ಚಪ್ಪಲಿ ಹಾಕೊಂಡು ಸಂವಿಧಾನ ಓದಿದ – ಅಜ್ಞಾನಿ ಸಮಾಜ ಕಲ್ಯಾಣ ಅಧಿಕಾರಿ ನಟರಾಜ.
ಮಾನ್ವಿ ಸ.17





ದಲಿತ ನಾಯಕರೆ ಸಿಡಿದ್ದೇಳೋ ಕಾಲ ದೂರ ಉಳಿದೆಲ್ಲಾ ಸಿಡಿ ಗುಂಡುಗಳಾಗಿರಿ ಸೀದಾ ಸಾದಾ ಭಾಷೆಯಲ್ಲಿ ಹೇಳಿದರೆ ಅರ್ಥ ಆಗೋ ಹಾಗೆ ಕಾಣಿಸುವುದಿಲ್ಲ ನಿನಗೆ ಸರಿ “ಮ” ಪೂಜೆ ಆದಾಗ ಏನರ್ ಸ್ವಲ್ಪ ಜ್ಞಾನೋದಯ ಆಗಬಹುದಾ…..?
ಡಾಕ್ಟರ್, ಬಿ.ಆರ್ ಅಂಬೇಡ್ಕರ್ ಅವರು ಬರೆದ ಸಂವಿಧಾನದ ಪ್ರತಿಯೊಂದು ಅಕ್ಷರಕ್ಕೆ ವಿಶ್ವದಲ್ಲಿಯೇ ಮಾನ್ಯತೆ ಇದೆ. ಆದರೆ ಮಾನ್ವಿ ಸಮಾಜ ಕಲ್ಯಾಣ ಇಲಾಖೆ ತಾಲೂಕ ಅಧಿಕಾರಿ ನಟರಾಜ ಎಂಬಾತನು ಶಿಕ್ಷಣ ಪಡೆದಿದ್ದಾರೆ ಅಥವಾ ಇಲ್ಲವಾ ಎಂಬುದು ತಿಳಿಯದಾಗಿದ್ದರಿಂದ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಚಪ್ಪಲಿ ಹಾಕೊಂಡು ಸಂವಿಧಾನ ಪೀಠಿಕೆ ಓದಿದ್ದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ವಿಶ್ವದಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರ ನಮ್ಮದು.ಆದರೆ ಮಾನ್ವಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಟರಾಜ ಸಾಹೇಬ್ರು ಅಂಬೇಡ್ಕರ್ ಅವರು ಬರೆದ ಸಂವಿಧಾನದಿಂದಲೇ ಸರಕಾರದ ಕೆಲಸ ಮಾಡಿ ಸಂಬಳ ಪಡೆಯುತ್ತಿದ್ದಾರೆ.

ಆದರೂ ಅಂಬೇಡ್ಕರ್ ಅವರ ಕೊಡುಗೆಯಿಂದಲೇ ನಾನು ಮತ್ತು ನನ್ನ ಕುಟುಂಬ ಜೀವನ ಸಾಗಿಸುತ್ತೇವೆ ಎಂಬ ಆಲೋಚನೆಯು ಸಹ ನಟರಾಜ ಮಾಡದೆ ಉದ್ದೇಶ ಪೂರ್ವಕವಾಗಿ ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ಅಗೌರವ ಸಲ್ಲಿಸುವ ಸಲುವಾಗಿಯೇ ಚಪ್ಪಲಿ ಹಾಕೊಂಡಿದ್ದಾರೆಂದರೆ ನಟರಾಜನಿಗೆ ಜ್ಞಾನ ಅನ್ನೋದು ಇದೇನಾ ಇಲ್ಲವೆಂಬುದು ತಿಳಿಯದಾಗಿದೆ.ಮಾನ್ವಿ ಸಮಾಜ ಕಲ್ಯಾಣ ಇಲಾಖೆ ಅಂದರೆ ದೊಡ್ಡ ಇಲಾಖೆ, ಆದರೆ ಯಾರೆ ಅಚಾತುರ್ಯವಾಗಿ ಸಂವಿಧಾನಕ್ಕೆ ಅಗೌರವ ಸಲ್ಲಿಸುವ ಪ್ರಯತ್ನ ಮತ್ತು ಸಂದರ್ಭಗಳು ಬಂದರೆ ಅದನ್ನು ಸರಿ ಪಡಿಸಿ ಸಂವಿಧಾನಕ್ಕೆ ಹಾಗೂ ಪೀಠಿಕೆಗೆ ಗೌರವ ಸಲ್ಲಿಸುವ ಕೆಲಸ ಮಾಡೋಣ ಎಂದು ನಟರಾಜ ತಿಳಿ ಹೇಳಬಹುದಾಗಿತ್ತು ಆದರೆ ತಾನೇ ಎಡವಟ್ಟು ಮಾಡಿ ಕೊಂಡಿದ್ದಾನೆಂದು ದಲಿತ ಸಂಘರ್ಷ ಸಮಿತಿ ಮುಖಂಡರು ಕಿಡಿಕಾರಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ