ಶಿಕ್ಷಕರ ದಿನಾಚರಣೆಯಂದು ಶಿಕ್ಷಕಿ ಡಿ.ಶಬ್ರಿನಾ ಮಹಮದ್ ಅಲಿಯವರ – ‘ಹೂ ಮಾಲೆಗೆ ನೂಲು’ ಕೃತಿ ಲೋಕಾರ್ಪಣೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಶ್ರೀ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಚಳ್ಳಕೆರೆಯ ಲೇಖಕಿ ಡಿ.ಶಬ್ರಿನಾ ಮಹಮದ್ ಅಲಿಯವರು ರಚಿಸಿರುವ 2ನೇ ಕೃತಿ ‘ಹೂ ಮಾಲೆಗೆ ನೂಲು’ ಎಂಬ ಕೃತಿಯನ್ನು ಚಳ್ಳಕೆರೆಯ ಹೆಮ್ಮೆಯ ಶಾಸಕರಾದ ಸನ್ಮಾನ್ಯ ಶ್ರೀ ಟಿ.ರಘುಮೂರ್ತಿ ಸರ್ ಅವರು ಬಿಡುಗಡೆ ಗೊಳಿಸಿದರು.





ಈ ಸಂದರ್ಭದಲ್ಲಿ ಲೇಖಕಿ ಡಿ.ಶಬ್ರಿನಾ ಮಹಮ್ಮದ್ ಅಲಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಶಿಧರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುರೇಶ್ ಕೆ.ಎಸ್, ನಗರಸಭೆ ಅಧ್ಯಕ್ಷರಾದ ಶ್ರೀಮತಿ ಶಿಲ್ಪ ಮುರಳೀಧರ್, ಉಪಾಧ್ಯಕ್ಷರಾದ ಶ್ರೀಮತಿ ಕವಿತಾ ಬೋರಯ್ಯ, ಸದಸ್ಯರು, ತಾಲ್ಲೂಕು ಗ್ಯಾರೆಂಟಿ ಸಮಿತಿಯ ಅಧ್ಯಕ್ಷರಾದ ಗದ್ದಿಗೆ ತಿಪ್ಪೇಸ್ವಾಮಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ವೀರೇಶ್, ಮಹಮದ್ ಅಲಿ ಮತ್ತಿತರ ಮುಖಂಡರು,ಕಾರ್ಯಕರ್ತರು & ಪುಟಾಣಿಗಳಾದ ಇನ್ಷಾ ಎಂ.ಎಸ್,ಶಿಫಾ ಎಂ.ಎಸ್,ವಿಹಾನ್ ಎಂ ಎಸ್ ಉಪಸ್ಥಿತರಿದ್ದರು.

ಈ ಕೃತಿಯು ಚಳ್ಳಕೆರೆಯ ಹಿರಿಯ ಸಾಹಿತಿಗಳಾದ ಬಿ.ತಿಪ್ಪಣ್ಣ ಮರಿಕುಂಟೆಯವರ ರಾಮಾಯಣ ಕತೆಗಳನ್ನಾಧರಿಸಿದ ‘ಸ್ವರ್ಗ ಸುಖ’ ಕೃತಿಗೆ ಬರೆದ ವಿಮರ್ಶಾ ಕೃತಿಯಾಗಿದೆ. ಹೂ ಮಾಲೆಗೆ ನೂಲು ಕೃತಿಗೆ ಮುನ್ನುಡಿಯನ್ನು ಖ್ಯಾತ ಕತೆಗಾರರಾದ ಕೇಶವ ಮಳಗಿ ಸರ್ ಅವರು,ಕತೆಗೆ ತಕ್ಕ ರೇಖಾಚಿತ್ರಗಳನ್ನು ಜಬೀವುಲ್ಲಾ ಎಂ.ಅಸದ್ ಸರ್ ಅವರು ನೀಡಿದ್ದಾರೆ.