ನೆಲ್ಲಿಬೆಟ್ಟು ಗಣೇಶೋತ್ಸವದಲ್ಲಿ ಕೊರ್ಗಿ ಗ್ರಾ.ಪಂ – ಅಧ್ಯಕ್ಷೆ ಉಮಾ.ಎಲ್ ಶೆಟ್ಟಿ ಭಾಗಿ.
ಉಡುಪಿ ಸ.03

ಕೊರ್ಗಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಜಯಪ್ರಕಾಶ್ ಹೆಗ್ಡೆ ಅವರ ಆಪ್ತರಾದ ಉಮಾ.ಎಲ್ ಶೆಟ್ಟಿ ಅವರು ದಿನಾಂಕ 27/08/2025 ರಂದು ನೆಲ್ಲಿಬೆಟ್ಟು ಗಣೇಶೋತ್ಸವದಲ್ಲಿ ಪಾಲ್ಗೊಂಡರು. ಸಮಾಜಸೇವೆ ಮತ್ತು ಸಾರ್ವಜನಿಕ ಕಾರ್ಯಗಳಲ್ಲಿ ಸಕ್ರಿಯರಾಗಿರುವ ಉಮಾ ಶೆಟ್ಟಿ, ತಮ್ಮ ಸರಳತೆ ಮತ್ತು ಸಜ್ಜನಿಕೆಯಿಂದ ಸಾರ್ವಜನಿಕ ವಲಯದಲ್ಲಿ ಜನಪ್ರಿಯರಾಗಿದ್ದಾರೆ.
ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ತಮ್ಮ ಕರ್ತವ್ಯಗಳನ್ನು ದಕ್ಷತೆಯಿಂದ ನಿರ್ವಹಿಸುತ್ತಿರುವ ಉಮಾ ಶೆಟ್ಟಿ, ರಾಜಕೀಯ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.
ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರಂತಹ ಜನ ಪ್ರತಿನಿಧಿಗಳ ಉಪಸ್ಥಿತಿಯು ಸಮಾಜದಲ್ಲಿ ಸೌಹಾರ್ದ ಮತ್ತು ಒಗ್ಗಟ್ಟಿನ ಭಾವನೆಗಳನ್ನು ಬಲ ಪಡಿಸುತ್ತದೆ.
ನೆಲ್ಲಿಬೆಟ್ಟು ಗಣೇಶೋತ್ಸವಕ್ಕೆ ಆಗಮಿಸಿದ ಉಮಾ ಶೆಟ್ಟಿ, ಸಾರ್ವಜನಿಕರೊಂದಿಗೆ ಬೆರೆತು, ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು. ಈ ರೀತಿಯ ನಡೆಗಳು ಜನ ಪ್ರತಿನಿಧಿಗಳು ಕೇವಲ ಅಧಿಕಾರಕ್ಕೆ ಸೀಮಿತರಾಗದೆ, ಜನರ ಜೊತೆ ನಿಲ್ಲುತ್ತಾರೆ ಎಂಬುದನ್ನು ತೋರಿಸುತ್ತದೆ. ಅವರ ಈ ಸರಳ ಮತ್ತು ಜನಸ್ನೇಹಿ ನಡೆಗೆ ನೆಲ್ಲಿಬೆಟ್ಟು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ವರದಿ:ಆರತಿ.ಗಿಳಿಯಾರು.ಉಡುಪಿ