ಧರ್ಮಸ್ಥಳ ಸೌಜನ್ಯಾ ಪ್ರಕರಣ, ಇನ್ನೂ ಉಳಿದಿರುವ ಪ್ರಶ್ನೆಗಳು – ಸಾರ್ವಜನಿಕರಿಂದ ಮರು ತನಿಖೆಗೆ ಆಗ್ರಹ….!
ಉಡುಪಿ ಸ.11





ಧರ್ಮಸ್ಥಳದಲ್ಲಿ ನಡೆದ ಸೌಜನ್ಯಾ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ತೀರ್ಪು ನೀಡಿ ಆರೋಪಿಯನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿದರೂ, ಸಾರ್ವಜನಿಕ ವಲಯದಲ್ಲಿ ಕೆಲವು ಗಂಭೀರ ಅನುಮಾನಗಳು ಮತ್ತು ಪ್ರಶ್ನೆಗಳು ಇನ್ನೂ ಜೀವಂತವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ಚಿತ್ರಗಳು, ಮತ್ತು ಪ್ರಕರಣದ ತನಿಖೆಯ ಬಗ್ಗೆ ಸಾರ್ವಜನಿಕರಲ್ಲಿ ಮೂಡಿರುವ ಗೊಂದಲಗಳು, ನ್ಯಾಯಕ್ಕಾಗಿ ನಿರಂತರವಾಗಿ ಹೋರಾಡುತ್ತಿರುವ ಸಾರ್ವಜನಿಕರ ಹೋರಾಟಕ್ಕೆ ಮತ್ತಷ್ಟು ಬಲ ನೀಡಿವೆ. ಈ ಕುರಿತು ಪ್ರಮುಖವಾಗಿ ಮೂಡಿ ಬಂದಿರುವ ಕೆಲವು ಅನುಮಾನಗಳು ಮೂಡಿ ಬಂದಿದೆ.ಫೋಟೋಗಳಲ್ಲಿ ಕಾಣುವ ಸೀಟ್ ಬೆಲ್ಟ್ ಮತ್ತು ವಾಹನ ಯಾವುದು..?
ಸೌಜನ್ಯಾ ಅವರ ಮೃತ ದೇಹದ ಫೋಟೋಗಳಲ್ಲಿ ಒಂದು ಕಾರಿನ ಸೀಟ್ ಬೆಲ್ಟ್ ಹೋಲುವ ವಸ್ತು ಕಾಣುತ್ತಿದೆ ಎಂಬುದು ಸಾರ್ವಜನಿಕರ ಪ್ರಮುಖ ಪ್ರಶ್ನೆಯಾಗಿದೆ. ಈ ಬೆಲ್ಟ್ ಯಾವ ಕಂಪನಿಯದ್ದು, ಅದು ಎಲ್ಲಿ ತಯಾರಿಸಲ್ಪಟ್ಟಿದೆ ಮತ್ತು ಯಾವ ವಾಹನಕ್ಕೆ ಸೇರಿದೆ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಎಂದು ಸಾರ್ವಜನಿಕರು ವಾದಿಸುತ್ತಿದ್ದಾರೆ. ಏಕೆಂದರೆ, ಪ್ರತಿ ವಾಹನ ಮತ್ತು ಅದರ ಭಾಗಗಳ ತಯಾರಿಕೆ ಮತ್ತು ಬಳಕೆಯ ಬಗ್ಗೆ ಕಂಪನಿಗಳ ಬಳಿ ದಾಖಲೆಗಳಿರುತ್ತವೆ. ಪ್ರಮುಖ ಆರೋಪಿ ಸಂತೋಷ್ ರಾವ್ ಯಾವ ಕಾರು ಬಳಸುತ್ತಿದ್ದರು ಅಥವಾ ಆತನಿಗೂ ಈ ಬೆಲ್ಟ್‌ಗೂ ಏನಾದರೂ ಸಂಬಂಧವಿದೆಯೇ ಎಂಬುದನ್ನು ತನಿಖಾ ಸಂಸ್ಥೆಗಳು ಕೂಲಂಕುಷವಾಗಿ ಪರಿಶೀಲಿಸಿವೆಯೇ ಎಂಬುದು ಸ್ಪಷ್ಟವಾಗಿಲ್ಲ. ಇಂತಹ ಸುಳಿವುಗಳನ್ನು ಏಕೆ ತನಿಖೆಯಲ್ಲಿ ಸಮರ್ಪಕವಾಗಿ ಬಳಸಿ ಕೊಳ್ಳಲಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸೌಜನ್ಯಾ ಅವರ ಹರಿದ ಅಂಗಿ: ಪ್ರತಿರೋಧವಿಲ್ಲದ ಪುರಾವೆಯೇ….?
ಪ್ರಕರಣದ ಮತ್ತೊಂದು ಸೂಕ್ಷ್ಮ ಅಂಶವೆಂದರೆ ಸೌಜನ್ಯಾ ಅವರ ಅಂಗಿ ಹರಿದಿರುವ ರೀತಿ. ಹರಿದಿರುವ ಅಂಗಿಯು ಕೈಯ ಕೊಂಕುಳಿನ ಕೆಳಭಾಗದಲ್ಲಿ ಮಾತ್ರ ಹರಿದಿರುವುದು ಚಿತ್ರಗಳಲ್ಲಿ ಕಾಣುತ್ತದೆ. ಒಬ್ಬ ವ್ಯಕ್ತಿ ಪ್ರತಿರೋಧ ತೋರಿದರೆ ಸಾಮಾನ್ಯವಾಗಿ ಬಟ್ಟೆಗಳು ಇಡೀ ಹರಿದು ಹೋಗ ಬೇಕಿತ್ತು, ಆದರೆ ಇಲ್ಲಿ ಹಾಗೆ ಆಗಿಲ್ಲಾ. ಇದು ಉದ್ದೇಶ ಪೂರ್ವಕವಾಗಿ, ಅಥವಾ ಅವಳು ಮೃತ ಪಟ್ಟ ನಂತರ ಬಟ್ಟೆಯನ್ನು ಹರಿದಿರಬಹುದು ಎಂಬ ಬಲವಾದ ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ, ಬಟ್ಟೆ ಹರಿದಿರುವ ರೀತಿ ಒಬ್ಬ ಸೈಕೋಪಥಿಕ್ ವ್ಯಕ್ತಿಯ ಕೃತ್ಯವನ್ನು ಹೋಲುತ್ತದೆ ಎಂಬ ವಾದಗಳು ಕೇಳಿಬರುತ್ತಿವೆ. ಆರೋಪಿ ಸಂತೋಷ್ ರಾವ್ ನನ್ನು ಬಂಧಿಸಿದಾಗ ಆತನ ಬಟ್ಟೆಗಳೊಂದಿಗೆ ಇವುಗಳನ್ನು (ಪೇಸ್ಟ್) ಹೋಲಿಕೆ ಮಾಡಿ, ಯಾವುದೇ ಸಾಕ್ಷ್ಯ ಸಂಗ್ರಹಿಸ ಲಾಗಿದೆಯೇ ಎಂಬುದು ಕೂಡ ಸಾರ್ವಜನಿಕ ವಲಯದಲ್ಲಿ ಉತ್ತರ ಸಿಗದ ಪ್ರಶ್ನೆಯಾಗಿದೆ.
ಕಾಣೆಯಾದ ಪುಸ್ತಕಗಳು ಮತ್ತು ಫೈಬರ್‌ಗಳುಸೌಜನ್ಯಾ ಅವರು ಶಾಲೆಯಿಂದ ಮನೆಗೆ ಹೋಗುವಾಗ ತೆಗೆದು ಕೊಂಡು ಹೋಗಿದ್ದ ಪುಸ್ತಕಗಳು ಎಲ್ಲಿ ಹೋದವು ಎಂಬ ಪ್ರಶ್ನೆ ಇಂದಿಗೂ ನಿಗೂಢವಾಗಿದೆ. ಈ ಪುಸ್ತಕಗಳು, ಅಥವಾ ಇತರ ವಸ್ತುಗಳು ಅಪರಾಧ ಸ್ಥಳದಲ್ಲಿ ಪತ್ತೆ ಯಾಗಿದೆಯೇ ಎಂಬ ಬಗ್ಗೆ ತನಿಖಾ ವರದಿಗಳು ಸ್ಪಷ್ಟತೆಯನ್ನು ನೀಡಿಲ್ಲಾ. ಅಲ್ಲದೆ, ತನಿಖೆಯ ಸಮಯದಲ್ಲಿ ಸಂಗ್ರಹಿಸಲಾದ ಫೈಬರ್ ಮತ್ತು ಇತರ ಮಾದರಿಗಳು ಎಲ್ಲಿಂದ ಬಂದವು ಎಂಬುದು ಕೂಡ ಸ್ಪಷ್ಟವಾಗಿಲ್ಲಾ. ಈ ಫೈಬರ್‌ಗಳು ಆರೋಪಿಯ ಬಟ್ಟೆ ಅಥವಾ ವಾಹನದಿಂದ ಬಂದಿರಬಹುದೇ ಎಂಬುದರ ಬಗ್ಗೆ ವೈಜ್ಞಾನಿಕ ತನಿಖೆ ನಡೆಸಿ, ಅದನ್ನು ಸಮರ್ಪಕವಾಗಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿಲ್ಲ ಎಂಬುದು ಹೋರಾಟಗಾರರ ಪ್ರಮುಖ ಆರೋಪ.SIT (ವಿಶೇಷ ತನಿಖಾ ತಂಡ) ರಚನೆಯ ಅಗತ್ಯ.
ಈ ಎಲ್ಲಾ ಅನುಮಾನಗಳಿಗೆ ಉತ್ತರ ಪಡೆಯ ಬೇಕಾದರೆ, ಸರ್ಕಾರದ ಮಟ್ಟದಲ್ಲಿ ಒಂದು SIT (ವಿಶೇಷ ತನಿಖಾ ತಂಡ) ರಚನೆ ಯಾಗಬೇಕು ಎಂಬುದು ಸಾರ್ವಜನಿಕರ ಏಕೈಕ ಆಗ್ರಹವಾಗಿದೆ. ಈ ಹೊಸ ತಂಡವು ಈ ಹಿಂದಿನ ತನಿಖೆಗಳಲ್ಲಿ ಆಗಿರುವ ಲೋಪಗಳನ್ನು ಸರಿ ಪಡಿಸಿದ, ಮೇಲೆ ಪ್ರಸ್ತಾಪಿಸಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗಬಹುದು ಎಂಬ ಭರವಸೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
ಈ ರೀತಿಯ ಪ್ರಕರಣದಲ್ಲಿ ಸಾರ್ವಜನಿಕರಲ್ಲಿ ಉಳಿದಿರುವ ಸಂಶಯಗಳು ಮತ್ತು ಆಕ್ರೋಶಕ್ಕೆ ಒಂದು ಪಾರದರ್ಶಕ ತನಿಖೆಯ ಮೂಲಕವೇ ನ್ಯಾಯ ಒದಗಿಸಬೇಕು ಎಂಬುದು ನ್ಯಾಯಕ್ಕಾಗಿ ಹೋರಾಡುತ್ತಿರುವವರ ಪ್ರಮುಖ ಬೇಡಿಕೆ ಯಾಗಿದೆ ಎಂದು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ನ ಪ್ರಚಲಿತ ವಿದ್ಯಮಾನಗಳ ಬಗ್ಗೆ ಸಾರ್ವಜನಿಕರ & ಮಾಧ್ಯಮ ಪರವಾಗಿ ವಿಶೇಷವಾಗಿ ಆಕ್ರೋಶದ ಆಗ್ರಹವಾಗಿದೆ.
ವರದಿ:ಆರತಿ.ಗಿಳಿಯಾರು.ಉಡುಪಿ