ಸರ್ಕಾರದಿಂದ ಕೈ ಬಿಟ್ಟು ಹೋದ ಮಾಜಿ ದೇವದಾಸಿಯರ ಸರ್ಕಾರದ ಆದೇಶದಂತೆ ಸಮೀಕ್ಷೆ ಮಾಡಲು ಅಧಿಕಾರಿಗಳಿಗೆ – ಕಟ್ಟುನಿಟ್ಟಿನ ಸೂಚನೆ ನೀಡಿದ ಶಾಸಕರು.
ಕೂಡ್ಲಿಗಿ ಸ.19





ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ವತಿಯಿಂದ ಹಾಗೂ ತಾಲೂಕ ಆಡಳಿತ ಇವರ ಸಮ್ಮುಖದಲ್ಲಿ ಮಾನ್ಯ ಶಾಸಕರಾದ ಎನ್.ಟಿ ಶ್ರೀನಿವಾಸ್ ಇವರ ಅಧ್ಯಕ್ಷತೆಯಲ್ಲಿ ನಡೆದ ಮಾಜಿ ದೇವದಾಸಿ ಸಮೀಕ್ಷೆಯ ಕುರಿತು ಕೂಡ್ಲಿಗಿ ತಾಲೂಕಿನ ನೂರಾರು ಮಾಜಿ ದೇವದಾಸಿಯರ ಸಮ್ಮುಖದಲ್ಲಿ ಹಾಗೂ ಹಲವು ಇಲಾಖೆಗಳ ಸಮ್ಮುಖದಲ್ಲಿ ಈ ಹಿಂದೆ ಸರ್ಕಾರಿ ಅಧಿಕಾರಿಗಳು ಕೈ ಬಿಟ್ಟು ಹೋದ ಮಾಜಿ ದೇವದಾಸಿಯರ ಮರು ಸಮೀಕ್ಷೆ ಮಾಡಲು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ, ಹಾಗೂ ತಾಲೂಕ ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಹೀಗೆ ಹಲವು ಇಲಾಖೆಗಳ ಸಮ್ಮುಖದಲ್ಲಿ ಮರು ಸಮೀಕ್ಷೆ ಮಾಡಲು ಸರ್ಕಾರ ಆದೇಶ ಹೊರಡಿಸಿದ್ದು.
ಸರ್ಕಾರದ ಆದೇಶದಂತೆ ಮಾಜಿ ದೇವದಾಸಿಯ ಮಹಿಳೆಯರನ್ನು ಸರ್ಕಾರದ ನಿಯಮಗಳ ಪ್ರಕಾರ ಫಲಾನುಭವಿಗಳ ದಾಖಲಾತಿಗಳನ್ನು ಒಳ ಗೊಂಡಂತೆ ಆನ್ಲೈನ್ ಡಾಟಾ ಮೂಲಕ ಸಮೀಕ್ಷೆ ಪೂರ್ಣ ಗೊಳಿಸಲಾಗುತ್ತದೆ.

ಎಂದು ಸಿಡಿಪಿಓ ಇಲಾಖೆ ಅಧಿಕಾರಿಯಾದ ಮಾಲಂಬಿ ರವರು ತಿಳಿಸಿದರು. ಹಾಗೆ ಈ ಒಂದು ಸಮೀಕ್ಷೆಗೆ ಸರ್ಕಾರವು ಮಾಜಿ ದೇವದಾಸಿಯರ ಸರ್ವೇ ಪಟ್ಟಿಗೆ ಸೇರ್ಪಡೆ ಯಾಗಲು ಅರ್ಹತೆಗೆ ಹಲವು ದಾಖಲಾತಿಗಳನ್ನು ಒಳ ಗೊಂಡಂತೆ ಸೇರ್ಪಡೆ ಮಾಡಲಾಗುವುದು ಎಂಬ ಆದೇಶವಿದ್ದು,ಈ ಸಂದರ್ಭದಲ್ಲಿ ಮಾನ್ಯ ಶಾಸಕರು ತಾಲೂಕಿನ ದೇವದಾಸಿ ತಾಯಂದಿರ ಅನೇಕ ಸಮಸ್ಯೆಗಳ ಸವಾಲುಗಳನ್ನು ಅರಿತು ಸರ್ಕಾರವನ್ನು ಗಮನ ಸೆಳೆದು ಅಧಿವೇಶನದ ಸಂದರ್ಭದಲ್ಲಿ ದೇವದಾಸಿ ತಾಯಂದಿರ ಪರವಾಗಿ ಧ್ವನಿ ಎತ್ತಿ ಮಾತನಾಡಿ ಕೊಟ್ಟ ಮಾತಿನಂತೆ ನಡೆದು ಕೊಂಡ ಕೂಡ್ಲಿಗಿ ಕ್ಷೇತ್ರದ ಮನೆಯ ಮಗ ಎನ್.ಟಿ ಶ್ರೀನಿವಾಸ್ ಹಾಗೆ ಶಾಸಕರು ಸಮೀಕ್ಷೆ ಕುರಿತು ಅಧಿಕಾರಿಗಳಿಗೆ ಈ ಹಿಂದೇ ಸರ್ಕಾರದ ಅಧಿಕಾರಿಗಳು ಸಮೀಕ್ಷೆ ಮಾಡದೆ ಬಿಟ್ಟು ಹೋದಂತ ಮಾಜಿ ದೇವದಾಸಿಯರ ಕಚೇರಿಯಿಂದ ಪ್ರತಿ ಹಳ್ಳಿಗಳಲ್ಲಿ ಯುವಕರಿಗಳಿಂದ ಪಟ್ಟಿ ಮಾಡಿಸಿ ಅಂಕಿ ಅಂಶಗಳನ್ನು ತೆಗೆದು ಕೊಂಡು ನಿಜವಾದಂತ ದೇವದಾಸಿ ತಾಯಂದಿರಿಗೆ ಸರ್ಕಾರದ ಮೂಲಭೂತ ಸೌಕರ್ಯಗಳು ಸಿಗುವಂತೆ ಸರ್ಕಾರದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಹಾಗೆ ಈ ಸಂದರ್ಭದಲ್ಲಿ ದಲಿತ ಮುಖಂಡನಾದ ರಾಘವೇಂದ್ರ ಸಾಲುಮನೆ ರವರು ವೇದಿಕೆ ಮೇಲೆ ಇದ್ದಂತಹ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಸರ್ಕಾರವು ಸಮೀಕ್ಷೆ ಮಾಡುತ್ತಿದ್ದು ಈ ಸಮೀಕ್ಷೆಯಲ್ಲಿ ಸರ್ವೇ ಪಟ್ಟಿಯ ಅರ್ಹತೆಗೆ 1984 ರ ವಯಸ್ಸಿಗೆ ಇರುವಂತವರನ್ನು ಮಾತ್ರ ತೆಗೆದು ಕೊಳ್ಳುವ ಮಾತನ್ನು ತಹಸೀಲ್ದಾರ್ ನೇತ್ರಾವತಿ ರವರು ಹೇಳುತ್ತಾರೆ. 30 ವರ್ಷ ಮೇಲೆ ಇರುವಂತೆ ಮಹಿಳೆಯರನ್ನು ಪರಿಗಣೆಗೆ ತೆಗೆದು ಕೊಳ್ಳಬೇಕು ಹಾಗೂ ಬೇಕಾಗುವಂತಹ ದಾಖಲಾತಿಗಳನ್ನು ಕೇಳಿದಂಥ ಸಂದರ್ಭದಲ್ಲಿ ಮಾಜಿ ದೇವದಾಸಿಯರ ವಂಶವೃಕ್ಷ ಹಾಗೂ ಜಿಲ್ಲಾ ವೈದ್ಯಧಿಕಾರಿಗಳಿಂದ ವಯಸ್ಸಿನ ದೃಢೀಕರಣ ಪತ್ರ ಕೇಳಿದೆ ಮತ್ತು ಸರ್ಕಾರವು 2018 ರಲ್ಲಿ ದೇವದಾಸಿ ಮಹಿಳೆಯರಿಗೆ ಈ ದೇವದಾಸಿ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸರ್ಕಾರವು ಕೈಗೊಂಡಂತಹ ಒಂದು ಯೋಜನೆಯು ದೇವದಾಸಿಯರಿಗೆ ಕೊನೆ ಗಾಣಿಸಲು ಹಾಗೂ ದೇವದಾಸಿ ಪದ್ಧತಿಯನ್ನು ಮುಕ್ತಯ ಮಾಡಲು 2025 ರ ಅವಧಿಯಲ್ಲಿ ಸಿದ್ದರಾಮಯ್ಯನವರ ಸರ್ಕಾರ ಮಾಜಿ ದೇವದಾಸಿಯರ ಮರು ಸಮೀಕ್ಷೆಗೆ ಸರ್ಕಾರದ ಸರ್ವೇ ಪಟ್ಟಿಯಲ್ಲಿ ಸೇರಿಸಲು ಮಹತ್ವವಾದ ತೀರ್ಮಾನವನ್ನು ತೆಗೆದು ಕೊಂಡು ಈ ಸರ್ವೇ ಕೊನೆ ಸರ್ವೇ ಆಗಿದ್ದು ಎಂದು ಸರ್ಕಾರ ಆದೇಶ ಹೊರಡಿಸಿದೆ.

ಅನೇಕ ಮಾಜಿ ದೇವದಾಸಿ ಮಹಿಳೆಯರು ಸರ್ಕಾರದ ಸೌಲಭ್ಯಗಳನ್ನು ಪಡೆಯದೆ ತಾಯಂದಿರು ಮರಣ ಹೊಂದಿದ್ದಾರೆ. ಆದ್ದರಿಂದ ಅವರ ಮಕ್ಕಳಿಗಾದರೂ ಸರ್ಕಾರದ ಸೌಲಭ್ಯಗಳು ಸಿಗುವಂತಾಗಲಿ ಹಾಗೆ ದೇವದಾಸಿ ಮಕ್ಕಳ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಂಡರ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ಸಹಾಯಧನ ನೀಡುತ್ತಿರುವುದನ್ನು ಈ 2025 ನೇ. ಸಾಲಿಗೆ ಸೇರುವ ಮಾಜಿ ದೇವದಾಸಿಯರ ಮಕ್ಕಳಿಗೆ 2018 ರಿಂದ ಚಾಲ್ತಿ ಯಲ್ಲಿರುವಂತಹ ಈ ಯೋಜನೆಯನ್ನು ಈಗಿನ ಸರ್ವೇ ಪಟ್ಟಿಯಲ್ಲಿ ಸೇರುವಂತಹ ಮಾಜಿ ದೇವದಾಸಿಯ ಮಕ್ಕಳಿಗೆ ಆ ಸೌಲಭ್ಯಗಳು ಸಿಗುವಂತೆ ಘನ ಸರ್ಕಾರದ ಹತ್ತಿರ ಮಾನ್ಯ ಎನ್.ಟಿ ಶ್ರೀನಿವಾಸ್ ಶಾಸಕರು ಮಾತನಾಡಬೇಕು ಹಾಗೆ ಆ ತಾಯಂದಿರಿಗೆ ಪೆನ್ಷನ್ ಹಾಗೂ ಇನ್ನಿತರ ಮಕ್ಕಳಿಗೆ ಸೌಲಭ್ಯಗಳು ಸಹ ಸಿಗುವಂತಾಗಬೇಕು ಎಂದು ನಮ್ಮ ಬೇಡಿಕೆಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ನೇಹ ಸಂಸ್ಥೆಯ ಪದಾಧಿಕಾರಿಗಳಾದ ಸರೋಜಮ್ಮ ಹಾಗೂ ರಾಧಮ್ಮ ಇವರು ಸಹ ಮಾಜಿ ದೇವದಾಸಿ ತಾಯಂದಿರ ಸರ್ಕಾರದ ಸಮೀಕ್ಷೆ ಪಟ್ಟಿಯಲ್ಲಿ ಸೇರಿಸಲು ಹಾಗೂ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸುಮಾರು ವರ್ಷಗಳಿಂದ ಸಂಪೂರ್ಣವಾದಂತ ಮಾಹಿತಿಯನ್ನು ಅಧಿಕಾರಿಗಳ ಸಮ್ಮುಖದಲ್ಲಿ ತಿಳಿಸಿದರು. ಅನೇಕ ಮುಖಂಡರುಗಳು ಇಲಾಖೆ ಅಧಿಕಾರಿಗಳು ನೂರಾರು ಮಾಜಿ ದೇವದಾಸಿ ಮಹಿಳೆಯರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು. ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ ಸಾಲುಮನೆ ಕೂಡ್ಲಿಗಿ