ಮುಟ್ಟಿಸಿ ಕೊಳ್ಳದ ಅಲೆಮಾರಿಗಳನ್ನು – ಮುಸಿಯು ನೋಡದ ಸರ್ಕಾರಕ್ಕೆ ತಕ್ಕ ಪಾಠ ಕಲಿಸು ಸಮಯ ಸನ್ನಿಹಿತವಾಗಿದೆ.
ಕೊಪ್ಪಳ ಸ.05





ಒಳ ಮೀಸಲಾತಿ ಹೋರಾಟ ಸಮಿತಿಯ ಹಾಗೂ ರಾಜ್ಯದ ಸಮಸ್ತ ಅಲೆಮಾರಿಗಳಿಗೆ ವಂಚಿತವಾಗುತ್ತಿರುವ, 59, ಸಮುದಾಯದ ಅಸ್ಪೃಶ್ಯ ವರ್ಗದ ಪ್ರತ್ಯೇಕ 1 % ಮೀಸಲಾತಿ ಲಂಬಾಣಿ, ಬೋವಿ, ಕೊರಮ, ಕೊರಚ, ನಮ್ಮಿಂದ ಬೆರ್ಪಡಿಸಿ, ಮಾನ್ಯ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ವರದಿ ಪ್ರಕಾರ ಆದೇಶಿಸಿದೆ ಅದನ್ನು ಜಾರಿಗೆ ತರದೇ ಹೋದರೆ, ಈ ಒಂದೂ ಸಂವಿಧಾನದ ಆಶಯದಂತೆ, ಈ ನಾಡಿನ ಮೂಲಭೂತ ಸೌಲಭ್ಯಗಳಿಂದ ವಂಚಿತರಾದ, ಈ ನಾಡಿನ ಅಲೆಮಾರಿಗಳಾದ ನಾವುಗಳು ಆದೇಶ ಬಿಟ್ಟು ಬೇರೇನೂ ಕೇಳುತ್ತಿಲ್ಲಾ, ನಾವುಗಳು ಬೇಡುತ್ತಿರೋದು, ಭಿಕ್ಷೆಯಲ್ಲಾ ನೀವುಗಳು ಕೊಡುತ್ತಿರೋದು ಭಿಕ್ಷೆಯನ್ನೆಲ್ಲಾ, ನಾವುಗಳು ಕೇಳುತ್ತಿರೋದು ನಮ್ಮ ಹಕ್ಕನ್ನು ನೀವು ಕೊಡುತ್ತಿರೋದು ನಮ್ಮ ಪಾಲಿಗೆ ಬರುತ್ತಿರುವ ನಮ್ಮ ಹಕ್ಕನ್ನು, ಕೇಳುವುದು, ಪ್ರಶ್ನಿಸುವುದು, ಜೊತೆಗೆ ಗೌರವಿಸುವುದು, ಕೂಡಾ ನಮ್ಮ ಹಕ್ಕು, ಹೋರಾಟ, ಮತ್ತು ಗೌರವದ ಮೂಲಕ ಕೇಳಿದ್ದು ಆಗಿದೆ. ಶೀಘ್ರದಲ್ಲಿ ನಮ್ಮ ಹಕ್ಕನ್ನು ನಮ್ಮ ಆಶಯದಂತೆ ನೀವು ಕೊಡುತ್ತೀರೆಂದು ಕೂಡಾ ಭಾವಿಸಿದ್ದೇವೆ. ಒಂದು ವೇಳೆ ಕೊಡದೆ ಹೋದರೆ ನಾಡಿನ ಸಮಸ್ತ ಅಲೆಮಾರಿಗಳ ಪರವಾಗಿ ಕೊಪ್ಪಳ ಜಿಲ್ಲೆಯಿಂದ ನಾವುಗಳು ಕೂಡಾ ಸರಕಾರಕ್ಕೆ ಒಂದೂ ಎಚ್ಛರಿಕೆಯನ್ನು ಕೊಡುತ್ತೇವೆ. ನಿಮ್ಮ ಹೊರತು ನಾವಿಲ್ಲ, ನಮ್ಮನ್ನು ನಿಮ್ಮಿಂದ ಹೊರತಾಗಿ ನೋಡಿದ್ದೇ ನಿಜವಾದರೆ. ರಾಜ್ಯದಲ್ಲಿ ಇನ್ನೂ ಮುಂದೆ ಮುಂಬರುವ ಯಾವುದೇ ಚುನಾವಣೆ ಇರಲಿ, ಅಲೆಮಾರಿಗಳಿಂದ ರಾಜ್ಯ ವ್ಯಾಪಿ ಚುನಾವಣಾ ಭಹೀಷ್ಕಾರ ಶತಸಿದ್ಧವಾದೀತು ಎಚ್ಚರಿಕೆ ಘಂಟೆಯಾಗಿರಲಿ. ತಮ್ಮ ಅನುಕೂಲಕ್ಕೆ ಇಲ್ಲದ್ದನ್ನು ತೆಗೆದು ಕೊಂಡು ನಾವೇನು ಮಾಡೋದು, ದಯವಿಟ್ಟು ನಮ್ಮ ಕಡೆ ನೋಡಿ ನಮ್ಮ ಕೂಗಿಗೆ ಸ್ಪಂದನೆ ನೀಡಿ. ಇಲ್ಲವಾದಲ್ಲಿ ಹೋರಾಟ ಎದುರಿಸಲು ಸಿದ್ಧರಾಗಿ ಇದು ಸರ್ಕಾರಕ್ಕೆ ನಮ್ಮ ಸವಾಲಾಗಿದೆ. ಒಳ ಮೀಸಲಾತಿ ಹೋರಾಟ ಸಮಿತಿ ಸದಸ್ಯರು ಕರ್ನಾಟಕ ರಾಜ್ಯ ಅಲೆಮಾರಿ ಎಸ್.ಸಿ/ಎಸ್.ಟಿ ಬುಡಕಟ್ಟು ಮಹಾ ಸಭಾದ ಜಿಲ್ಲಾ ಅಧ್ಯಕ್ಷರು ಕೊಪ್ಪಳ ಸಂಜಯ್ ದಾಸ್ ಕೌಜಗೇರಿ ರವರ ಒಕ್ಕೊರಲಿನ ಆಗ್ರಹವಾಗಿದೆ.