ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ಸಪ್ತಾಹ ಅಂಗವಾಗಿ – ವಿದ್ಯಾರ್ಥಿಗಳಿಗೆ ಜಾಗೃತಿ ಶಿಬಿರ.
ಮಾನ್ವಿ ಸ.11





ಪಟ್ಟಣದ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ಸಪ್ತಾಹ ಅಂಗವಾಗಿ ಮಾನ್ವಿ ಪಟ್ಟಣದ ಆರೋಗ್ಯ ಇಲಾಖೆಯ ನಮ್ಮ ಕ್ಲೀನಿಕ್ ವತಿಯಿಂದ ನಡೆದ ಆತ್ಮಹತ್ಯೆ ತಡೆಗಟ್ಟುವಿಕೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಮ್ಮ ಕ್ಲೀನಿಕ್‌ನ ವೈದ್ಯಾಧಿಕಾರಿ ಡಾ, ಪ್ರಜ್ವಲ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಮೂಡುವ ನಕಾರಾತ್ಮಕ ಅಂಶಗಳು ಮನಸ್ಸಿನ ಮೇಲೆ ತೀವ್ರವಾದ ಪ್ರಭಾವವನ್ನು ಬೀರುತ್ತವೆ. ಅತ್ಮಹತ್ಯಗೆ ಪ್ರಚೋದನೆ ನೀಡುತ್ತವೆ. ಮಾನಸಿಕ ಖಿನತೆಯನ್ನು ಮೂಡಿಸುತ್ತವೆ ಅದ್ದರಿಂದ ವಿದ್ಯಾರ್ಥಿಗಳು ಸದಾ ತಮ್ಮ ಮನಸ್ಸನ್ನು ಸಕಾರಾತ್ಮಕ ವಿಷಯಗಳ ಕಡೆ ಗಮನವಿರುವಂತೆ ನೋಡಿ ಕೊಳ್ಳಬೇಕು. ಮಾನಸಿಕವಾಗಿ ಚೈತನ್ಯವನ್ನು ಸದಾ ಜಾಗೃತ ಗೊಳಿಸುವ ಜೀವನ ಶೈಲಿಯನ್ನು ರೂಡಿಸಿ ಕೊಳ್ಳಬೇಕು ಎಂದು ತಿಳಿಸಿದರು.
ಯೋಗ ಗುರುಗಳಾದ ಅನ್ನದಾನಯ್ಯ ಸ್ವಾಮಿ ಮಾತನಾಡಿ ವಿದ್ಯಾರ್ಥಿಗಳು ಪ್ರತಿ ದಿನ ನಿಯಮಿತವಾಗಿ ಸ್ವಲ್ಪ ಸಮಯ ಸರಳವಾದ ಯೋಗ ಅಭ್ಯಾಸಗಳು, ಸೂರ್ಯ ನಮಸ್ಕಾರ, ಧ್ಯಾನ, ಪ್ರಾಣಾಯಾಮಗಳನ್ನು ನಿತ್ಯವೂ ಮಾಡುತ್ತಾ ಬಂದಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಧೃಡ ರಾಗುವುದಕ್ಕೆ ಸಾಧ್ಯವಿದೆ ಹಾಗೂ ನಿಮ್ಮ ಮನಸ್ಸು ನಕಾರತ್ಮಕತೆ ಯಿಂದ ಸಕಾರಾತ್ಮಕವಾಗಿ ನಿಮ್ಮ ಮನಸ್ಸು ಬದಲಾಗಿ ಚೈತನ್ಯ ದಿಂದ ಕೂಡಿರುತ್ತದೆ ಎಂದು ತಿಳಿಸಿದರು.ಕಾಲೇಜಿನ ವಿದ್ಯಾರ್ಥಿಗಳಿಗೆ ಸರಳವಾದ ಯೋಗದ ಆಸನಗಳ ಬಗ್ಗೆ ತಿಳಿಸಿ ಕೊಡಲಾಯಿತು. ಕಾಲೇಜಿನ ಪ್ರಾಚಾರ್ಯರಾದ ನಾಗಮಲ್ಲೇಶ್. ಮಾನ್ವಿ ನಮ್ಮ ಕ್ಲಿನಿಕ್ಕಿನ ಪ್ರಯೋಗ ಶಾಲಾ ತಜ್ಞರಾದ ಕೃಷ್ಣಮೂರ್ತಿ. ಉಪನ್ಯಾಸಕರಾದ ಅನುಪಮ. ಬಸವರಾಜ್. ಅಯ್ಯಪ್ಪ ಸೇರಿದಂತೆ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಬಾಕ್ಸ್ ನ್ಯೂಸ್:
ಪಟ್ಟಣದ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ಸಪ್ತಾಹ ಅಂಗವಾಗಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಭಿತ್ತಿ ಪತ್ರಗಳ ಪ್ರದರ್ಶನವನ್ನು ನಮ್ಮ ಕ್ಲೀನಿಕ್‌ನ ವೈದ್ಯಾಧಿಕಾರಿ ಡಾ. ಪ್ರಜ್ವಲ್ ಮಾಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾನಕ್ಕುಂದಿ.ಮಾನ್ವಿ