ಸರ್ಕಾರಿ ನೌಕರರ ಪಾಲಿನ ಆಪತ್ಬಾಂಧವ – ಹಿರಿಯ ವಕೀಲರಾದ ಶ್ರೀ ಉದನೇಶ್ವರ.ಎಂ ಜಿ.
ಉಡುಪಿ ಸ.02

ನೌಕರರ ನೊಂದ ಪಾಲಿನ ಸಂಜೀವಿನಿಯಾದ ಹಿರಿಯ ವಕೀಲರಾದ ಶ್ರೀ ಉದನೇಶ್ವರ.ಎಂ ಜಿ
ಇತ್ತೀಚಿನ ಕಾಲಘಟ್ಟದಲ್ಲಿ ಸುಮಾರು 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ಸರಕಾರದ ಮೀನಾಮೇಷ ಮಾಡುತ್ತಿದ್ದು, ಒಬ್ಬ ಸರಕಾರಿ ನೌಕರನ ಮೇಲೆ 3-4 ನೌಕರನ ಕೆಲಸದಷ್ಟು ಅಧಿಕವಾಗಿ ತೀವ್ರ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಸಣ್ಣ ಪುಟ್ಟ ಲೋಪಗಳಾಗುವುದು ಮತ್ತು ಕೆಲವು ಹಿರಿಯ ಅಧಿಕಾರಿಗಳ ಅಸಡ್ಡೆ ಮತ್ತು ರಾಜಕೀಯ ನಾಯಕರುಗಳ ಒತ್ತಡದಲ್ಲಿ ಅಮಾನತ್ತು, ಇನ್ನಿತರ ಶಿಸ್ತು ಕ್ರಮ ಎದುರಿಸ ಬೇಕಾದ ಪರಿಸ್ಥಿತಿಯಲ್ಲಿ ಅಮಾಯಕ ನೌಕರರ ಪಾಲಿಗೆ ಹೈಕೋರ್ಟ್ ಮತ್ತು ಕೆ.ಎ.ಟಿ ಹಿರಿಯ ವಕೀಲರಾದ ಶ್ರೀ ಉದನೇಶ್ವರ.ಎಂ ಜಿ ರವರು ಆಪದ್ಭಾಂವರಾಗಿದ್ದಾರೆ.
ಸರ್ಕಾರಿ ನೌಕರರು ಇಂತಹ ಒತ್ತಡದ ಸಂದರ್ಭದಲ್ಲಿ ರಾಜಕಾರಣಿಗಳು ಮತ್ತು ಶಿಸ್ತು ಪ್ರಾಧಿಕಾರದ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿ ಅಮಾನತು, ವಾರ್ಷಿಕ ವೇತನ ಭಡ್ತಿ ತಡೆ ಹಿಡಿಯುವುದು, ಹಿಂಬಡ್ತಿ, ಕಡ್ಡಾಯ ನಿವೃತ್ತಿ, ಮುಂತಾದ ಕಠಿಣ ದಂಡನೆಗಳಿಗೆ ಬಲಿಯಾಗುವ ಪರಿಸ್ಥಿತಿ ಉಂಟಾಗಿದೆ. ಇದರಿಂದ ಸರಕಾರಿ ನೌಕರರು ಮತ್ತು ಅವಲಂಬಿತರು ಸಂಕಷ್ಟಕ್ಕೆ ಈಡಾಗುತ್ತಾರೆ.
ಇಂತಹ ಅಸಹಾಯಕ ಪರಿಸ್ಥಿತಿಯಲ್ಲಿ ಅಂತಹ ನೌಕರರ ಪಾಲಿಗೆ ಅತ್ಯಂತ ಸರಳ ಸಜ್ಜನಿಕೆಯ ಖ್ಯಾತ ವಕೀಲರಾದ ಕಾಸರಗೋಡು ಮೂಲದ, ಕುಂಬಳೆ ಮೂಲದ ಕಿದೂರಿನ ಇವರು ನೊಂದ ಸರಕಾರಿ ನೌಕರರ ಪಾಲಿನ ಆಶಾಕಿರಣವಾಗಿದ್ದಾರೆ.
ಯಾರಾದರೂ ಸರಕಾರಿ ನೌಕರರು ತಮ್ಮ ಸೇವಾವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿದಾಗ ಈ ವಕೀಲರನ್ನು ಸಂಪರ್ಕಿಸಿದಾಗ ಅತ್ಯಂತ ಮುತುವರ್ಜಿ ಯಿಂದ ನೊಂದ ಸರಕಾರಿ ನೌಕರರಿಗೆ ಧೈರ್ಯ ತುಂಬುವುದರೊಂದಿಗೆ ಅವರನ್ನು ಬೆಂಗಳೂರಿಗೆ ಕರೆಸಿ ಹಣವನ್ನು ಖರ್ಚು ಮಾಡಿಸದೆ ಕೇವಲ ಫೋನಿನಲ್ಲಿ ಪ್ರಕರಣಗಳ ವಿವರವನ್ನು ಪಡೆದು ಕೊಂಡು ತಕ್ಷಣ ಯಾವ ರೀತಿ ನೌಕರರು ಮುಂದಿನ ಕಾನೂನಿನ ಹೆಜ್ಜೆ ಇಡಬೇಕು ಎಂದು ಸಲಹೆ ನೀಡುವುದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲಾತಿ/ವಕಾಲತ್ತನ್ನು ಪೋಸ್ಟ್ ಅಥವಾ ಕೊರಿಯರ್ ಮೂಲಕ, ಅಥವಾ ಬಸ್ ಗಳ ಮೂಲಕ ಕಳುಹಿಸಿದರೆ ತಾವೇ ಖುದ್ದು ದಾಖಲೆಯನ್ನು ಆಳವಾಗಿ ಅಧ್ಯಯನ ಮಾಡಿ ನೊಂದ ಸರಕಾರಿ ನೌಕರರ ಪರವಾಗಿ ವಾದಿಸಿ ನ್ಯಾಯ ಒದಗಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ಇಲ್ಲಿಯ ವರೆಗೂ ಮಾನ್ಯರು ನೊಂದ ಸರಕಾರಿ ನೌಕರರ ಪರ ಎಲೆ ಮರೆಯ ಕಾಯಿಯಂತೆ ತಮ್ಮ ಕರ್ತವ್ಯ ನಿರ್ವಹಿಸುವ ಮೂಲಕ ಸರಕಾರಿ ನೌಕರರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಅಲ್ಲದೆ ಹಲವಾರು ಕೇಸುಗಳಲ್ಲಿ ಸರ್ಕಾರಿ ನೌಕರರರಿಗೆ ನ್ಯಾಯ ಒದಗಿಸಿ ಕೊಟ್ಟಿರುತ್ತಾರೆ. ಇದೆ ರೀತಿ ಇನ್ನೂ ಹೆಚ್ಚಿನ ನೊಂದ ನೌಕರರಿಗೆ ನ್ಯಾಯ ಒದಗಿಸಿ ಕೊಡುವ ಪ್ರಯತ್ನ ಮುಂದುವರಿಸಲಿ ಎಂದು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಮೂಲಕ ನೊಂದ ನೌಕರರ ಪಾಲಿನ ಸಂಜೀವಿನಿ ಯಾಗಿದ್ದಾರೆ ಎಂದು ವರದಿಯಾಗಿದೆ.
ವರದಿ:ಆರತಿ.ಗಿಳಿಯಾರು.ಉಡುಪಿ

