ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸರ್ಕಾರಿ ಶಾಲಾ – ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ.
ದಿಂಡವಾರ ಸ.06





ದೇವರ ಹಿಪ್ಪರಗಿ ತಾಲೂಕಿನ ಕಡಕೋಳದಲ್ಲಿ ನಡೆದ ಯಳವಾರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ದಿಂಡವಾರ್ ಸರ್ಕಾರಿ ಶಾಲೆಯ ಮಕ್ಕಳು ಪಡೆದ ಪ್ರಶಸ್ತಿಗಳು:- 1) ಬಾಲಕರ ಕಬ್ಬಡ್ಡಿ-ಪ್ರಥಮ, 2) ಬಾಲಕರ ಖೋ ಖೊ – ಪ್ರಥಮ, 3) ಬಾಲಕರ ರಿಲೆ – ಪ್ರಥಮ, 4)100 ಮಿ ಓಟ – ಪ್ರಥಮ, 5) 200 ಮೀ ಓಟ – ಪ್ರಥಮ, 6) 400 ಮೀ ಓಟ – ಪ್ರಥಮ, ದ್ವಿತೀಯ 7) 600 ಮೀ ಓಟ – ದ್ವಿತೀಯ, 8) ಎತ್ತರ ಜಿಗಿತ – ಪ್ರಥಮ, 9) ಉದ್ದ ಜಿಗಿತ – ಪ್ರಥಮ, 10) ಗುಂಡು ಎಸೆತ – ಪ್ರಥಮ.ಸಮಗ್ರ ವೀರಾಗ್ರಣಿ ಪ್ರಶಸ್ತಿ ರಾಜಕುಮಾರ ಬಿಸನಾಳ ಮೇಲಿನ ಕ್ರೀಡೆಯಲ್ಲಿ ಗೆದ್ದು ಬೀಗಿದ ಎಲ್ಲಾ ಮುದ್ದು ಮಕ್ಕಳಿಗೆ ಹೃದಯ ಪೂರ್ವಕ ಧನ್ಯವಾದಗಳು ಅರ್ಪಿಸುವರು ಮುಖ್ಯ ಗುರುಗಳು, ದೈಹಿಕ ಶಿಕ್ಷಕರು ಹಾಗೂ ಸಹ ಶಿಕ್ಷಕರು ಗುರು ಮಾತೆಯರು ಕೆ.ಬಿ.ಎಂ.ಪಿ.ಎಸ್ ದಿಂಡವಾರ. ಅಲ್ಲದೆ ಕಡಕೋಳದಲ್ಲಿ ನಡೆದ ಯಾಳವಾರ ವಲಯ ಮಟ್ಟದ ಕ್ರೀಡಾ ಕೂಟದಲಿ ನಮ್ಮ ಶಾಲೆಯ ವಿದ್ಯಾರ್ಥಿನಿಯರು (KGHPS DINDAWAR) ೧) ಕಬಡ್ಡಿ ದ್ವಿತೀಯ ಸ್ಥಾನ 2) ಏತ್ತರ ಜಿಗತ್ ದ್ವಿತೀಯ ಸ್ಥಾನ ಪಡೆದಿದೆ. ದಿಂಡವಾರ ಸರ್ಕಾರಿ ಶಾಲೆಯ ಮಕ್ಕಳು ಎಲ್ಲಾ ರಂಗದಲ್ಲಿ ಪ್ರಗತಿಯ ನೋಟವನ್ನು ಕಂಡು ಊರಿನ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ನಿಂಗಪ್ಪ. ಗೊರಗುಂಡಗಿ.ಬಸವನ ಬಾಗೇವಾಡಿ