ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು – ಜನರಲ್ಲಿ ಪ್ರವಾಹದ ಭೀತಿ.
ಆಲಮೇಲ ಸ.23




ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಮಳೆ ಇರುವದರಿಂದ ವಿಜಯಪುರ ಜಿಲ್ಲೆಯ ಇಂಡಿ ಆಲಮೇಲ ತಾಲೂಕಿನಲ್ಲಿ ಹರಿಯುವ ಭೀಮಾ ನದಿಯ ದಂಡಿಯಲ್ಲಿರುವ ಜನರಲ್ಲಿ ಪ್ರವಾಹದ ಭೀತಿನಲ್ಲಿ ಜನರು ಕಾಲ ಕಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.ಮಹಾರಾಷ್ಟ್ರದೊಂದಿಗೆ ಮಾತನಾಡಿದ್ದೆ, ಪ್ರಸ್ತುತ ಸಿನಾ ಅಣೆಕಟ್ಟಿನಿಂದ ಸುಮಾರು 1.50 ಲಕ್ಷ ಕ್ಯೂಸೆಕ್ ನೀರು ಮತ್ತು ಉಜಿನಿ ಅಣೆಕಟ್ಟಿನಿಂದ 53000 ಕ್ಯೂಸೆಕ್ ನೀರು ಬಿಡುಗಡೆ ಯಾಗುತ್ತಿದೆ, ಒಟ್ಟಾರೆಯಾಗಿ ನಮಗೆ ಮಹಾರಾಷ್ಟ್ರ ಮತ್ತು ಕರ್ನಾಟಕದ ಜಲಾನಯನ ಪ್ರದೇಶದಿಂದ ಸುಮಾರು 2.05 ಲಕ್ಷ ನೀರು ಸಿಗುತ್ತಿದೆ, ಆದ್ದರಿಂದ ದಯವಿಟ್ಟು ಭೀಮಾ ನದಿಯ ಮೂಲಕ ಸುಮಾರು 2.50 ಲಕ್ಷ ಕ್ಯೂಸೆಕ್ ನೀರು ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಪರಿಗಣಿಸಿ, ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು.ಮನೋಜ್ ಕುಮಾರ್ ಎಸ್.ಇ ತಿಳಿಸಿದರು ಭೀಮಾ ನದಿ ಪ್ರವಾಹಕ್ಕೆ ಒಳಗಾಗುವ ಗ್ರಾಮಗಳಿಗೆ ಆಲಮೇಲ ತಾಲೂಕ ತಹಶೀಲ್ದಾರ್ ಧನಪಾಲ ಶೆಟ್ಟಿ ತಾರಾಪೂರ ತಾವರಖೇಡ ಮದನಹಳ್ಳಿ ಬ್ಯಾಡಿಗಿ ಹಾಳ ದೇವಣಗಾಂವ ಕಡ್ಲೆವಾಡ ಶಂಬೇವಾಡ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ನದಿಯ ದಂಡಿಗೆ ಮಹಿಳೆಯರು ಮಕ್ಕಳು ದನಕರುಗಳನ್ನು ಮೇಯಿಸಲು ನದಿಯ ದಂಡಿಗೆ ಹೋಗಬಾರ ದೆಂದು ತಿಳಿಸಿದರು.

ಹಾಗೂ ರೈತರು ನದಿಯ ದಂಡೆಯಲ್ಲಿರುವ ಪಂಪ್ ಸೆಟ್ ಗಳು ತೆಗೆಯಬೇಕೆಂದು ತಿಳಿಸಿದರು ಹಾಗೂ ಹಳೆತಾರಾಪುರ ಗ್ರಾಮದಲ್ಲಿ ಇನ್ನೂ 15 ರಿಂದ 20 ಕುಟುಂಬಸ್ಥರು ಇದ್ದು ಅವರನ್ನು ಕೂಡಲೆ ಪುನರ್ವಸತಿಗೆ ಹೋಗಬೇಕೆಂದು ತಿಳಿಸಿದರು ಗ್ರಾಮ ಲೆಕ್ಕಾಧಿಕಾರಿಯಾದ ಯಮನೂರ ಗೋಂದಳ್ಳಿ ಮಲ್ಲಿಕಾರ್ಜುನ ಬಿರಾದಾರ ಮುದಿಗೌಡ ಬಿರಾದಾರ ಶಂಕರಗೌಡ ಪಾಟೀಲ ಸಮರ್ಥ ಜೋಗುರ ಚಂದ್ರಕಾಂತ್ ಬಿರಾದಾರ ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವನಸಿದ್ದಯ್ಯ.ಜಿ.ಹಿರೇಮಠ ಆಲಮೇಲ