ದ.ವಿ.ಪ ರಾಜ್ಯ ಘಟಕದ ವತಿಯಿಂದ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ ವಿಜೇತರಿಗೆ ಭಾರಿ ನಗದು ಬಹುಮಾನ – ಕಾಶೀನಾಥ್ ತಾಳಿಕೋಟಿ ಹೇಳಿಕೆ.
ಕಲಕೇರಿ ಜ.28





ಇಂದು ಕಲಕೇರಿಯ ಬಸವೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಅವರು ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಘಟಕ ದಿಂದ ಬಾಬಾ ಸಾಹೇಬ್ ಅಂಬೇಡ್ಕರ್ ರವರ 134 ನೇ. ಜನ್ಮ ದಿನದ ಅಂಗವಾಗಿ ರಾಜ್ಯದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಪರೀಕ್ಷೆಯಲ್ಲಿ ಪ್ರಥಮ ಬಹುಮಾನ 3 ಲಕ್ಷ ದ್ವಿತೀಯ 2 ಲಕ್ಷ ತೃತೀಯ 1 ಲಕ್ಷ ಬಹುಮಾನ ನೀಡಲಾಗುವುದು ಮತ್ತು 100 ಜನ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನೀಡಲಾಗುವುದು.

ಎಂದು ತಾಲೂಕ ಘಟಕದ ಅಧ್ಯಕ್ಷರಾದ ಕಾಶಿನಾಥ್ ತಾಳಿಕೋಟಿ ಹೇಳಿದರು. ಈ ಸಂಧರ್ಭ ದಲ್ಲಿ ಕಾಲೇಜಿನ ಉಪನ್ಯಾಸಕರಾದ ರವಿ.ಗುಮಶೇಟ್ಟಿ, ಬಸವರಾಜ್ ಕುಂಬಾರ್ ಸರ್ ಹಾಗೂ ವಿದ್ಯಾರ್ಥಿ ಮುಖಂಡರಾದ ಅರುಣ್, ವಿಶಾಲ್, ಪ್ರಮೋದ್, ವಿಜಯ್ ಕುಮಾರ್, ಹಾಗೂ ಎಲ್ಲಾ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ