ಬೆಳೆ ನಷ್ಟ ಪರಿಹಾರ – ನೀಡುವಂತೆ ಮನವಿ.
ಮಾನ್ವಿ ಸ.19





ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜನಪರ ಬಣ ವತಿಯಿಂದ ತಹಶೀಲ್ದಾರರಿಗೆ ಉಪ ತಹಸೀಲ್ದಾರ್ ಫಕ್ರುದ್ದೀನ್ ರವರ ಮೂಲಕ ಮನವಿ ಸಲ್ಲಿಸಿ ಕರ್ನಾಟಕ ರಕ್ಷಣಾ ವೇದಿಕೆ ಜನಪರ ಬಣ ರಾಜ್ಯಾಧ್ಯಕ್ಷರಾದ ಶ್ರೀಕಾಂತ ಪಾಟೀಲ್ ಗೂಳಿ ಮಾತನಾಡಿ ತಾಲೂಕಿನ ಜಾಗೀರ ಪನ್ನೂರು, ಯಡಿವಾಳ, ನಲ್ಗಂದಿನ್ನಿ, ಚಿಕ್ಕಕೋಟ್ನೆಕಲ್, ದೇವಿಪುರ, ಖರಬದಿನ್ನಿ, ಮುದ್ದಂಗುಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತರು ಬೆಳೆದ ಹತ್ತಿ ಬೆಳೆ ಅತಿವೃಷ್ಟಿಯಿಂದಾಗಿ ಹಾಳಗಿದ್ದು ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ ಆದ್ದರಿಂದ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿ ರೈತರಿಗೆ ಅಗತ್ಯವಾದ ಬೆಳೆ ನಷ್ಟದ ಪರಿಹಾರ ನೀಡುವಂತೆ ಕೋರಿದರು.ಇರ್ಫಾನ್‌ಧಣಿ, ಇಬ್ರಾಹಿಂಖುರೇಷಿ, ರಂಗನಾಥನಾಯಕ, ವಿಶ್ವನಾಥ್‌ಪವಾರ, ಕೃಷ್ಣದಾನಿ ಗಂಗಾಧರ ಪವಾರ, ಸಂಗನಗೌಡ, ಲಿಂಗಪ್ಪ, ರಂಗರಾಜ್ ಕುಲಕರ್ಣಿ ಸೇರಿದಂತೆ ಇನ್ನಿತರರು ಇದ್ದರು.
ಬಾಕ್ಸ್ ನ್ಯೂಸ್:-
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜನಪರ ಬಣ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕ ವರದಿಗಾರರು. ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕು.ಮಾನ್ವಿ