ಬಾಲ್ಯ ವಿವಾಹಿತಳ ಮದುವೆ ಅಲ್ಲ ಗಂಡನ ಮನೆ ಆಸ್ತಿಗೆ ಹಕ್ಕುದಾರಳಲ್ಲ – ಗೀತಾ ಗುತ್ತೇದಾರ ಸಿ.ಡಿ.ಪಿ.ಓ ಅಭಿಪ್ರಾಯ ಪಟ್ಟರು.
ಇಂಡಿ ಸ.08

ಪೋಷಣಾ ಅಭಿಯಾನ ಚೊಚ್ಚಲು ಗರ್ಭಿಣಿಯರ ಸೀಮಂತ ಕಾರ್ಯಕ್ರಮ ಗೋರಿಮಟ್ಟಿ ತಾಂಡದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಾಲ್ಯ ವಿವಾಹ ಮದುವೆ ಅಲ್ಲ ಗಂಡನ ಮನೆ ಆಸ್ತಿ ಅಂತಸ್ತಿಗೆ ಹಕ್ಕುದಾರಳಲ್ಲ ಎಂದು ಹೇಳುತ್ತಾ ಗರ್ಭಿಣಿಯರು ಪುಷ್ಟಿ ಜಿಲೆಟ್ ಪೌಷ್ಟಿಕ ಆಹಾರ ಸೇವನೆ ಮೊಳಕೆ ಕಾಳುಗಳು ಸೇವನೆ ಬಗ್ಗೆ ಮಾತನಾಡಿದರು.

ಡಾ, ಪ್ರಶಾಂತ ವೈದ್ಯಾಧಿಕಾರಿಗಳು ಮಾತನಾಡಿ ಗರ್ಭಿಣಿ ತಾಯಂದಿರು ಕನಿಷ್ಠ ಐದು ಬಾರಿ ತಪಾಸಣೆ ಮಾಡಿಸಿ ಕೊಳ್ಳಬೇಕು ಹಸಿರು ತರಕಾರಿ ಸೊಪ್ಪು ಆಯಾ ಋತುಮಾನಕ್ಕೆ ಅನುಗುಣವಾಗಿ ಹಣ್ಣುಗಳು ಸೇವನೆ ಮಾಡುವ ಕುರಿತು ಮಾತನಾಡಿದರು.

ವೈ.ಎಂ ಪೂಜಾರ ಕ್ಷೇತ್ರ ಆರೋಗ್ಯ ಶಿಕ್ಷಣ ಶಿಕ್ಷಣಾಧಿಕಾರಿಗಳು. ಮಾತನಾಡಿ ಗಂಡಿಗೆ 21 ವರ್ಷ ಹೆಣ್ಣಿಗೆ 18 ವರ್ಷ ವಯಸ್ಸಿನೊಳಗೆ ಬಾಲ್ಯ ವಿವಾಹ ಕಂಡು ಬಂದಲ್ಲಿ ಕಾನೂನಿನ ಪ್ರಕಾರ 2 ವರ್ಷ ಜೈಲು ಶಿಕ್ಷೆ ಒಂದು ಲಕ್ಷ ರೂಪಾಯಿ ದಂಡ ಇದನ್ನು ಪ್ರಸ್ತುತ ನೆಂಟಸ್ತನಿಕೆ ಬಿಗಸ್ತನ ವಿವಾಹ ನಿಶ್ಚಯ ಅಪ್ರಾಪ್ತ ವಯಸ್ಸಿನಲ್ಲಿ ಕಂಡು ಬಂದಲ್ಲಿ ಈ ಕಾನೂನು ಅನ್ವಯವಾಗುವುದು ಎಂದು ಅರಿವು ಮೂಡಿಸಿದರು.

ಮೇಲ್ವಿಚಾರಕರು ಶ್ರೀಮತಿ ಎಸ್.ಭಜಂತ್ರಿ ಮಾತನಾಡಿ ಬಾಲ ಗರ್ಭಿಣಿಯರು 80,000 ವಿಜಯಪುರ ಜಿಲ್ಲೆಯಲ್ಲಿ 6,000. ತಾಯಿ ಮರಣ ಶಿಶು ಮರಣ ಹೆಚ್ಚಳವಾಗುತ್ತಿದ್ದು ಬೆಳೆಯ ಬೇಕಾದ ಮಗಳು ಮಾನಸಿಕವಾಗಿ ದೈಹಿಕವಾಗಿ ಬೆಳವಣಿಗೆ ಹಂತದಲ್ಲಿ ಮಗಳ ಕೊರಳಿಗೆ ಕರಿಮಣಿ ಹಸಿ ಮಣಿ ತವಕ ಬೇಡ ಅನಾಹುತಗಳ ಅವಘಡ ತಪ್ಪಿಸಲು ಅರಿವು ಮೂಡಿಸಿಡಿದರು.

ಪ್ರಸ್ತುತ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಹೆಚ್ ಅತನೂರ. ಶಾಲಾ ಮುಖ್ಯ ಗುರುಗಳು ಎಸ್.ಡಿ.ಎಮ್.ಸಿ ಅಧ್ಯಕ್ಷರು. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿಯರು, ತಾಯಂದಿರು ಇದ್ದರು. ಶ್ರೀಮತಿ ಎಸ್.ಕೆ ಭಜಂತ್ರಿ ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ಮಹಿಳೆಯರು, ಶಾಲಾ ಮಕ್ಕಳು ಪಾಲ್ಗೊಂಡಿದ್ದರು.