ಮಹಾತ್ಮರ ಪುರಾಣ ಕೇಳುವುದರಿಂದ ಮಕ್ಕಳಲ್ಲಿ ಸಂಸ್ಕೃತಿ ಬರಲು ಸಾಧ್ಯ – ಶಾಸಕ ಅಶೋಕ ಮನಗೂಳಿಯವರ ಅಭಿಮತ.
ಗುಡ್ಡಳ್ಳಿ ಆ.24





ಆಲಮೇಲ ತಾಲೂಕಿನ ಸುಕ್ಷೇತ್ರ ಗುಡ್ಡಳ್ಳಿ ಗ್ರಾಮದಲ್ಲಿ ಶ್ರೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ಯ ಸದ್ಗುರು ಶ್ರೀ ಸಿದ್ದಲಿಂಗೇಶ್ವರ ಪುರಾಣ ಶ್ರೀ ವೇದಮೂರ್ತಿ ಮಡಿವಾಳಯ್ಯ ಶಾಸ್ತ್ರಿಗಳು ಇಂಡಿ ತಾಲೂಕಿನ ಅರ್ಜುನ ಅಂಬಾಮಠ ಇವರಿಂದ ಐದು ದಿನಗಳ ಕಾಲ ಪುರಾಣ ಹಮ್ಮಿಕೊಂಡಿದ್ದು. ಶ್ರಾವಣ ಮಾಸದ ಕೊನೆಯ ದಿನ ದಂದು ಪುರಾಣ ಮಹಾ ಮಂಗಲ.24/8/2025 ರಂದು ರವಿವಾರ ಬೆಳಗ್ಗೆ 10 ಗಂಟೆಯಿಂದ 12 ಘಂಟೆ ವರೆಗೆ ಶ್ರೀ ಸಿದ್ದಲಿಂಗೇಶ್ವರ ಮಹಾರಾಜರ ಭಾವ ಚಿತ್ರ ಹಾಗೂ ನರಸಿಂಹ ದೇವರ ಭಾವ ಚಿತ್ರದೊಂದಿಗೆ ಸಕಲ ವಾದ್ಯ ವೃಂದಗಳೊಂದಗೆ ಹಾಗೂ ಸುಮಂಗಲಿಯರಿಂದ ಕುಂಭ ಕಳಸದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡಯಿತು ಮೆರವಣಿಗೆಯಲ್ಲಿ ಗಜಾನನ ಯುವಕ ಮಂಡಳಿಯ ಮುದ್ದು ಮಕ್ಕಳಿಂದ ಕೋಲಾಟ ಜರುಗಿತ್ತು. ನಂತರ ಮಧ್ಯಾಹ್ನ ನರಸಿಂಹ ದೇವರ ಅವರಣದಲ್ಲಿ ಧರ್ಮ ಸಭೆ ಈ ಧರ್ಮ ಸಭೆಯ ದಿವ್ಯ ಸಾನಿಧ್ಯ. ಶ್ರೀ ಷ,ಬ್ರ ಚಂದ್ರಶೇಖರ ಶಿವಾಚಾರ್ಯರು ಗುರು ಸಂಸ್ಥಾನ ಹಿರೇಮಠ ಆಲಮೇಲ, ಮಳೇಂದ್ರಯ್ಯ ಚಂ ಮಠ, ಶ್ರೀ ಆನಂದ ಮಹಾರಾಜರು ಮಾರ್ಸನಹಳ್ಳಿ, ಕಾರ್ಯಕ್ರಮ ಉದ್ಘಾಟನೆ ಸನ್ಮಾನ್ಯ ಶ್ರೀ ಅಶೋಕ ಮನಗೂಳಿ ಶಾಸಕರು ಗ್ರಾಮೀಣ ಮಟ್ಟದಲ್ಲಿ ಮಕ್ಕಳಿಗೆ ಪುರಾಣ ಕೇಳುವದರಿಂದ ಹಿಂದೂ ಸಂಸ್ಕೃತಿ ಗಟ್ಟಿ ಗೊಳ್ಳುವುದು ಎಂದು ಹೇಳಿ ಗುಡ್ಡಳ್ಳಿ ಗ್ರಾಮಕ್ಕೆ ಬಸ್ಸಿನ ಸೌಕರ್ಯ ಮತ್ತು ಒಂದು ಸಮುದಾಯ ಭವನ ಮಾಡುವುದಾಗಿ ಹೇಳಿದರು. ಫೋಟೋ ಪೂಜೆ ಪ್ರಭು ವಾಲಿಕಾರ ಮಾಜಿ ಎಪಿಎಂಸಿ ಅಧ್ಯಕ್ಷರು, ಮುಖ್ಯ ಅತಿಥಿಗಳಾಗಿ ಬಸವರಾಜ ಬಾಗೇವಾಡಿ ಎಪಿಎಂಸಿ ಅಧ್ಯಕ್ಷರು ಆಲಮೇಲ, ಗುರು ತಳವಾರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಸಿಂದಗಿ, ಶ್ರೀ ಮಲ್ಲಿಕಾರ್ಜುನ ಜೋಗೂರ ಕೆಪಿಆರ್ ಸಕ್ಕರೆ ಕಾರ್ಖಾನೆ ನಿರ್ದೇಶಕರು, ಎಸ್.ಆಯ್ ರಾಂಪುರ ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷರು, ಶಂಕರಗೌಡ.ಆರ್ ಪಾಟೀಲ ಧೂಳಖೇಡ, ಬಸವರಾಜ್ ಪಾಟೀಲ, ಈರಣ್ಣ ತಳವಾರ್, ಗಾಲಿಬ ತಳವಾರ, ಎಲ್.ಎ ಆನೆಗಾವ್, ವೇದಿಕೆ ಮೇಲೆ ಉಪಸ್ಥಿತರಿದ್ದರು. ನಿರೂಪಣೆ ಶಂಕರಗೌಡ ಬಿರಾದರ್ ಶಿಕ್ಷಕರು, ಸ್ವಾಗತ ಯು,ಪರಮೇಶ್ವರ್ ಶಿಕ್ಷಕರು, ಮಾಡಿದರು. 101 ಮುತ್ತೈದಿಯರಿಗೆ ಹೂಡಿ ತುಂಬುವುದಕ್ಕೆ ಸೀರೆ, ಕುಬಸ ಉಡಿಯಕ್ಕಿ ಸಾಮಾನುಗಳನ್ನು ಬಸ್ವಂತರಾಯ ಸಾತಿಹಾಳ ಇವರ ಪರಿವಾರದೊಂದಿಗೆ ಭಕ್ತಿ ಸೇವೆ ಸಲ್ಲಿಸಿದರು. ಕಾರ್ಯಕ್ರಮಕ್ಕೆ ಗುಡ್ಡಳ್ಳಿ ಗ್ರಾಮದ ಹಾಗೂ ಸುತ್ತ ಮುತ್ತಲಿನ ಗ್ರಾಮದ ಭಕ್ತಾದಿಗಳು ಭಾಗಿಯಾಗಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಬಹಳ ಅಚ್ಚು ಕಟ್ಟಾಗಿತ್ತು ನಿರ್ವಹಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ