ಬೂದಿಹಾಳ ತಾಂಡಾದ ಶಿಕ್ಷಕರು ಶಾಲೆಗೆ ಚಕ್ಕರ್ – ಸಂಬಳಕ್ಕೆ ಹಾಜರ್.
ಹೂವಿನ ಹಿಪ್ಪರಗಿ ಸ.20





ಬಸವನ ಬಾಗೇವಾಡಿ ತಾಲೂಕಿನ ಬೂದಿಹಾಳ ಎಲ್.ಟಿ ನಂಬರ್ ೨ ರಲ್ಲಿ ಬರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು ಅಡಗಿಯ ಸಿಬ್ಬಂದಿಗಳು ಶಾಲೆಗೆ ಚಕ್ಕರ್ ಸಂಬಳಕ್ಕೆ ಹಾಜರ್ ಅನ್ನುವ ಹಾಗೆ ದಿನಾಂಕ 0೯/0೯/೨0೨೫ ರಂದು ಮಂಗಳವಾರ ದಿನ ಶಾಲೆಗೆ ಚಕ್ಕರ್ ಹಾಕಿದ್ದಲ್ಲದೆ ದೇವರ ಹಿಪ್ಪರಗಿ ಮತ ಕ್ಷೇತ್ರದ ಶಾಸಕರಾದ ರಾಜುಗೌಡ ಕುದರಿ ಸಾಲವಾಡಗಿ ಅವರು ರಾಮನಟ್ಟಿ ಗ್ರಾಮದಲ್ಲಿ ಕುದರಿ ಸಾಲವಾಡಗಿ ಇಂದ ರಾಮನಟ್ಟಿ ಕ್ರಾಸ್ ವರೆಗೆ ರಸ್ತೆ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದರು ಈ ರಸ್ತೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಶಿಕ್ಷಕರು ಭಾಗವಹಿಸಿದ್ದರು. ಬೂದಿಹಾಳ ತಾಂಡಾದ ಶಿಕ್ಷಕರು ಕರ್ತವ್ಯದ ಅರಿವು ಇಲ್ಲದೆ ಮಕ್ಕಳ ಬಗ್ಗೆ ಸ್ವಲ್ಪನೂ ಕಾಳಜಿ ಇಲ್ಲದೆ.

ಮಕ್ಕಳನ್ನು ಶಾಲೆಯಲ್ಲಿ ಬಿಟ್ಟು ಹೋಗುವುದು ಎಷ್ಟರ ಮಟ್ಟಿಗೆ ಸರಿ ಎಂದು ಶಿಕ್ಷಣ ಪ್ರೇಮಿಗಳಾದ ಹಾಗೂ ಸಮಾಜ ಸೇವೆಯಲ್ಲಿ ಮುಂಚೂಣಿ ಯಲ್ಲಿರುವಂತ ಜಯ ಕರ್ನಾಟಕ ಸಂಘಟನೆಯವರು ಬಸವನ ಬಾಗೇವಾಡಿ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದಂತಹ ವಸಂತ್ ರಾಥೋಡ ಸರ್ ಅವರಿಗೆ ಕೇಳಿದಾಗ ಅವರು ಲಿಖಿತವಾಗಿ ನಮಗೆ ಮನವಿ ಸಲ್ಲಿಸಿದರೆ ನಾನು ಅಂತಹ ಶಿಕ್ಷಕರ ಮೇಲೆ ಕಾನೂನು ಕ್ರಮ ತೆಗೆದು ಕೊಳ್ಳುತ್ತೇನೆ ಎಂದು ಹೇಳಿರುತ್ತಾರೆ. ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾತಿಗೆ ಬೆಲೆ ಕೊಟ್ಟು ಜಯ ಕರ್ನಾಟಕ ಸಂಘಟನೆಯವರು ದಿನಾಂಕ ೧೨/೦೯/೨೦೨೫ ರಂದು ಶುಕ್ರವಾರ ೧೨:೦೦ ಗಂಟೆಗೆ ಲಿಖಿತವಾಗಿ ಮನವಿ ಸಲ್ಲಿಸಿರುತ್ತಾರೆ ಮನವಿ ಸಲ್ಲಿಸಿದ ಏಳೆಂಟು ದಿನಗಳ ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಫೋನ್ ಮುಖಾಂತರ ಕೇಳಿದಾಗ ನೋಡಿ ಸ್ವಾಮಿ ಶಾಲೆಗೆ ರಜೆ ಇದೆ ಇದಲ್ಲದೆ ಜಾತಿಗಣತಿ ಕಾರ್ಯಕ್ರಮ ಇರುವುದ ರಿಂದ ಶಾಲೆ ಪ್ರಾರಂಭ ಆಗುವವರೆಗೆ ಯಾವುದೇ ರೀತಿ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಉಡಾಫೆ ಉತ್ತರ ಕೊಟ್ಟಿರುತ್ತಾರೆ ಎಂದು ಜಯ ಕರ್ನಾಟಕ ಸಂಘಟನೆಯವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲೆ ಆರೋಪ ಮಾಡಿರುತ್ತಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಕರು ಕೂಡಿ ಕೊಂಡು ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಜಯ ಕರ್ನಾಟಕ ಸಂಘಟನೆ ಅವರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಶರಣು ಹೂಗಾರ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಹಳ್ಳಿ. ಮಹೇಶ್ ನಾವಿ. ಬೀರಪ್ಪ ತಡಲಗಿ ಆನಂದ್ ರಾಥೋಡ್. ನಂಜುಂಡೇಶ್ವರ.ಪ್ರಹ್ಲಾದ್ ಬಡಿಗೇರ್ ಸುನಿಲ್ ಹೂಗಾರ ಹಾಗೂ ಜಯ ಕರ್ನಾಟಕ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ನಿಂಗಪ್ಪ. ಗೊರಗುಂಡಗಿ.ಬಸವನ ಬಾಗೇವಾಡಿ