ಸೀರತ್ ಅಭಿಯಾನದ ಅಂಗವಾಗಿ ಸ್ವಯಂ ಪ್ರೇರಿತರಾಗಿ – ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು.
ಮಾನ್ವಿ ಸ.15

ಪಟ್ಟಣದ ಆರೋಗ್ಯ ಆಸ್ಪತ್ರೆಯಲ್ಲಿ ಜಮಾತ್ ಇಸ್ಲಾಮಿ ಹಿಂದ್ ಮಾನ್ವಿ ಘಟಕದ ವತಿಯಿಂದ ನ್ಯಾಯದ ಹರಿಕಾರ ಪೈಗಂಬರ್ ಮೊಹಮ್ಮದ್ (ಸ.ಅ) ಸೀರತ್ ಅಭಿಯಾನದ ಅಂಗವಾಗಿ ನಡೆದ ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರವನ್ನು ಆರೋಗ್ಯ ಆಸ್ಪತ್ರೆಯ ವೈದ್ಯರಾದ ಡಾ, ಆಸಿಫ್.ಎಂ ಎಸ್ ಚಾಲನೆ ನೀಡಿ ಮಾತನಾಡಿ ರಕ್ತದಾನ ಮಹಾದಾನವಾಗಿದ್ದು, ಪ್ರತಿದಿನ ಗರ್ಭಿಣಿ ಮಹಿಳೆಯರಿಗೆ ಅಪಘಾತ ಸಂದರ್ಬದಲ್ಲಿ, ರಕ್ತ ಹೀನತೆ ಇರುವವರಿಗೆ, ಶಸ್ತ್ರ ಚಿಕಿತ್ಸೆ ವೇಳೆಯಲ್ಲಿ ರಕ್ತದ ಅವಶ್ಯಕತೆಯಿದ್ದು ರಕ್ತವನ್ನು ದಾನವಾಗಿ ಮಾತ್ರ ಪಡೆಯುವುದಕ್ಕೆ ಸಾಧ್ಯವಿರುವುದರಿಂದ ಪ್ರತಿ ಆರೋಗ್ಯವಂತ ಪುರುಷರು ಮತ್ತು ಮಹಿಳೆಯರು ಕೂಡ ಪ್ರತಿ ಮೂರು ತಿಂಗಳಿಗೆ ಒಮ್ಮೆ ರಕ್ತವನ್ನು ದಾನವಾಗಿ ನೀಡಬಹುದು ಎಂದು ತಿಳಿಸಿದರು.30 ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.ಕಾರ್ಯಕ್ರಮದಲ್ಲಿ ಡಾ, ರೋಹಿಣಿ ಮಾನ್ವಿಕರ್, ಜಮಾತ್ ಇಸ್ಲಾಮೀ ಹಿಂದ್ ತಾ. ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ಸಾಬ್, ಕಾರ್ಯದರ್ಶಿ ಸಬ್ಜಲಿ ಮಾಸ್ಟರ್, ಎಂ.ಎ.ಎಚ್ ಮುಖೀಮ್, ಉಮರ್ ಫಾರೂಕ್ ದೇವರಮನಿ, ಜನಾಬ್ ಕರೀಂ ಖಾನ್ ಸಾಬ್, ಸೈಯದ್ ಅಕ್ಬರ್ ಪಾಷಾ, ದಾವುದ್ ಸಿದ್ಧಿಕಿ ಸಾಬ್, ಅಬ್ದುಲ್ ರೌಫ್ ಸಾಬ್, ಎ. ಕೆ ಜಾಗಿರ್ದಾರ್ ಸಾಹೇಬ್, ಇಮ್ತಿಯಾಜ್ ವಕೀಲರು, ಸ್ವಾಲಿಡಾರಿಟಿ ಯೂಥ್ ಮೊಮೆಂಟ್ ತಾ.ಅಧ್ಯಕ್ಷರಾದ ನಾಸಿರ್ ಅಲಿ, ಎಸ್.ಐ.ಓ. ಅಧ್ಯಕ್ಷ ಅಜಿಂ, ಸಮೀರ್ ಪಾಷಾ, ಆರ್ಷದ್ ಸಾಹೇಬ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಬಾಕ್ಸ್ ನ್ಯೂಸ್:-
ಪಟ್ಟಣದ ಆರೋಗ್ಯ ಆಸ್ಪತ್ರೆಯಲ್ಲಿ ಜಮಾತ್ ಇಸ್ಲಾಮಿ ಹಿಂದ್ ಮಾನವಿ ಘಟಕದ ವತಿಯಿಂದ ರಕ್ತದಾನ ಶಿಬಿರ ನಡೆಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ