ಶ್ರೀಭವತಾರಿಣಿ ಆಶ್ರಮದಲ್ಲಿ ಸ್ವಾಮಿ ಪುರುಷೋತ್ತ ಮಾನಂದರ – ನುಡಿ ನಮನ.
ಬೆಂಗಳೂರು ಜೂ.20





ಬೆಂಗಳೂರಿನ ವಿಜಯ ನಗರದ ಶ್ರೀಭವತಾರಿಣಿ ಆಶ್ರಮದಲ್ಲಿ ಸ್ವಾಮಿ ಪುರುಷೋತ್ತಮಾನಂದರ ಜಯಂತಿಯ ಪ್ರಯುಕ್ತ ನುಡಿ ನಮನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸ್ವಾಮಿ ಪುರುಷೋತಮಾನಂದಜೀ ಅವರ ಬಗ್ಗೆ ಮುರಳೀಧರ ಬಿ.ಎಸ್ ಹಿರಿಯೂರಿನ ಕಿರಣ ಹಾಗೂ ನಾಗಾರ್ಜುನ ದೀಕ್ಷಿತ್ ಅವರು ಉಪನ್ಯಾಸ ನೀಡಿದರು.

ಈ ಜಯಂತಿಯ ಪ್ರಯುಕ್ತ ಮಾತಾಜೀ ವಿವೇಕಮಯೀ ಅವರ ನೇತೃತ್ವದಲ್ಲಿ ಶ್ರೀದೇವಿ ಸ್ತುತಿ ಪಾರಾಯಣ ಮತ್ತು ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತಾಜೀ ಯೋಗಾನಂದಮಯೀ, ಮಾತಾಜೀ ದಯಾಮಯೀ, ಮಾತಾಜೀ ವಂದನಮಯೀ, ಮಾತಾಜೀ ತ್ಯಾಗಮಯೀ, ಮಾತಾಜೀ ಜ್ಯೋತ್ಸ್ನಾಮಯೀ.

ಮಾತಾಜೀ ಅಮೋಘಮಯೀ, ಮಾತಾಜೀ ಅನನ್ಯಮಯೀ, ಜಯಂತಿ ಸುರೇಶ್, ನಳಿನಿ, ಪ್ರಕಾಶ್, ಆಶಾ ಶಿವಶಂಕರ್, ಪದ್ಮ ಆನಂದ, ರಶ್ಮಿ, ಯತೀಶ್.ಎಂ ಸಿದ್ದಾಪುರ, ಸಂತೋಷಕುಮಾರ್, ಉದಯ್, ಚೇತನ್ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.