ವಿಶ್ವಕರ್ಮ ಸಮಾಜಕ್ಕೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಶಕ್ತಿ ತುಂಬವ ಕಾರ್ಯ ಸರ್ಕಾರ ಮಾಡಬೇಕು – ಕೆ.ಕರಿಯಪ್ಪ.
ಸಿಂಧನೂರು ಸ.19





ನಗರದ ಗಂಗಾವತಿ ರಸ್ತೆಯ ಶ್ರೀ ಭಗವಾನ್ ವಿರಾಟ್ ವಿಶ್ವಕರ್ಮ ವೃತ್ತದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಶ್ರೀ ವಿರಾಟ್ ವಿಶ್ವಕರ್ಮ ವೃತ್ತಕ್ಕೆ ವಿಶೇಷ ಪೂಜೆ ಸಲ್ಲಿಸಿ ಗಣ್ಯ ವ್ಯಕ್ತಿಗಳಿಂದ ಪುಷ್ಪರ್ಚನೆ ಮಾಡುವ ಮೂಲಕ ವಿಶ್ವಕರ್ಮ ಜಯಂತಿ ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡ ಕೆ.ಕರಿಯಪ್ಪ ಮಾತನಾಡಿ ಇಡೀ ಜಗತ್ತಿನಲ್ಲಿ ಪಂಚ ಕುಲ ಕಸುಬುಗಳನ್ನು ಮಾಡುವ ಏಕೈಕ ಸಮಾಜ ವಿಶ್ವಕರ್ಮ ಸಮಾಜ. ಬ್ರಹ್ಮಾಂಡ ಸೃಷ್ಟಿಕರ್ತ ವಿಶ್ವಕರ್ಮ. ಪ್ರಪಂಚದ ಪ್ರಥಮ ಇಂಜಿನಿಯರ್ ವಿಶ್ವಕರ್ಮನೇ ಆಗಿದ್ದಾನೆ. ವಿಶ್ವಕರ್ಮರು ಕಾಯಕ ಯೋಗಿಗಳಾಗಿ ರೈತರ ಬೆನ್ನೆಲುಬಾಗಿ ದೇಶಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೃಹತ್ ಯಂತ್ರೋಪಕರಣಗಳು ಮಾರುಕಟ್ಟೆಗೆ ಬಂದು ಕೈಗಳಿಗೆ ಕೆಲಸಗಳು ಇಲ್ಲದಂತಾಗಿವೆ. ಇದರಿಂದಾಗಿ ವಿಶ್ವಕರ್ಮ ಸಮಾಜದ ಪಂಚ ಕುಲಕಸುಬುಗಳು ಮರೆ ಮಾಚುತ್ತಿವೆ.ಈ ಸಮುದಾಯ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಆರ್ಥಿಕವಾಗಿ, ಹಿಂದುಳಿದಿದೆ ಸರ್ಕಾರ ಕೂಡಲೇ ವಿಶ್ವಕರ್ಮ ಸಮಾಜಕ್ಕೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಶಕ್ತಿ ತುಂಬವ ಕಾರ್ಯ ಮಾಡಬೇಕು ಎಂದು ತಿಳಿಸಿದರು.

ಇದೇ ವೇಳೆ ವಿಶ್ವಕರ್ಮ ಮಾಜಿ ಅಧ್ಯಕ್ಷ ವೀರಭದ್ರಪ್ಪ ಹಂಚಿನಾಳ ಮಾತನಾಡಿ ಇಡೀ ರಾಜ್ಯದಲ್ಲಿ ಸರ್ಕಾರದಿಂದ ವಂಚಿತವಾದ ಸಮಾಜ ಯಾವುದಾದರು ಇದ್ದರೆ ಅದು ವಿಶ್ವಕರ್ಮ ಸಮಾಜ.ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ಏಕೈಕ ಸಮಾಜ. ರಾಜಕೀಯವಾಗಿ ಶೈಕ್ಷಣಿಕವಾಗಿ ಆರ್ಥಿಕತವಾಗಿ ಅತ್ಯಂತ ಹಿಂದುಳಿದಿದೆ.ಈ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಗಬೇಕಾದರೆ ನಾವುಗಳೆಲ್ಲರೂ ಇದೇ ಸೆಪ್ಟೆಂಬರ್ 22 ರಿಂದ ಆರಂಭವಾಗುವ ಜಾತಿ ಸಮೀಕ್ಷೆ ವೇಳೆ ಜಾತಿ ಕಾಲಂನಲ್ಲಿ ವಿಶ್ವಕರ್ಮ ಎಂದು ಬರೆಸಬೇಕು. ಈ ಸಮುದಾಯಕ್ಕೆ ನ್ಯಾಯ ಸಿಕ್ಕಾಗ ಮಾತ್ರ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು.ವಿಶ್ವಕರ್ಮ ಜಯಂತಿ ಸರ್ಕಾರದ ವತಿಯಿಂದ ಆಚರಿಸುವುದಕ್ಕೆ ನಮ್ಮ ಸಮಾಜದ ಹೋರಾಟಗಾರ ಕೆ.ಪಿ.ನಂಜುಂಡಿ ಅವರೇ ಕಾರಣ.ನಮ್ಮಲ್ಲಿ ಒಗ್ಗಟ್ಟು ಇದ್ದರೆ ಮಾತ್ರ ಇಂತಹ ಜಯಂತಿಗಳನ್ನು ಸರ್ಕಾರದ ವತಿಯಿಂದ ಆಚರಿಸಲು ಸಾಧ್ಯ ಎಂದರು.
ಈ ಸಂಧರ್ಭದಲ್ಲಿ ಪರಮ ಪೂಜ್ಯ ಶ್ರೀ ವೆಂಕಟೇಶ್ ಸ್ವಾಮಿಗಳು ವಿಶ್ವಕರ್ಮ ಏಕದಡಂಗಿ ಮಠ ಪಗಡದಿನ್ನಿ,ಬಿಜೆಪಿ ಮುಖಂಡ ಕೆ ಕರಿಯಪ್ಪ,ತಾಲೂಕ ಅಧ್ಯಕ್ಷ ಮೌನೇಶ ತಿಡಿಗೋಳ,ಅಮರೇಗೌಡ ಮಲ್ಲಾಪುರ,ನಭಿ ಅನಾಗವಾಡಿ, ಮಂಜುನಾಥ ಗಾಣಿಗೇರ,ಹಿರಿಯ ಮುಖಂಡರಾದ ಟಿ.ಅಯ್ಯಪ್ಪ,ವಿರೇಶ ದೇವರಗುಡಿ,ವೀರಭದ್ರಪ್ಪ ಹಂಚಿನಾಳ, ಸಿದ್ರಾಮೇಶ ಮನ್ನಾಪುರ,ಯಂಕೋಬ ರಾಮತ್ನಾಳ,ಸೋಮಣ್ಣ ಪತ್ತಾರ, ರವೀಂದ್ರ ಗದ್ರಟಗಿ,ಮಂಜುನಾಥ ಬಡಿಗೇರ,ಅಂಬಣ್ಣ ಗೊರೇಬಾಳ, ಮೌನೇಶ ಸಲ್ವಾಡಗಿ,ನಾಗರಾಜ ಆಚಾರಿ,ಗಣೇಶ,ವಿರೇಶ ಚನ್ನಳ್ಳಿ, ಮುತ್ತಣ್ಣ,ರಾಜು ಬಳಗಾನೂರ, ಬಸವರಾಜ ಕಮತಗಿ,ಚನ್ನಪ್ಪ ಕೆ. ಹೊಸಹಳ್ಳಿ,ಗಂಗಾಧರ ಪೆಂಟರ್. ಬಸವರಾಜ ಟೈಲರ್,ಪ್ರಭು ದೇವರಗುಡಿ ಉಪೇಂದ್ರ ಆಚಾರಿ,ಪಂಪಣ್ಣ ಕಲಮಂಗಿ,ಮಂಜುನಾಥ್ ನಿಡಿಗೋಳ, ಷಣ್ಮುಖಪ್ಪ ಪತ್ತಾರ,ಪ್ರಸನ್ನ ಪತ್ತಾರ, ಮೌನೇಶ ತುರವಿಹಾಳ, ರವಿಕುಮಾರ ಕಟಿಂಗ್,ಬದ್ರಿ ಅಲಬನೂರು ಇನ್ನೂ ಹಲವಾರು ಸಮಾಜದ ಮುಖಂಡರುಗಳು ಇದ್ದರು.