ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ್ – ಮಹಿಳೆ ಆತ್ಮಹತ್ಯೆ.
ಕೊಟ್ಟೂರು ಸ.14

ಪಟ್ಟಣದ ಚಾನುಕೋಟಿ ಮಠದ ಹಿಂಭಾಗ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ್ ಸೌಮ್ಯ.ಟಿ (30) ವರ್ಷ ನೇಣಿಗೆ ಶರಣಾಗಿದ್ದಾಳೆ. ಗಂಡ ಸಂತೋಷ್ ಮಾವ ಜಯಣ್ಣ ಅತ್ತೆ ಉಷಾ ವರದಕ್ಷಿಣೆಗಾಗಿ ಮತ್ತು ಸ್ವತಂತ್ರವಾಗಿ ಇರಲು ಬಿಡದೆ ಮದುವೆಯಾಗಿ 9 ವರ್ಷದ ವರೆಗೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಚಿತ್ರ ಹಿಂಸೆ ಕೊಟ್ಟಿರುವುದರಿಂದ ಗಂಡ ಮತ್ತು ಅತ್ತೆ ಹಿಂಸೆ ತಾಳಲಾರದೆ ಸೌಮ್ಯ.ಟಿ ನೇಣು ಹಾಕಿ ಕೊಂಡಿದ್ದಾಳೆ.

ಎಂದು ಮೃತಪಟ್ಟ ಮಹಿಳೆಯ ಅಣ್ಣ ಸೋಮಶೇಖರ್ ತಮ್ಮ ಕೊಟ್ರೇಶ್ ತಂದೆ ಬಸವರಾಜ ತಿಮ್ಲಾಪುರ ನಿವೃತ್ತಿ ಶಿಕ್ಷಕರು ನಮ್ಮ ಸುದ್ದಿ ವಾಹಿನಿ ಯೊಂದಿಗೆ ತಿಳಿಸಿದರು.

ಸೌಮ್ಯ.ಟಿ ತವರು ಮನೆ ಕೂಡ್ಲಿಗಿ ತಾಲೂಕಿನ ಹಿರೇಹೆಗ್ಡಾಳ್ ಗ್ರಾಮ ಗಗನ್ ಎಂಬ 9 ವರ್ಷದ ಮಗು ಇಂತಹ ಕಾಲದಲ್ಲೂ ವರದಕ್ಷಿಣೆ ಕಿರುಕುಳ ಕೊಡುತ್ತಿದ್ದಾರೆ ಎಂದರೆ ಎಷ್ಟರ ಮಟ್ಟಿಗೆ ಸರಿ ದಯವಿಟ್ಟು ಸೌಮ್.ಟಿ ಎಂಬುವವರ ಸಾವಿಗೆ ಒಂದು ನ್ಯಾಯ ಕೊಡಿಸಿ ಎಂದು ನಮ್ಮ ಸುದ್ದಿ ವಾಹಿನಿ ಯೊಂದಿಗೆ ಅವರ ತಮ್ಮ ಮಾತನಾಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು