತಳವಾರ ಉದ್ಘಾಟಿಸಿದರು.ಕಳೆದ ಕೆಲವು ವರ್ಷಗಳಿಂದ ಹೆಚ್ಚು ಎಚ್.ಐ.ವಿ ಏಡ್ಸ್ ಪ್ರಕರಣಗಳು ದಾಖಲಾಗುತ್ತಿವೆ. ಸುಮರು 15-40 ವರ್ಷ ಪ್ರಾಯದವರು ಏಡ್ಸ್‌ಗೆ ಬಲಿಯಾಗುತಿತಿದ್ದು.

ನಮ್ಮ ಗದಗ ಜಿಲ್ಲೆಯಲ್ಲಿ ಪ್ರತಿ ವರ್ಷ 15 ರಿಂದ 20 ಮಂದಿ ಈ ರೋಗಕ್ಕೆ ತುತ್ತಾಗಿ ಸಾವನ್ನಪ್ಪು ತ್ತಿದ್ದಾರೆ. ಹೀಗಾಗಿ ಯುವ ಜನರಲ್ಲಿ ಎಚ್.ಐ.ವಿ ಮತ್ತು ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ರೋಣ ತಾಲೂಕು ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕಿ ರೇಷ್ಮಾ ದೇಸಾಯಿ ಹೇಳಿದರು .ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಎಸ್ ರಿತ್ತಿ. ಗ್ರಾಮ ಪಂಚಾಯಿತಿ ಸದಸ್ಯರು. ಬಿಬಿಜಾನ್.ಟಿ ಕದಡಿ. ಅನ್ನಪೂರ್ಣ.ಬಿ ಮುಗಳಿ. ಶಿವರಾಜ್ ಎಸ್ ಮುಗಳಿ. ಸಂತೋಷ.ಎಂ ಕೋರಿ. ಬಸವರಾಜ ಶಾಶೆಟ್ಟಿ. ಗುರಪ್ಪ ರೋಣದ. ವೀರಪ್ಪ ವಾಲಿ. ಪಂಚಾಯಿತಿ ಬಿಲ್ ಕಲೇಕ್ಟರ್ ಸೋಮಶೇಖರಯ್ಯ ಓದಿಸೋಮಠ. ಗಣಕಯಂತ್ರಕಿ ಶಕುಂತಲಾ ನವಲಗುಂದ.ಸಿಪಾಯಿ ಈರಪ್ಪ ಕಾಳಿ. ವಾಟರ್ ಮ್ಯಾನ್. ರವಿ ಕಿರಣ ಕಮ್ಮಾರ. ಸಂಜು ಕುಮಾರ ತಳವಾರ. ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು.