ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ – “ನನ್ನ ಮತ ನನ್ನ ಹಕ್ಕು” ಜಾಗೃತಿ ಜಾಥಾ.
ಕೊಟ್ಟೂರು ಸ.15

ಸೆಪ್ಟಂಬರ್-15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲಾಯಿತು. ಮಾನವ ಹಕ್ಕುಗಳ ರಕ್ಷಣೆ ಮತ್ತು ಪರಿಣಾಮಕಾರಿ ಸಾಕ್ಷತ್ಕಾರಕ್ಕೆ ಪ್ರಜಾಪ್ರಭುತ್ವವು ಅತ್ಯುನ್ನತವಾಗಿದೆ. ಭಾರತವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ವಿಶ್ವದ ಅತಿ ಹೆಚ್ಚು ಮತದಾರರನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದ್ದುದೆ. ಇದು ಭಾರತೀಯ ಪ್ರಜಾಪ್ರಭುತ್ವದ ವೈಶಿಷ್ಟ್ಯವಾಗಿದೆ. ಅಂತರಾಷ್ಟ್ರೀಯ ಪ್ರಜಾಭುತ್ವದ ದಿನವನ್ನು ಪ್ರತಿ ವರ್ಷ ಒಂದೊಂದು ಧ್ಯೇಯೋದ್ದೇಶದೊಂದಿಗೆ ಅಚರಿಸಲಾಗುತ್ತಿದೆ. ಈ ವರ್ಷ “ನನ್ನ ಮತ ನನ್ನ ಹಕ್ಕು” ಅಭಿಯಾನ ದೊಂದಿಗೆ ಆಚರಿಸಲಾಗುತ್ತಿದೆ ಎಂದು ತಹಶೀಲ್ದಾರಾದ ಅಮರೇಶ.ಜಿ ಕೆ ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ಶ್ರೀ ಮರಿ ಕೊಟ್ಟೂರೇಶ್ವರ ದೇವಸ್ಥಾನದಲ್ಲಿ ಡಾ, ಬಿ.ಆರ್ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ. ನಂತರ ಭಾರತದ ಸಂವಿಧಾನ ಪ್ರಸ್ತಾವನೆಯನ್ನು ಓದಿ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಡಾ, ಬಿ.ಆನಂದ್ ಕುಮಾರ್ ಇವರು ಮತದಾನ ಪ್ರತಿಯೊಬ್ಬ ನಾಗರೀಕರಿಗೆ ಭಾರತ ಸಂವಿಧಾನ ನೀಡಿದ ಹಕ್ಕಾಗಿದ್ದು ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ಸಂವಿಧಾನವನ್ನು ಬಲ ಪಡಿಸ ಬೇಕಿದೆ. ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾದ ಇಂದು ನಾವೆಲ್ಲರೂ ಮತದಾನ ಹಕ್ಕಿನ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂದರು.
ದಲಿತ ಸಂಘರ್ಷ ಸಮಿತಿಯ ಮುಖಂಡರಾದ ತೆಗ್ಗಿನಕೇರಿ ಕೊಟ್ರೇಶ್ ಹಾಗೂ ಬದ್ದಿ ಮರಿಸ್ವಾಮಿ ಇವರು ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ನೀಡಿದ ಆಶಯಗಳನ್ನು ಸಂರಕ್ಷಿಸಲು ಹಾಗೂ ಮುಂದಿನ ಪೀಳಿಗೆಗೆ ಅದರ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಜಗತ್ತಿನ ಬೃಹತ್ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಭಾರತವು ಬಲಿಷ್ಟ ಮತ್ತು ಸರ್ವ ಜನಾಂಗವು ಸಹ ಮತ ದಿಂದ ಜೀವಿಸಲು ಸಾಧ್ಯವಾಗಿರುವುದು ಭಾರತದ ಬಲಿಷ್ಠ ಸಂವಿಧಾನದ ಶಕ್ತಿಯಿಂದ ಎಂದು ಸಂವಿಧಾನದ ಮುಖ್ಯ ಧ್ಯೇಯೋದ್ದೇಶಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ, ಬಿ.ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಬಿ ದುರುಗಪ್ಪ, ಬಾಬು ಜಗಜೀವನರಾಂ ಸಂಘದ ಅಧ್ಯಕ್ಷರಾದ ಟಿ.ಹನುಮಂತಪ್ಪ ವಕೀಲರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಯೋಗೀಶ್ವರ ದಿನ್ನೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮರುಳನಗೌಡ, ಶಿಕ್ಷಣ ಇಲಾಖೆಯ ಇ.ಸಿ.ಒ ನಿಂಗಪ್ಪ ಮತ್ತು ಆನಂದ ದೇವರಕೊಳ, ಬಿ.ಆರ್.ಪಿ ರವೀಂದ್ರ, ನಿಲಯ ಮೇಲ್ವಿಚಾರಕರಾದ ವೀರೇಶ ತುಪ್ಪದ, ಹೆಚ್.ಎಂ ಸದಾನಂದ, ಬಸವರಾಜ, ಪಟ್ಟಣ ಪಂಚಾಯಿತಿ ಸಿಬ್ಬಂದಿ, ಸಿ.ಆರ್.ಪಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು