ಶ್ರೀ ಕಲ್ಮಠದ ದಸರಾ – ಮಹೋತ್ಸವ ಕಾರ್ಯಕ್ರಮ.
ಮಾನ್ವಿ ಸ.05





ಶ್ರೀ ಕಲ್ಮಠದ ಪರಂಪರೆಗಳಲ್ಲಿ ಒಂದಾದ ಶ್ರೀದೇವಿ ಪುರಾಣ ಹಾಗೂ ಸುವರ್ಣ ದಸರಾ ಮಹೋತ್ಸವ 2025 ಕಾರ್ಯಕ್ರಮದ ನಿಮಿತ್ಯ ಕಲ್ಮಟ್ಟದ ಶ್ರೀಗಳಾದ ವಿರೂಪಾಕ್ಷ ಪಂಡಿತಾರಾಧ್ಯ ಮಹಾ ಸ್ವಾಮಿಗಳು ಬೆಂಗಳೂರಿನಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್.ಎಸ್ ಬೋಸರಾಜು ಅವರಿಗೆ ಆಹ್ವಾನ ಪತ್ರ ನೀಡಿ ಸ್ವಾಗತಿಸಿದರು.ನಂತರ ಶ್ರೀಗಳು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ, ಶರಣಪ್ರಕಾಶ್ ಪಾಟೀಲ್ ಹಾಗೂ ಅರಣ್ಯ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆ ಅವರಿಗೆ ಆಮಂತ್ರಣ ಪತ್ರ ನೀಡಿದರು.ಈ ಸಂದರ್ಭದಲ್ಲಿ ನೀಲಗಲ್ ಮಠದ ಶ್ರೀಗಳಾ ಶ್ರೀ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಮಹಾ ಸ್ವಾಮಿ, ಮಂಗಳವಾರ ಪೇಟೆ ಮಠದ ಶ್ರೀಗಳಾದ ವೀರ ಸಂಗಮೇಶ್ವರ ಶಿವಾಚಾರ್ಯ ಮಹಾ ಸ್ವಾಮಿಗಳು, ಚಂದ್ರಶೇಖರ್ ಮಿರ್ಜಾಪೂರ ಸೇರಿ ಅನೇಕರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ