ವಿಶ್ವಕರ್ಮ ಪೂಜಾ ದಿನಾಚರಣೆ ಕಡೆಗಣಿಸಿ, ಸಮುದಾಯದ ಕೆಂಗಣ್ಣಿಗೆ ಗುರಿಯಾದ – ಪಿ.ಡಬ್ಲ್ಯೂ.ಡಿ ಎ.ಇ.ಇ ಈರಯ್ಯ. ಮಾಡಬಾಳಮಠ.

ಹುನಗುಂದ ಸ.17

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಪಿ.ಡಬ್ಲ್ಯೂ.ಡಿಯ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿಗಳು ಈರಯ್ಯ.ಮಾಡಬಾಳಮಠ ಇವರು ಈ ಇಲಾಖೆಯ ಡ್ರಾಯಿಂಗ್ ಆಫೀಸರ್ ಊರು ಎಡೆ ಬಂದ್ರು ಇವರಿಗೆ ಇವರ ಬಿಟ್ರಾ ಇನ್ನ ಯಾರಿಗೂ ಬರುವುದಿಲ್ಲಾ ಅನ್ನುವ ವಿಚಾರ ಸಾರ್ವತ್ರಿಕ ಸತ್ಯದಷ್ಟೇ ಸ್ಪಟಿಕ್ ದಷ್ಟೇ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಇಂದು ವಿಶ್ವಕರ್ಮ ಪೂಜಾ ಮಹೋತ್ಸವ ರಾಜ್ಯ ವ್ಯಾಪಿಯಾಗಿ ಮತ್ತು ಸರ್ಕಾರದ ಸುತ್ತೋಲೆ ಅನ್ವಯ ಜಿಲ್ಲಾ & ಆಯಾ ತಾಲೂಕಾ ವ್ಯಾಪ್ತಿಯಲ್ಲಿ ಆಚರಿಸುತ್ತಾರೆ.

ಆದರೆ ಯಾವುದೋ ಒಂದು ತ್ವರಿತದ ಕೆಲಸದ ನಿಮಿತ್ತ ಹುನಗುಂದ ಅನಿವಾರ್ಯವಾಗಿ ಹೋಗ ಬೇಕಾಗಿ ಬಂತು ಹುನಗುಂದ ತಹಶೀಲ್ದಾರ್ ಕಚೇರಿ & ತಾಲೂಕ ಪಂಚಾಯತ ವಾಯ್ ಪಿ.ಡಬ್ಲ್ಯೂ.ಡಿಗೆ ಹೋದೆ ಹೋಗಿ ಇಲ್ ಮೂಲ್ಯಾಗ್ ದುರಬಿನ್ ಹಿಡಿದು ಹುಡುಕಾಡಿದರೂ ಅಲ್ಲಿ ಯಾವುದೇ ತರಹದ ಪೂಜೆ ಪುನಸ್ಕಾರಗಳು ಮರೀಚಿಕೆ ಯಾಗಿದ್ದು. ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಹೋಗಿ ಬರುವ ಹಾದಿಯಲಿ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಹಾಗೂ ಹುನಗುಂದ ತಾಲೂಕ ವಿಶ್ವಕರ್ಮ ಕಟ್ಟಡ ಕಾರ್ಮಿಕರ ಕಾರ್ಪೆಂಟರ್ ಸಂಘದ ವತಿಯಿಂದ ವಿಶ್ವಕರ್ಮ ಪೂಜಾ ಮಹೋತ್ಸವ ಸಮಾರಂಭ ಅತ್ಯಂತ ಯಶಸ್ವಿಯಾಗಿ ಆಚರಿಸಲಾಯಿತು.

ಅದೇ ರೀತಿಯಾಗಿ ಹುನಗುಂದ ದಿಂದ ತಿರುಗಿ ಬರುವಾಗ ಅಮೀನಗಡಕ್ಕೆ ಬಂದೆ ಅಷ್ಟರಲ್ಲಿ ತೇರಿನ ಬಜಾರ್ ಮೂಲಕವಾಗಿ ಚಿತ್ತರಗಿ ಕ್ರಾಸ್ ನಿಂದ ರಾಯಚೂರು ಬೆಳಗಾವಿ ಎಸ್.ಎಚ್ ಮೂಲಕ ಹಾಯ್ದು ಕಾಳಮ್ಮ ದೇವಸ್ಥಾನಕ್ಕೆ ಬಂದು ವಿಶ್ವಕರ್ಮ ಸಮುದಾಯದ ಹಿರಿಯರು & ಸುಮಂಗಲೆಯರು ಭಾಜ ಭಜಂತ್ರಿ ಮೂಲಕ ಭಾಗಿಯಾಗಿ ಕಾಳಮ್ಮ ದೇವಿ ಭಾವ ಚಿತ್ರ ಟ್ರ್ಯಾಕ್ಟರ್ ಮೂಲಕ ಮೆರವಣಿಗೆ ಹೊಂದಿಗೆ ಕಾಳಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಕೈಂಕರ್ಯಗಳು ಯಶಸ್ವಿಯಾಗಿ ಕೈಗೊಂಡರು.

ವಿಶ್ವಕರ್ಮ ಪೂಜಾ ದಿನಾಚರಣೆ ಪ್ರಯುಕ್ತ ಸರ್ಕಾರದ ಸುತ್ತೋಲೆ ಅನ್ವಯ ಪೂಜಾ ಕೈಂಕಾರ್ಯಗಳಲ್ಲಿ ಭಾಗಿ ಯಾಗಿರುವುದಿರಲಿ ಕಡೆ ಪಕ್ಷ ತಾವೊಬ್ಬ ಸರ್ಕಾರಿ ನೌಕರರಾಗಿ ಕೆಳಹಂತದ ನೌಕರರಿಗೆ ಹೇಳಿ ಪೂಜೆ ಪುನಸ್ಕಾರಗಳು ಮಾಡಿಸಿದೆ ವಿಶ್ವಕರ್ಮ ಸಮುದಾಯದ ಕೆಂಗಣ್ಣಿಗೆ ಗುರಿ ಯಾಗಿದ್ದಾರೆ.

ಇಂತಹ ಘಮಂಡಿ ಗಿರಾಕಿ ಹುನಗುಂದ ತಾಲೂಕಿಗೆ ವಕ್ಕರಸಿ ಕೊಂಡಿದ್ದು ತಾಲೂಕಿನ ಜನತೆ ದುರ್ದೈವ ಅಂತಾ ಸಾರ್ವಜನಿಕರ ವಲಯದಲ್ಲಿ ಪಿಸು ಮಾತುಗಳು ಬಲವಾಗಿ ಕೇಳಿಬಂದಿದೆ.

ಮತ ಕ್ಷೇತ್ರದ ಶಾಸಕರು ಇಂತವರ ಬಗ್ಗೆ ಸ್ವಲ್ಪ ಕಣ್ಣಾಡಿಸಿ ನೋಡಿ ಏನರ್ ಹೇಳುವರೋ ಅಥವಾ ನಮಗ್ಯಾಕ ಉಸಾಬರಿ ಅಂತ ಕೈತೋಳೆದು ಟವೆಲ್ ಲ್ಲಿ ಆಟ ಆಡಿಸೋರೋ ಕಾಯ್ದು ನೋಡೋಣ.

ಉತ್ತರ ಕರ್ನಾಟಕದ ಸಾಹುಕಾರ ಎಂದೆ ಖ್ಯಾತಿ ಪಡೆದ, ದಲಿತರ ಧ್ವನಿ, ಮೌಢ್ಯಗಳ ವಿರೋಧಕ, ದಲಿತರ ಪರ ಅಸಂಖ್ಯಾತರ ಆರಾಧಕ, ನೇರ ನಿಷ್ಠುರವಾದಿ ಪಿ.ಡಬ್ಲ್ಯೂ.ಡಿ ಇಲಾಖೆಯ ಸಚಿವರಾದ ಮಾನ್ಯ ಸತೀಶ್ ಜಾರಕಿಹೊಳಿ ಸಾಹೇಬ್ರು ಈ ಹುನಗುಂದ ಪಿ.ಡಬ್ಲ್ಯೂ.ಡಿ ಎಂ.ಇ.ಇ ಈರಯ್ಯ.ಮಾಡಬಾಳಮಠ ಸರ್ಕಾರದ ಸುತ್ತೋಲೆ ಸ್ಪಷ್ಟವಾಗಿ ಉಲ್ಲಂಘನೆ ಮಾಡಿ ಒಂದು ಸಮುದಾಯದ ಕೆಂಗಣ್ಣಿಗೆ ಗುರಿ ಯಾಗಿದ್ದಾರೆ. ಈ ವಿಡಿಯೋ ತುಣುಕುಗಳು ನೋಡಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರ ಮೂಲಕ ಆಕ್ರೋಶದ ಆಗ್ರಹವಾಗಿದೆ ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button