ಸರ್ಕಾರದ ಒಳ ಮೀಸಲಾತಿ ವರ್ಗೀಕರಣ – ವಿರೋಧಿಸಿ ಪ್ರತಿಭಟನೆ.
ದಾವಣಗೆರೆ ಸ.07

ಆತ್ಮೀಯ ಬಂಜಾರ ಬಂಧುಗಳೇ ಒಂದು ವಾರಗಳ ಸತತ ಪ್ರಯತ್ನದಿಂದ ನಮ್ಮ ಸಮುದಾಯದ ನಿಜವಾದ ಕಳಕಳಿ ಇರುವ ಜೀವನಾಡಿಗಳು ಇಂದು ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಹೋರಾಟವನ್ನು ಯಶಸ್ವಿಯಾಗಿ ಪೂರ್ಣ ಗೊಳಿಸಿದ್ದಾರೆ ಅವರೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಪ್ರತಿ ತಾಲೂಕಿನ ದಾವಣಗೆರೆ ಹೊನ್ನಾಳಿ ಜಗಳೂರು ಹರಿಹರ ಚನ್ನಗಿರಿ ಮಾಯಕೊಂಡ ಮುಂತಾದ ತಾಲೂಕುಗಳಿಂದ ತಾಂಡ ತಾಂಡದಿಂದ ತಮ್ಮದೇ ಖರ್ಚಿನಲಿ ಬಂದ ಹಾಗೂ ತಮ್ಮ ಖರ್ಚಿನಲ್ಲಿ ಜನರನ್ನು ಕರೆದು ಆಗಮಿಸಿದ ನಮ್ಮ ಸಮಾಜ ಬಂಧುಗಳಿಗೆ ಆ ಸೇವಾಲಾಲ್ ನೂರು ಕಾಲ ಆಯಸ್ಸು ಆರೋಗ್ಯ ನೀಡಿ ಅವರ ಕುಟುಂಬದ ಪ್ರತಿಯೊಬ್ಬರಿಗೂ ಒಳ್ಳೆಯ ಆರೋಗ್ಯವನ್ನು ನೀಡಲಿ ಎಂದು ಬಯಸುತ್ತಾ.

ಈ ಪ್ರತಿಭಟನೆಗೆ ಪ್ರಾರಂಭದಿಂದಲೂ ಅಭೂತ ಪೂರ್ವವಾಗಿ ಹೋರಾಟ ಮಾಡಿ ಹಳ್ಳಿ ಹಳ್ಳಿಗೂ ಭೇಟಿ ನೀಡಿ ತಮ್ಮದೇ ವಾಹನ ತಮ್ಮದೇ ಖರ್ಚಿನಲ್ಲಿ ಜಾಗೃತಿ ಮೂಡಿಸಿದ ಮಾಜಿ ಶಾಸಕರಾದ ಬಸವರಾಜ್ ನಾಯ್ಕ್ ಶಿವಪ್ರಕಾಶ್ ಆರ್ ಎಲ್ ಮಂಜನಾಯ್ಕ್ ಪಾಲಿಕೆ ಹಾಲೇಕಲ್ ಚಂದ್ರನಯ್ಕ್ ಅನಿಲ್ ನಾಯ್ಕ್ ಹನುಮಂತ್ ನಾಯ್ಕ್ ತೋಳುಹುಣಸೆ ಮಂಜನಾಯ್ಕ್ ರಮೇಶ ನಾಯ್ಕ್ ಬಸವರಾಜ್ ನಾಯ್ಕ್ ಶೇಖರ ನಾಯ್ಕ್ ಕುಮಾರ ನಾಯ್ಕ್ ಧರ್ಮ ನಾಯ್ಕ್ ಮಾರುತಿ ನಾಯ್ಕ್ ಅರುಣ್ ನಾಯ್ಕ್ ಮಹೇಶ ನಾಯ್ಕ್ ಉಮೇಶ್ ನಾಯ್ಕ್ ರವಿನಾಯ್ಕ್ ಶಾಂತ ನಾಯ್ಕ್ ಸುರೇಂದ್ರ ನಾಯ್ಕ್ ವೆಂಕಟೇಶ್ ನಾಯ್ಕ್ ಶಿವಕುಮಾರ್ ನಾಯ್ಕ್ ಮತ್ತಿತರರಿಗೆ ತುಂಬು ಹೃದಯದ ಧನ್ಯವಾದಗಳು ಇದೆ ಉತ್ಸಾಹ ಬೆಂಗಳೂರು ಚಲೋ ಚಳುವಳಿಯಲ್ಲಿ ತೋರಲಿ ಎಂದು ಆಶಿಸುತ್ತಾ ಮೆರವಣಿಗೆಗೆ ಬಂದ ಸಮಾಜದ ಸ್ವಾಮಿಗಳಾದ ಸರ್ದಾರ್ ಸೇವಾಲಾಲ್ ಸ್ವಾಮಿ ಮತ್ತು ಶಿವಪ್ರಕಾಶ್ ಸ್ವಾಮಿಗಳಿಗೆ ಹಾಗೂ ನಮ್ಮ ಸಮಾಜದ ತಾಯಂದರಿಗೆ ಯುವ ಮಿತ್ರರಿಗೆ ಸಹಕರಿಸಿದ ಮಾಧ್ಯಮ ಮಿತ್ರರಿಗೆ ಹಾಗೂ ಪೊಲೀಸ್ ಇಲಾಖೆಗೆ ಹೃತ್ಯ್ಪೂರ್ವಕವಾದ ಧನ್ಯವಾದಗಳು.

