ವಿಶ್ವಕರ್ಮ ಸಮಾಜದವರು – ಶ್ರಮ ಜೀವಿಗಳು.

ಆಲಮೇಲ ಸ.18

ವಿಶ್ವಕರ್ಮ ಸಮಾಜದವರು ಶ್ರಮ ಜೀವಿಗಳು, ಇತರ ಎಲ್ಲಾ ಸಮಾಜದವ ರೊಂದಿಗೆ ಉತ್ತಮ ಬಾಂಧವ್ಯ ಹೊಂದಿದವ ರಾಗಿದ್ದಾರೆ ಎಂದು ಆಲಮೇಲ ವಿರಕ್ತ ಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮಿಗಳು ಹೇಳಿದರು. ಅವರು ಪಟ್ಟಣದ ಕಾಳಿಕಾ ದೇವಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ವಿಶ್ವಕರ್ಮ ಸಮಾಜದವರು ಪ್ರತಿಯೊಂದು ಗ್ರಾಮದಲ್ಲಿರುವ ಎಲ್ಲಾ ಸಮಾಜದವರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು ಅವರಿಗೆ ಅವಶ್ಯಕತೆ ಇರುವ ರೈತರಿಗೆ, ಗ್ರಾಮಸ್ಥರಿಗೆ ಪ್ರತಿಯೊಬ್ಬರಿಗೂ ಕೂಡ ಅವಶ್ಯಕವಿರುವ ಎಲ್ಲಾ ಸಲಕರಣೆಗಳನ್ನು ಮಾಡುವ ಮೂಲಕ ಇತರರಿಗೆ ಸಹಾಯಕ ಜೀವಿ ಯಾಗಿದ್ದಾರೆ.

ಧರ್ಮ ಸಭೆಯ ದಿವ್ಯ ಸಾನಿಧ್ಯವನ್ನು ಈರಯ್ಯ ಮಹಾ ಸ್ವಾಮಿಗಳು ಮೂರುಜಾವದ ಮಠ,ಮುಖ್ಯ ಅತಿಥಿಗಳಾಗಿ ಆಲಮೇಲ ತಹಸಿಲ್ದಾರ್ ಧನಪಾಲ ಶೆಟ್ಟಿ, ಪಿ.ಎಸ್.ಐ ಅರವಿಂದ್ ಅಂಗಡಿ, ಡಾ, ಪತ್ತಾರ, ವಿಶ್ವಕರ್ಮ ಸಮಾಜದ ಹಿರಿಯರಾದ ಲಚ್ಚಪ್ಪ ಪತ್ತಾರ್ ಈರಣ್ಣ ಪತ್ತಾರ, ಚಂದ್ರಕಾಂತ ಅಕ್ಕಲಕೋಟ, ಕಾಶಿನಾಥ್ ಬಡಿಗೇರ, ಈರಣ್ಣ ಪತ್ತಾರ, ಹಾಗೂ ವಿಶ್ವಕರ್ಮ ಸಮಾಜದ ಹಿರಿಯರು ಭಾಗವಹಿಸಿದ್ದರು.ಸಭೆಯಲ್ಲಿ ದಿವಂಗತ ಮೌನೇಶ ಆಚಾರ್ಯರ ಆಸೆಯಂತೆ ಕುಂಭ ಮೇಳಕ್ಕೆ ಹೋಗಿ ಬಂದ ಭಕ್ತಾದಿಗಳಿಗೆ ಸನ್ಮಾನಿಸಿ ಗೌರವಿಸಿ ಅವರ ಕನಸನ್ನು ನನಸು ಗೊಳಿಸುವಲ್ಲಿ ಅವರ ಶ್ರೀಮತಿ ಯವರು ಭಾಗಿಯಾಗಿದ್ದರು.

ಹಾಗೂ ವಿಶ್ವಕರ್ಮರ ಜಯಂತ್ಯೋತ್ಸವದ ಕಾರ್ಯಕ್ರಮಕ್ಕೆ ಆಲಮೇಲ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಹಿರಿಯರು, ಯುವಕರು, ತಾಯಂದಿಯರು ಆಗಮಿಸಿದ್ದರು. ಶಿಕ್ಷಕ ಅಶೋಕ್ ಬಡಿಗೇರ ಸ್ವಾಗತಿಸಿದರು. ಪ್ರೊ. ಗಂಗಾಧರ ಪತ್ತಾರ ನಿರೂಪಿಸಿದರು.ಮಲ್ಲಿಕಾರ್ಜುನ ಉಪ್ಪಿನ ಹಾಗೂ ಸಂಗಡಿಗರಿಂದ ಸಂಗೀತ ಸೇವೆ ಜರುಗಿತು. ಜಯಂತಿ ಉತ್ಸವ ಮತ್ತು ಧರ್ಮ ಸಭೆಗೆ ಆಗಮಿಸಿದ ವಿಶ್ವಕರ್ಮರ ಭಕ್ತಾದಿಗಳಿಗೆ ಅನ್ನ ಪ್ರಸಾದ ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗಿತ್ತು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ ಹಿರೇಮಠ ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button