ಅದ್ದೂರಿಯಾಗಿ ಜರುಗಿದ ಹುಲ್ಲೂರಿನ ಶ್ರೀ ಕಲ್ಮೇಶ್ವರ – ಜಾತ್ರಾ ರಥೋತ್ಸವ.
ಹುಲ್ಲೂರು ಆ.12

ರೋಣ ತಾಲೂಕಿನ ಹುಲ್ಲೂರಿನ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವ ತುಂಬಾ ಅದ್ದೂರಿಯಾಗಿ ಜರುಗಿತು. ಪ್ರಾರಂಭದಲ್ಲಿ ಹಲವಾರು ಪೂಜಾ ಕಾರ್ಯಕ್ರಮ ದೊಂದಿಗೆ ಜಾತ್ರಾ ಮಹೋತ್ಸವ ಪ್ರಾರಂಭವಾಯಿತು. ಜೋರಾಗಿ ಸುರಿಯುತ್ತಿರುವ ಮಳೆಯಲ್ಲಿಯೇ ಭಕ್ತರು ತೆರನ್ನು ಹರ ಹರ ಮಗದೇವ ಜೈ ಕಲ್ಮೇಶ್ವರ ಮಹಾರಾಜ ಕಿ ಜೈ ಎನ್ನುತ್ತಾ ಭಕ್ತರಲ್ಲೆರೂ ಹಗ್ಗವನ್ನು ಹಿಡಿದು ಎಳೆಯುತ್ತಾ ಕಲ್ಮೇಶ್ವರನನ್ನು ಮನದಲ್ಲಿ ನೆನೆಯುತ್ತಾ ತೆರನ್ನು ಮುಂದೆ ಸಾಗಿಸಿದರು. ಭಕ್ತರಲ್ಲೆರೂ ಉತ್ತತಿಯನ್ನು ತೆರಿಗೆ ಒಗೆಯುತ್ತಾ ಕೈ ಜೋಡಿಸಿ ನಮಸ್ಕಾರ ಮಾಡಿದರು ತೇರು ಕಲ್ಮೇಶ್ವರ ದೇವಸ್ಥಾನದಿಂದ ಮುಂದೆ ಸಾಗಿ ಶರಬೆಂದ್ರಸ್ವಾಮಿ ದೇವಸ್ಥಾನದ ಮುಂದೆ ಸಾಗಿ ಕಲ್ಮೇಶ್ವರ ಪಾದಗಟ್ಟಿಗೆ ಬಂದು ತಲುಪಿ, ನಂತರ ಮತ್ತೆ ಕಲ್ಮೇಶ್ವರದೇವಸ್ಥಾನದ ಆವರಣಕ್ಕೆ ಬಂದು ತಲುಪಿತು ಭಕ್ತರೆಲ್ಲರೂ ಜೋರಾಗಿ ಚಪ್ಪಾಳೆ ಬಾರಿಸುತ್ತಾ ಹರ್ಷ ವ್ಯಕ್ತಪಡುಸಿದರು ಈ ಜಾತ್ರಾ ಮಹೋತ್ಸವದಲ್ಲಿ ರೋಣ, ಮುದೇನಗುಡಿ, ಹುನಗುಂಡಿ, ಬೇನಾಳ, ಅಸೂಟಿ, ಸೋಮನಕಟ್ಟಿ ಮೆಲ್ಮಠ ಹಾಗೂ ಇನ್ನಿತರ ಊರಿನ ಸದಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಶ್ರೀ ಕಲ್ಮೇಶ್ವರ ಕೃಪೆಗೆ ಪಾತ್ರರಾದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ