ಮಾದಿಗ ಯುವಕನ ಕೊಲೆಗೈದು ನದಿಗೆ ಎಸೆದಿರುವ ಘಟನೆ – ಕೊಲೆಯ ರಹಸ್ಯ ಭೇದಿಸಿಲು ಮಾದಿಗ ಮುಖಂಡರು ಪೋಲಿಸ್ ಇಲಾಖೆಗೆ ಒತ್ತಾಯ ಪೂರ್ವಕವಾಗಿ ಆಗ್ರಹ.
ಮದಲಿಂಗನಾಳ ಸ.15

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮದಲಿಂಗನಾಳ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಮಾದಿಗ ಸಮಾಜದ 19 ವರ್ಷದ ಭೀಮಣ್ಣ ಮಾದರ ಎಂಬ ಯುವಕನ ಕೊಲೆ ಮಾಡಿ ನದಿಗೆ ಎಸೆದಿರುವ ಘಟನೆ ನಡೆದಿದೆ ಪೋಲೀಸ್ ಕಂಪ್ಲೇಂಟ್ ಕೊಟ್ಟರು ಕೊಲೆ ಮಾಡಿದ ಆರೋಪಿಗಳ ಮಾಹಿತಿ ದೊರೆತಿಲ್ಲಾ ಇಂದು ಮದಲಿಂಗನಾಳ ಗ್ರಾಮದ ಅವರ ಮನೆಗೆ ಮಾದಿಗ ದಂಡೋರ ಎಮ್.ಆರ್.ಎಚ್.ಎಸ್ ತಾಲೂಕು ಅಧ್ಯಕ್ಷರಾದ ಬಸವರಾಜ್.ಸಿ ಹಾದಿಮನಿ ಹಾಗೂ ಅವರ ತಂಡದೊಂದಿಗೆ ಭೇಟಿ ನೀಡಿ ನಡೆದ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಕೊಂಡರು ಹಾಗೂ ಧೈರ್ಯವಾಗಿ ಇರಿ ನಿಮ್ಮೊಂದಿಗೆ ನಾವು ಇದ್ದೇವೆ.

ಖಂಡಿತ ನಿಮಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹಾಗೂ ಸರ್ಕಾರದಿಂದ ಎಲ್ಲಾ ಸೌಲತ್ತುಗಳನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಒದಿಗಿಸುತ್ತೇವೆ. ಎಂದು ಧೈರ್ಯ ತುಂಬಿದರು ಹಾಗೂ ಹುಣಸಗಿ ಪೋಲೀಸ್ ಸ್ಟೇಷನ್ ಗೆ ಭೇಟಿ ನೀಡಿ ಕಾರ್ಯಾಚರಣೆ ಎಲ್ಲಿಯ ವರೆಗೂ ಬಂದಿದೆ ಎಂದು ಮಾಹಿತಿ ಪಡೆದರು.

ಕೂಡಲೇ ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯ ಒದಗಿಸಿ ಕೊಡಬೇಕೆಂದು ವಿನಂತಿ ಮಾಡಿ ಕೊಂಡರು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಬಸವರಾಜ್.ಸಿ ಹಾದಿಮನಿ. ಬಾಬು ವಾಗಿಣಿಗೇರಾ. ಲಕ್ಷ್ಮಣ. ಮಲ್ಲು ಹುಲಿಮನಿ. ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಹುಲಿಗೇಶ್. ರಾಜನಾಳ.ಹುಣಸಗಿ