ದೇವರ ನಾವದಗಿ ಗ್ರಾಮವನ್ನು ಹೋಬಳಿ ಯನ್ನಾಗಿಸ ಬೇಕೆಂದು – ಆಗ್ರಹಿಸಿ ಮನವಿ ಸಲ್ಲಿಸಿದ ಗ್ರಾಮಸ್ಥರು.

ದೇವರ ನಾವದಗಿ ಸ.02

ನೂತನವಾಗಿ ರಚನೆ ಗೊಂಡಿರುವ ಆಲಮೇಲ ತಾಲೂಕಿನಲ್ಲಿ ಬರುವ ದೇವರ ನಾವದಗಿ ಗ್ರಾಮವನ್ನು ಹೋಬಳಿಯನ್ನಾಗಿ ಮಾಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.ಈ ಕುರಿತು ಗ್ರಾಮದ ಹಿರಿಯರೆಲ್ಲರೂ ಸೇರಿ ದೇವರ ನಾವದಗಿ ಗ್ರಾಮವು ಸುತ್ತ ಮುತ್ತಲಿನ 22 ಹಳ್ಳಿಗಳಿಗೆ ಮಧ್ಯವರ್ತಿ ಗ್ರಾಮವಾಗಿದ್ದು, ಸುತ್ತ ಮುತ್ತಲಿನ ಹಲವಾರು ಗ್ರಾಮಗಳಿಗೆ ಕೇಂದ್ರ ಬಿಂದುವಾಗಿದೆ ಸುಮಾರು ಏಳು ಸಾವಿರ ಜನಸಂಖ್ಯೆ ಹೊಂದಿರುವ ದೊಡ್ಡ ಗ್ರಾಮವಾಗಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕಬ್ಬು ಬೆಳೆಯುವ ಪ್ರದೇಶವೆಂದು ಗುರುತಿಸಿ ಕೊಂಡಿದೆ, ಮೂರು ಪ್ರಾಥಮಿಕ ಶಾಲೆಗಳು, ಎರಡು ಪ್ರೌಢ ಶಾಲೆಗಳು, ಒಂದು ಪದವಿ ಪೂರ್ವ ಕಾಲೇಜು ಕಾರ್ಯ ನಿರ್ವಹಿಸುತ್ತಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಗ್ರಾಮ ಪಂಚಾಯತ, ಕರ್ನಾಟಕ ಗ್ರಾಮೀಣ ಬ್ಯಾಂಕ್, ಪಶು ವೈದ್ಯಕೀಯ ಆಸ್ಪತ್ರೆ, ಗ್ರಂಥಾಲಯ, ಅಲ್ಲದೆ ಸುತ್ತ ಮುತ್ತಲಿನ ಗ್ರಾಮಗಳಿಗೆ ಉತ್ತಮ ಸಂಪರ್ಕ ರಸ್ತೆ ಹೊಂದಿದ್ದು, ಜೊತೆಗೆ ಬಾರಖೇಡ ಬೀಳಗಿ ರಾಜ್ಯ ಹೆದ್ದಾರಿಯೂ ಕೂಡ ಹಾದು ಹೋಗಿದೆ ಪ್ರತಿ ವಾರಕ್ಕೊಮ್ಮೆ ಸಂತೆಯು ಕೂಡ ನಡೆಯುವುದರಿಂದ ಸುತ್ತ ಮುತ್ತಲಿನ ಗ್ರಾಮಗಳಿಗೆ ಅನುಕೂಲಕರ ವಾತಾವರಣ ಇಲ್ಲಿ ಇರುತ್ತದೆ. ಹಿಂದಿನ ಕಾಲದಲ್ಲಿ ಈ ಗ್ರಾಮವು ಹೋಬಳಿ ಯಾಗಿತ್ತೆಂದು ಕೆಲವು ದಾಖಲೆಗಳಲ್ಲಿ ತಿಳಿದು ಬರುತ್ತದೆ ಹೀಗಾಗಿ ಈ ಎಲ್ಲಾ ವಿಚಾರಗಳನ್ನು ಮನಗಂಡು ದೇವರ ನಾಮದಗಿ ಗ್ರಾಮವನ್ನು ಆಲಮೇಲ ತಾಲೂಕಿನ ಹೋಬಳಿ ಯನ್ನಾಗಿ ಘೋಷಿಸ ಬೇಕೆಂದು ತಹಶೀಲ್ದಾರ್ ಧನಪಾಲ ಶೆಟ್ಟಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಡಿವಾಳ ಕುಮಸಿ,ರಾಮಚಂದ್ರ ದೇಸುಣಗಿ, ಶರಣು ಬಮ್ಮನಜೋಗಿ, ಶಿವಶರಣ ಗುಂದಗಿ, ನಿಂಗಣ್ಣ ಸಿಂದಗಿ, ಸಂತೋಷ ಗೋಗಿ,ರೇವಣಸಿದ್ಧ ಕಂಬಾರ, ಬಸನಗೌಡ ಧರ್ಮಗೊಂಡ, ಗಂಗಾಧರ ಬಂಡಗರ, ಬಸನಗೌಡ ಬಮ್ಮನಜೋಗಿ ಮಲಕಣ್ಣ ಕೂಡಿ, ರಮೇಶ ಬಮ್ಮನಜೋಗಿ,ಬಸಯ್ಯ ಹಿರೇಮಠ ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button