ರಡ್ಡಿ ಸಿರಿ ಬ್ಯಾಂಕ್ 73.54 ಲಕ್ಷ ಲಾಭ – ವಿರುಪಾಕ್ಷಪ್ಪ ಮುರಾಳ.
ಇಲಕಲ್ಲ ಸ.21





ಇಲ್ಲಿನ ಎಸ್,ವಿ,ಎಮ್ ಕಾಲೇಜ್ ಕಾಂಪ್ಲೆಕ್ಸ್ ನಲ್ಲಿರುವ ರಡ್ಡಿ ಸಿರಿ ಬ್ಯಾಂಕ್ ನ ಏಳನೆಯ ವಾರ್ಷಿಕ ಸರ್ವ ಸಾಧಾರಣ ಸಭೆ ಜರಗಿತು. ರಡ್ಡಿ ಸಿರಿ ಬ್ಯಾಂಕ್ ಪ್ರಾರಂಭವಾಗಿ ಏಳು ವರ್ಷದಲ್ಲಿ ಶೇರುದಾರರ ಸಹಕಾರ ಸಿಬ್ಬಂದಿಯವರ ಶ್ರಮದಿಂದ 73.54 ಲಕ್ಷ ರೂಪಾಯಿ ಲಾಭಗಳಿಸಿದ್ದು ಸಹಕಾರಿ ಸೌಹಾರ್ದ ಬ್ಯಾಂಕುಗಳ ಅಭಿವೃದ್ಧಿಗೆ ಶೇರುದಾರರ ಸಹಕಾರವೇ ಮುಖ್ಯ ಕಾರಣವಾಗಿರುತ್ತದೆ.

ಆಡಳಿತ ಮಂಡಳಿಯವರ ಮೇಲೆ ವಿಶ್ವಾಸ ಇಟ್ಟು ಬ್ಯಾಂಕಿಗೆ ಬರುವ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಿದರೆ ಮಾತ್ರ ಬ್ಯಾಂಕುಗಳ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಆಡಳಿತಾಧಿಕಾರಿ ವಿರುಪಾಕ್ಷಪ್ಪ ಮುರಾಳ ಹೇಳಿದರು.


ಸರ್ವ ಸಾಧಾರಣ ಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀದೇವಿ. ಅಮರೇಶ, ಕರಡದಾಳ. ಉಪಾಧ್ಯಕ್ಷ ಮಲ್ಲಿಕಾರ್ಜುನ.ಬಿ ಪಾಟೀಲ್ (ರಾಂಪೂರ) ಸದಸ್ಯರಾದ ರಾಜಶೇಖರ ಶಿವನಗೌಡ ಪಾಟೀಲ್. ದೇವರಡ್ಡೇಪ್ಪ ನರಸನಗೌಡ ಚಳಗೇರಿ. ಸಂಗಣ್ಣ ಶಂಕ್ರಪ್ಪ ಹವಾಲ್ದಾರ. ಬಸವರಾಜ ಸಂಗನಗೌಡ ಕರಬಸಪ್ಪನವರ. ಸಂಗನಗೌಡ ಮಹಾಂತಗೌಡ ಗೌಡರ. ಮಲ್ಲಪ್ಪ ಮಾಹಾಂತಪ್ಪ ಬಿಸರಡ್ಡಿ. ಶಶಿಧರ ಮಾಹಾಂತಪ್ಪ ಗೆಜ್ಜಲಗಟ್ಟಿ. ಗೋಪಾಲ್ ಗಿರಿಯಪ್ಪ,ಡಗೆ. ಗಂಗಾದೇವಿ ತಿಮ್ಮನಗೌಡ ಮಾಲಿಪಾಟೀಲ್. ಮುತ್ತಣ್ಣ ಚಂದಪ್ಪ ರಾಮದುರ್ಗ. ಅಮರೇಶ್ ಮಾಹಾಂತಪ್ಪ ಕರಡದಾಳ. ವೇದಿಕೆ ಮೇಲೆ ಇದ್ದರು.

ನೂರಾರು ಜನತೆಯ ಶೇರುದಾರರು ಸರ್ವ ಸಾಧಾರಣ ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಗೆ ಆಗಮಿಸಿದ ಸರ್ವ ಶೇರುದಾರರಿಗೂ ಆಲ್ಫೋಪಾರ ಮತ್ತು ಊಟದ ವ್ಯವಸ್ಥೆಯನ್ನು ಮಾಡಿದ್ದರು. ಗೋಪಾಲ್ ಡಗೆ ಸ್ವಾಗತಿಸಿದರು ವಿಜಯ ಕರಬಸಪ್ಪನವರು ಕಾರ್ಯಕ್ರಮ ನಿರೂಪಿಸಿದರು.