ಗ್ರಾಮ ಮಟ್ಟದಲ್ಲಿ ಜನಪರ ಚಟುವಟಿಕೆಯಲ್ಲಿ – ತೊಡಗಿದವರಿಗೆ ಅಧಿಕಾರ.
ಮುದ್ದೇಬಿಹಾಳ ಸ.15

ಗ್ರಾಮ ಮಟ್ಟದಲ್ಲಿ ಸೇವಾ ಕಾರ್ಯ, ತೊಡಗಿಸಿ ಕೊಂಡವರು ದೇಶದ ಚಕ್ಕಾಣಿ ಹಿಡಿಯುವ ಅವಕಾಶ ಬಿಜೆಪಿ ಒದಗಿಸಿದೆ. ಇದೊಂದು ಆಂದೋಲನ ಕಾರ್ಯಕರ್ತರನ್ನು ತಯಾರಿಸುವ ಫ್ಯಾಕ್ಟರಿ ಇದ್ದಂತೆ, ಎಂದು ವಿಜಯಪುರ ಜಿಲ್ಲಾ ಸೇವಾ ಪಾಕ್ಷಿಕ ಕಾರ್ಯಕ್ರಮದ ಉಸ್ತುವಾರಿ ಸಂಜಯ್ ಪಾಟೀಲ್ ಹೇಳಿದರು. ಭಾಜಪ ಮಂಡಲ ಕಾರ್ಯದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಪ್ರಯುಕ್ತ 15 ದಿನಗಳ ಸೇವಾ ಪಾಕ್ಷಿಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಕರ್ನಾಟಕದಲ್ಲಿ ವಾರ್ಡ್ ಮಟ್ಟದ ಕಾರ್ಯಕರ್ತರು, ಪ್ರಕೋಷ್ಟಗಳ ಮುಖಂಡರು ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಪ್ರಧಾನಿಗಳ ಅಭಿವೃದ್ಧಿ ಕೆಲಸ ಹೇಳ ಬೇಕು. ಸೇವಾ ಪಾಕ್ಷಿಕ ಯಶಸ್ವಿ ಗೊಳಿಸಲು ಎಲ್ಲರೂ ಮುಂದಾಗ ಬೇಕು ಎಂದರು, ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಭಾಜಪ ನರೇಂದ್ರ ಮೋದಿ ನೇತೃತ್ವದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ವಿಶ್ವ ಮಟ್ಟದಲ್ಲಿ ಚರ್ಚೆ ಆಗುತ್ತಿವೆ ಎಂದು ಶಿಲ್ಪಾ ಕುದರಗೊಂಡ ಮಾತನಾಡಿ, ಮಂಡಲ ಅಧ್ಯಕ್ಷ ಜಗದೀಶ್ ಪಂಪಣ್ಣನವರ ಮಾತನಾಡಿದರು, ಮುನ್ನಾದಣಿ ನಾಡಗೌಡ, ಮಾಂತಗೌಡ ಪಾಟೀಲ್, ಬಿ.ಪಿ ಕುಲಕರ್ಣಿ, ಸೋಮನಗೌಡ ಪಾಟೀಲ್ (ನಡಹಳ್ಳಿ) ಮುತ್ತಣ್ಣ ಅಂಗಡಿ, ಶಿವನಗೌಡ ಶಿವನಗಿ, ಮಾಂತಗೌಡ ಕಾಶಿನಕುಂಟಿ, ಕಾರ್ಯದರ್ಶಿ ಸಂಜು ಬಾಗೇವಾಡಿ, ಸಂಗಮ ದೇವರಹಳ್ಳಿ, ಸಹನಾ ಬಡಿಗೇರ್, ಸಂಗಣ್ಣ ಹತ್ತಿ, ರಾಜಶೇಖರ್ ಹೊಳಿ, ಶಾಂತಪ್ಪ ನಾಯಕ್ ಮಕ್ಕಳ, ಇನ್ನೂ ಅನೇಕ ಪದಾಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ

