ನಾಡ ಹಬ್ಬ ನವರಾತ್ರಿ ಅಂಗವಾಗಿ ಶ್ರೀ ದುರ್ಗಾ ದೇವಿ – ಮೂರ್ತಿಯ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿತು.
ಕಡಣಿ ಸ.23





ಆಲಮೇಲ ತಾಲೂಕಿನ ಸುಕ್ಷೇತ್ರ ಕಡಣಿ ಗ್ರಾಮದಲ್ಲಿ ಸೋಮವಾರ ನಾಡ ಹಬ್ಬ ನವರಾತ್ರಿ ಅಂಗವಾಗಿ ಶ್ರೀ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು ಪ್ರತಿ ವರ್ಷ ನಡೆದು ಕೊಂಡು ಬರುವ ನಾಡ ದೇವಿ ಉತ್ಸವ ಶ್ರೀ ಲಕ್ಷ್ಮೀದೇವಿ ದೇವಸ್ಥಾನ ದಿಂದ ಮೆರವಣಿಗೆ ಮಾಡುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಶ್ರೀ ಲಕ್ಷ್ಮಿ ದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಮೆರವಣಿಗೆಯಲ್ಲಿ ಸುಮಂಗಲಿಯರು ಆರತಿ ಸೇವೆ, ವಿವಿಧ ಜಾನಪದ ಕಲಾ ತಂಡಗಳಾದ ಡೊಳ್ಳು ಕುಣಿತ, ವೀರ ಗಾಸೆ, ಜೋಗತಿಯರ ಕುಣಿತ, ಸಕಲ ವಾದ್ಯ ಮೇಳದೊಂದಿಗೆ ಭಾಜ ಬಜಂತ್ರಿಗಳ ಸೊಬಗು ತುಂಬಿತ್ತು,ದೇವಿ ಮೂರ್ತಿ ಮೆರವಣಿಗೆ ನೆರವೇರಿತು.ಶೈಲಪುತ್ರಿ ದೇವಿ ಮೊದಲನೆಯ ಅವತಾರ ಎನ್ನುವ ದೇವಿ ಪ್ರತಿಷ್ಠಾಪನೆ ಗೊಂಡು 9 ದಿನಗಳ ಜೀವಿ ಪ್ರತಿಷ್ಠಾಪನೆಯ ಭಕ್ತಿ ಭಾವ ಕಾರ್ಯಕ್ರಮಗಳಾದ ಜಾನಪದ ಜಾತ್ರೆ, ಗಂಗಾ ಆರತಿ, ಗೊಂದಲಿ ಸಮಾಜದವ ರಿಂದ ಗೊಂದಲ ಕಾರ್ಯಕ್ರಮ, ಖ್ಯಾತ ಸಂಗೀತಗಾರರಾದ ಯಶವಂತ್ ಬಡಿಗೇರ್ ಅವರಿಂದ ಸಂಗೀತ ಕಾರ್ಯಕ್ರಮ, ವಿವಿಧ ತಂಡಗಳ ಕೋಲಾಟ ಪ್ರತಿ ದಿನವೂ ಒಂದೊಂದು ಕಾರ್ಯಕ್ರಮಗಳು ಜರುಗಲಿದ್ದು. ಸುಮಂಗಲ ದಿಂದ ಕುಂಭ ಕಳಸ ಭವ್ಯ ಕಾರ್ಯಕ್ರಮಗಳೊಂದಿಗೆ ಒಂಬತ್ತು ದಿನಗಳ ವರೆಗೆ ಕಡಣಿ ಗ್ರಾಮದ ಶ್ರೀ ದೇವಿ ಕಮೀಟಿಯ ಸರ್ವ ಸದಸ್ಯರುಗಳ ಸಹಯೋಗದಲ್ಲಿ ನಡೆಯುತ್ತವೆ. ಭಕ್ತಾದಿಗಳಿಗೆ ಅನ್ನ ಪ್ರಸಾದ ವ್ಯವಸ್ಥೆ ಇರುತ್ತದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಕಡಣಿ ಗ್ರಾಮದ ಹಾಗು ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಭಾಗವಹಿಸಿ ಜಗನ್ಮಾತೆ ಶ್ರೀದೇವಿ ಕೃಪಾಶೀರ್ವಾದ ಪಡೆದು ಪುನೀತರಾದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವನಸಿದ್ದಯ್ಯ.ಜಿ.ಹಿರೇಮಠ ಆಲಮೇಲ